ರಾಜಕೀಯ ನಷ್ಟವಾದರೂ ಚಿಂತೆಯಿಲ್ಲ, ನಮ್ಮಿಂದ ಜನೋಪಯೋಗಿ ನಿರ್ಧಾರ: ಶಾ

By Kannadaprabha NewsFirst Published Dec 26, 2021, 4:30 AM IST
Highlights

* ಮೋದಿ ಎಂದೂ ವೋಟ್‌ಬ್ಯಾಂಕ್‌ ಆಡಳಿತ ನಡೆಸಿಲ್ಲ

* ಜನರ ಮೆಚ್ಚಿಸುವ ಬದಲು ಜನರಿಗೆ ಉತ್ತಮ ನಿರ್ಧಾರ

* ರಾಜಕೀಯ ನಷ್ಟವಾದರೂ ಚಿಂತೆಯಿಲ್ಲ, ನಮ್ಮಿಂದ ಜನೋಪಯೋಗಿ ನಿರ್ಧಾರ: ಶಾ

ನವದೆಹಲಿ(ಡಿ.,26): ಜನರನ್ನು ಮೆಚ್ಚಿಸುವಂತ ವೋಟ್‌ ಬ್ಯಾಂಕ್‌ ಆಡಳಿತವನ್ನು ಪ್ರಧಾನಿ ನರೇಂದ್ರ ಮೋದಿ ಎಂದೂ ಕೈಗೊಳ್ಳಲಿಲ್ಲ ಎಂದು ಮೆಚ್ಚುಗೆ ವ್ಯಕ್ತಪಡಿಸಿರುವ ಕೇಂದ್ರ ಗೃಹ ಸಚಿವ ಅಮಿತ್‌ ಶಾ, ಪ್ರತಿಭಟನೆಗೆ ಆಹ್ವಾನ ನೀಡಿದರೂ, ರಾಜಕೀಯವಾಗಿ ಹಾನಿ ಸಾಧ್ಯತೆ ಇದ್ದರೂ ಜನರಿಗೆ ಯಾವುದು ಒಳ್ಳೆಯದೇ ಅಂಥ ನಿರ್ಧಾರವನ್ನು ಮಾತ್ರ ಕೈಗೊಂಡಿದ್ದಾರೆ ಎಂದು ಹೇಳಿದ್ದಾರೆ.

ಇಲ್ಲಿ ಆಯೋಜಿಸಲಾಗಿದ್ದ ‘ಉತ್ತಮ ಆಡಳಿತ ದಿನ’ ಕಾರ್ಯಕ್ರಮದಲ್ಲಿ ಮಾತನಾಡಿದ ಅಮಿತ್‌ ಶಾ, ‘ಈ ಹಿಂದಿನ ಸಂದರ್ಭದಲ್ಲಿ ಸರ್ಕಾರಗಳು ಒಂದಲ್ಲಾ ಒಂದು ಸಮಯದಲ್ಲಿ ವೋಟ್‌ ಬ್ಯಾಂಕ್‌ ಅನ್ನು ಗಮನದಲ್ಲಿಟ್ಟುಕೊಂಡೇ ನಿರ್ಧಾರಗಳನ್ನು ಕೈಗೊಳ್ಳುತ್ತಿದ್ದವು. ಆದರೆ ಮೋದಿ ಅಥವಾ ಮೋದಿ ಸರ್ಕಾರ, ಕೇವಲ ಜನರನ್ನು ಮೆಚ್ಚಿಸುವ ಏಕೈಕ ಉದ್ದೇಶದಿಂದ ಯಾವುದೇ ನಿರ್ಧಾರ ಕೈಗೊಳ್ಳಲಿಲ್ಲ. ಜನರಿಗೆ ಯಾವುದು ಒಳ್ಳೆಯದೋ ಅಂಥ ನಿರ್ಧಾರಗಳನ್ನು ಮಾತ್ರವೇ ಮೋದಿ ತೆಗೆದುಕೊಂಡಿದ್ದಾರೆ’ ಎಂದರು.

‘ಈ ಎರಡೂ ವಿಷಯದಲ್ಲಿ ಭಾರೀ ವ್ಯತ್ಯಾಸವಿದೆ. ಜನರನ್ನು ಮೆಚ್ಚಿಸುವ ನಿರ್ಧಾರಗಳು ಅಲ್ಪ ಕಾಲದ ಜನಪ್ರಿಯತೆ ತಂದುಕೊಡಬಲ್ಲವು, ಆದರೆ ಅದೇ ಸಮಯದಲ್ಲಿ ಅವು ದೇಶಕ್ಕೆ ಅಪಾಯಕಾರಿಯಾಗಬಲ್ಲವು. ಆದರೆ ಮೋದಿ ಇನ್ನೊಂದು ಹಾದಿಯನ್ನೇ ಆಯ್ಕೆ ಮಾಡಿಕೊಂಡರು. ನಿರ್ಧಾರಗಳು ಕಹಿಯಾದರೂ, ಪ್ರತಿಭಟನೆಯನ್ನು ಆಹ್ವಾನಿಸುವಂತಿದ್ದರೂ, ರಾಜಕೀಯವಾಗಿ ಹಾನಿ ಮಾಡುವಂತಿದ್ದರೂ ಜನ ಮತ್ತು ದೇಶಕ್ಕೆ ಒಳ್ಳೆಯದಾಗುವ ನಿರ್ಧಾರಗಳನ್ನು ಮಾತ್ರವೇ ಕೈಗೊಂಡರು. ಉತ್ತಮ ಆಡಳಿತಕ್ಕೆ ಕಟಿಬದ್ಧವಾಗಿರುವ ವ್ಯಕ್ತಿಯೊಬ್ಬರು ಮಾತ್ರವೇ ಇಂಥ ನಿರ್ಧಾರ ಕೈಗೊಳ್ಳಬಲ್ಲರು’ ಎಂದು ಅವಿåತ್‌ ಶಾ ಮೆಚ್ಚುಗೆ ವ್ಯಕ್ತಪಡಿಸಿದರು.

click me!