
ಪಿಟಿಐ ನವದೆಹಲಿ: ‘ಮೋದಿಗೆ ಪರಿವಾರವೇ ಇಲ್ಲ’ (ಮೋದಿ ಸಂಸಾರಸ್ಥ ಅಲ್ಲ) ಎಂಬ ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಟೀಕೆ ವಿರುದ್ಧ ಸಿಡಿದೆದ್ದಿರುವ ಬಿಜೆಪಿ ನಾಯಕರು ತಮ್ಮ ನಾಯಕನ ನೆರವಿಗೆ ಧಾವಿಸಿದ್ದಾರೆ. ಬಹುತೇಕ ಬಿಜೆಪಿ ನಾಯಕರು ಸೋಮವಾರ ತಮ್ಮ ಸಾಮಾಜಿಕ ಮಾಧ್ಯಮ ಪ್ರೊಫೈಲ್‌ಗಳಲ್ಲಿ ‘ಮೋದಿ ಕಾ ಪರಿವಾರ್’ ಎಂದು ಪ್ರತ್ಯಯ ಹಾಕಿದ್ದಾರೆ. ವಿಪಕ್ಷಗಳ ಟೀಕೆಯನ್ನೇ ಚುನಾವಣೆ ಅಸ್ತ್ರ ಮಾಡಿಕೊಳ್ಳುವ ಬಿಜೆಪಿ ನಾಯಕರೂ ಈ ಬಾರಿಯೂ ಅದನ್ನೇ ಆರ್‌ಜೆಡಿ ನಾಯಕನ ವಿರುದ್ಧ ಅಸ್ತ್ರ ಮಾಡಿಕೊಂಡಿದ್ದಾರೆ.
ಕೇಂದ್ರ ಸಚಿವರಾದ ಅಮಿತ್ ಶಾ, ರಾಜನಾಥ್ ಸಿಂಗ್, ನಿತಿನ್ ಗಡ್ಕರಿ, ನಿರ್ಮಲಾ ಸೀತಾರಾಮನ್, ಬಿಜೆಪಿ ಮುಖ್ಯಸ್ಥ ಜೆಪಿ ನಡ್ಡಾ, ಕರ್ನಾಟಕ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆದಿಯಾಗಿ ಅನೇಕರು ಟ್ವೀಟರ್ ಸೇರಿದಂತೆ ತಮ್ಮ ಸಾಮಾಜಿಕ ಮಾಧ್ಯಮ ಖಾತೆಗಳಲ್ಲಿ ತಮ್ಮನ್ನು ತಾವು ‘ಮೋದಿ ಕಾ ಪರಿವಾರ್’ (ಮೋದಿ ಅವರ ಕುಟುಂಬ) ಎಂದು ಘೋಷಿಸಿಕೊಂಡಿದ್ದಾರೆ. ಅನೇಕ ಮೋದಿ ಬೆಂಬಲಿತ ಸಾಮಾಜಿಕ ಮಾಧ್ಯಮ ಬಳಕೆದಾರರು ತಮ್ಮ ಪುಟಗಳಲ್ಲಿ ಅದೇ ಬದಲಾವಣೆಯನ್ನು ಮಾಡಿದ್ದಾರೆ.
ಫಾಸ್ಟ್ ರಿಯಾಕ್ಟರ್ ಹೊಂದಿದ ವಿಶ್ವದ 2ನೇ ದೇಶ ಭಾರತ, ಕೋರ್ ಲೋಡಿಂಗ್‌ಗೆ ಮೋದಿ ಚಾಲನೆ!
ಬಿಜೆಪಿ ರಾಷ್ಟ್ರೀಯ ವಕ್ತಾರ ಸುಧಾಂಶು ತ್ರಿವೇದಿ ಸುದ್ದಿಗಾರರೊಂದಿಗೆ ಮಾತನಾಡಿ, ಕಳೆದ 16-17 ವರ್ಷಗಳಿಂದ ಮೋದಿ ವಿರುದ್ಧ ವಿಪಕ್ಷಗಳು ವೈಯಕ್ತಿಕ ದಾಳಿಗಳನ್ನು ನಡೆಸುತ್ತಿವೆ. ಈ ನಡುವೆ ಭಾನುವಾರ ಪಟನಾದಲ್ಲಿ ನಡೆದ ಸಮಾವೇಶದಲ್ಲಿ ಮತ್ತೊಮ್ಮೆ ಮೋದಿ ವಿರುದ್ಧ ಇಂತಹ ಕ್ಷುಲ್ಲಕ ಟೀಕೆಗಳನ್ನು ಲಾಲು ಮಾಡಿದ್ದಾರೆ. ಇದು ದುಃಖಕರ ಮತ್ತು ನೋವಿನ ಸಂಗತಿ’ ಎಂದು ಕಿಡಿಕಾರಿದರು. ಅವರು (ಯಾದವ್) ಮೋದಿ ಕುಟುಂಬದ ಬಗ್ಗೆ ಮಾತನಾಡಿದ್ದಾರೆ. ಪ್ರಧಾನಿ ಮೋದಿಗೆ ಇಡೀ ದೇಶವೇ ಅವರ ಕುಟುಂಬ ಎಂಬುದನ್ನು ನಾನು ಲಾಲುಗೆ ನೆನಪಿಸಲು ಬಯಸುತ್ತೇನೆ ಎಂದು ತ್ರಿವೇದಿ ಹೇಳಿದರು.
ಪ್ರಧಾನಿ ಮೋದಿಗೆ ಖಡ್ಗದಿಂದ ಕೊಲೆ ಬೆದರಿಕೆ ಹಾಕಿದ ಮೊಹಮ್ಮದ್ ರಸೂಲ್; ಕೇಸ್ ದಾಖಲಾಗುತ್ತಿದ್ದಂತೆ ಪರಾರಿ!
ಕಳೆದ 2019ರ ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೆಸ್ ನಾಯಕರು ಮೋದಿ ಅವರನ್ನು ಚೌಕಿದಾರ್ ಚೋರ್ ಹೈ (ಕಾವಲುಗಾರನೇ ಕಳ್ಳ) ಎಂದಿದ್ದರು. ಆಗ ಬಿಜೆಪಿಗರು ಮೈ ಭೀ ಚೌಕಿದಾರ್’ ಆಂದೋಲನ ಆರಂಭಿಸಿದ್ದರು. ಇನ್ನು 2014ರಲ್ಲಿ ಕಾಂಗ್ರೆಸ್ಸಿಗರು ಮೋದಿ ಚಿಕ್ಕವರಿದ್ದಾಗ ಮಾಡುತ್ತಿದ್ದ ಚಹಾ ವ್ಯಾಪಾರ ವೃತ್ತಿ ಟೀಕಸಿದಾಗ, ಮೋದಿ ‘ಚಾಯ್ ಪೇ ಚರ್ಚಾ’ ಆರಂಭಿಸಿ ತಿರುಗೇಟು ನೀಡಿದ್ದರು.
ಆಗಷ್ಟೆ ಹುಟ್ಟಿದ ಮಕ್ಕಳ ನೋಡದೇ ಪ್ರಧಾನಿ ಸ್ವಾಗತಿಸಲು ಆಗಮಿಸಿದ ಕಾರ್ಯಕರ್ತ, ಮೋದಿ ಭಾವುಕ!
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ