ತಮಗೆ ಚಂಡೀಗಡ ಏರ್‌ಪೋರ್ಟ್‌ನಲ್ಲಿ ಕಪಾಳಮೋಕ್ಷ ಮಾಡಿದ ಸಿಐಎಸ್‌ಎಫ್ ಮಹಿಳಾ ಪೇದೆ ಕುಲ್ವಿಂದರ್ ಕೌರ್ ಅವರನ್ನು ಬೆಂಬಲಿಸುತ್ತಿರುವ ಜನರು, ಗಣ್ಯರು ಹಾಗೂ ರೈತ ಸಂಘಟನೆಗಳ ವಿರುದ್ಧ ಬಿಜೆಪಿ ಸಂಸದೆ ಹಾಗೂ ನಟಿ ಕಂಗನಾ ರಾಣಾವತ್ ತಿರುಗಿಬಿದ್ದಿದ್ದಾರೆ
ನವದೆಹಲಿ (ಜೂ.9): ತಮಗೆ ಚಂಡೀಗಡ ಏರ್‌ಪೋರ್ಟ್‌ನಲ್ಲಿ ಕಪಾಳಮೋಕ್ಷ ಮಾಡಿದ ಸಿಐಎಸ್‌ಎಫ್ ಮಹಿಳಾ ಪೇದೆ ಕುಲ್ವಿಂದರ್ ಕೌರ್ ಅವರನ್ನು ಬೆಂಬಲಿಸುತ್ತಿರುವ ಜನರು, ಗಣ್ಯರು ಹಾಗೂ ರೈತ ಸಂಘಟನೆಗಳ ವಿರುದ್ಧ ಬಿಜೆಪಿ ಸಂಸದೆ ಹಾಗೂ ನಟಿ ಕಂಗನಾ ರಾಣಾವತ್ ತಿರುಗಿಬಿದ್ದಿದ್ದಾರೆ. ‘ಒಬ್ಬ ವ್ಯಕ್ತಿಯ ಮೇಲೆ ಮತ್ಸರವಿದೆಯೆಂದು ಆಕೆಯ ಮೇಲೆ ಅತ್ಯಾಚಾರ ಮಾಡಿದರೂ ಸರಿಯೇ?‘ ಎಂದು ಕಟುವಾಗಿ ಪ್ರಶ್ನಿಸಿದ್ದಾರೆ.
ಟ್ವೀಟ್ ಮಾಡಿರುವ ಕಂಗನಾ, ‘ಒಬ್ಬ ವ್ಯಕ್ತಿ ಕಾರಣವಿಲ್ಲದೆ ಯಾವ ಅಪರಾಧವನ್ನೂ ಮಾಡುವುದಿಲ್ಲ. ಹಾಗಾಗಿಯೇ ಅವರಿಗೆ ನ್ಯಾಯಾಲಯ ಶಿಕ್ಷಿಸುತ್ತದೆ. ಒಬ್ಬ ವ್ಯಕ್ತಿಯ ಮೇಲೆ ಆಕ್ರೋಶವಿದೆಯೆಂದು ಕಾನೂನು ಉಲ್ಲಂಘಿಸಿ ಹಲ್ಲೆ ಮಾಡುವುದು ಸರಿ ಎಂದಾದಲ್ಲಿ ಅತ್ಯಾಚಾರ ಮಾಡುವುದೂ ಸರಿಯೇ? ಅದೂ ಸಹ ಕೇವಲ ದೌರ್ಜನ್ಯದ ಮತ್ತೊಂದು ರೂಪವಷ್ಟೇ ಎಂದರೆ ಸರಿಯೇ?’ ಎಂದು ವಾಗ್ದಾಳಿ ನಡೆಸಿದ್ದಾರೆ.
undefined
'ಮೋದಿ ಪ್ರಮಾಣ ವಚನಕ್ಕೆ ನಾನು ಹೋಗೊಲ್ಲ' ಮಮತಾ ಬ್ಯಾನರ್ಜಿ ಬಹಿಷ್ಕಾರ!
ಕೃಷಿ ಕಾಯ್ದೆ ವಿರುದ್ಧ ಕೆಲವು ವರ್ಷಗಳ ಹಿಂದೆ ಧರಣಿ ನಡೆಸಿದವರನ್ನು ಕಂಗನಾ ‘ಕೃಷಿ ಕಾಯ್ದೆ ವಿರುದ್ಧ ಹೋರಾಡಿದ ರೈತರು ನಿಜವಾದ ರೈತರಲ್ಲ. ದಿನಕ್ಕೆ 100 ರು. ಹಣ ನೀಡಿ ಅವರನ್ನು ಕರೆತರಲಾಗಿತ್ತು’ ಎಂದು ಈ ಹಿಂದೆ ಕಂಗನಾ ಹೇಳಿದ್ದರು. ಇದರಿಂದ ಕುಪಿತಳಾಗಿದ್ದ ಪೇದೆ ಕುಲ್ವಿಂದರ್ ಕೌರ್, ‘ನನ್ನ ಅಮ್ಮನೂ ಪ್ರತಿಭಟನೆಗೆ ಹೋಗಿದ್ದಳು. ಆಕೆ ನಯಾಪೈಸೆ ಪಡೆದಿರಲಿಲ್ಲ’ ಎಂದು ಕಿಡಿಕಾರಿ ಕಂಗನಾ ಕಪಾಳಕ್ಕೆ ಬಾರಿಸಿದ್ದಳು.
ಪ್ರಧಾನಿಯಾಗಿ ಮೋದಿ ಪುನರಾಯ್ಕೆ; ವಿಶ್ವದ ಶ್ರೀಮಂತ ಉದ್ಯಮಿ ಎಲಾನ್ ಮಸ್ಕ್ ಶುಭಾಶಯ
Every rapist, murderer or thief always have a strong emotional, physical, psychological or financial reason to commit a crime, no crime ever happens without a reason, yet they are convicted and sentenced to jail.
If you are aligned with the criminals strong emotional impulse to…