ದೇಶಿಯ ತಳಿಗಳ ಅಭಿವೃದ್ಧಿಗೆ ಕೇಂದ್ರ ಸರ್ಕಾರದ ಹೆಜ್ಜೆ/ ಶ್ವಾನ ಮತ್ತು ಬೆಕ್ಕಿಗೆ ಹೊಸ ಮಾರುಕಟ್ಟೆ/ ಮನ್ ಕೀ ಬಾತ್ ನಲ್ಲಿ ಪ್ರಧಾನಿ ಉಲ್ಲೇಖ ಮಾಡಿದ್ದರು/ ಕೇಂದ್ರದ ಪಶುಸಂಗೋಪನಾ ಇಲಾಖೆಯ ತೀರ್ಮಾನ
ನವದೆಹಲಿ (ಏ. 12) ಮನ್ ಕೀ ಬಾತ್ ನಲ್ಲಿ ಪ್ರಧಾನಿ ನರೇಂದ್ರ ಮೋದು ದೇಸಿ ತಳಿಯ ಶ್ವಾನಗಳ ಮಹತ್ವವನ್ನು ಸಾರಿದ್ದರು. ದೇಸಿ ತಳಿಯ ಅತ್ಯುನ್ನತ ಶ್ವಾನಗಳ ಅಭಿವೃದ್ಧಿ ಪಡಿಸುವಿಕೆ ಮತ್ತು ಅವುಗಳನ್ನು ರಫ್ತು ಮಾಡುವಿಕೆಗೆ ಕೇಂದ್ರ ಸರ್ಕಾರ ಹೆಜ್ಜೆ ಇಡಲು ಮುಂದಾಗಿದೆ.
ಕೇಂದ್ರ ಸಚಿವ ಗಿರಿರಾಜ್ ಸಿಂಗ್ ಈ ಬಗ್ಗೆ ಸೂಚನೆ ಕೊಟ್ಟಿದ್ದಾರೆ. ಪಶುಸಂಗೋಪನೆ ಜವಾಬ್ದಾರಿ ಹೊತ್ತಿರುವ ಸಿಂಗ್ ಅಂಥದ್ದೊಂದು ಪ್ರಸ್ತಾಔನೆಗೆ ಸಿದ್ಧತೆ ಮಾಡಿಕೊಂಡಿದ್ದಾರೆ.
ಭಾರತೀಯ ತಳಿಗಳನ್ನು ಹೇಗೆ ಅಭಿವೃದ್ಧಿ ಮಾಡಬಹುದು ಎಂದು ಇಂಡಿಯನ್ ಕೌನಸ್ಇಲ್ ಆಫ್ ಅಗ್ರಿಕಲ್ಚರಲ್ ರೀಸರ್ಚ್ ಸಂಶೋಧನೆಯಲ್ಲಿ ತೊಡಗಿದೆ ಎಂದು ಮೋದಿ ಹೇಳಿದ್ದರು.
2021 ರ ಜನವರಿಯಲ್ಲಿ ಕ್ಯಾಬಿನೆಟ್ ಸಕ್ರೆಟರಿಗೆ ಮಾಹಿತಿ ನೀಡಲಾಗಿತ್ತು. ಮುಂದಿನ ಬಾರಿ ಮನೆಗೆ ನೀವು ನಾಯಿ ತರುತ್ತೀರಿ ಎಂದಾದರೆ ದೇಸಿ ತಳಿಯ ಶ್ವಾನವನ್ನೇ ತನ್ನಿ ಎಂದು ಮೋದಿ ಕೇಳಿಕೊಂಡಿದ್ದರು.
ಭಾರತೀಯ ಕೃಷಿ ಸಂಶೋಧನಾ ಮಂಡಳಿ (ಐಸಿಎಆರ್) ಹೇಳಿದಂತೆ ಪ್ರಸ್ತಾವನೆ ಸಿದ್ಧವಾಗಿದೆ. ಇನ್ನೊಂದು ಕಡೆ 2030 ರ ವೇಳೆಗೆ ರೇಬೀಸ್ ಅನ್ನು ನಿರ್ಮೂಲನೆ ಮಾಡುವ ಗುರಿಯನ್ನು ವಿಶ್ವಸಂಸ್ಥೆ ಹೇಳಿದೆ.
19 ನೇ ಜಾನುವಾರುಗಳ ಜನಗಣತಿಯ ಪ್ರಕಾರ (2012 ರ), ಭಾರತವು 11.67 ಮಿಲಿಯನ್ ಸಾಕು ನಾಯಿಗಳು ಮತ್ತು 17.13 ಮಿಲಿಯನ್ ಬೀದಿ ನಾಯಿಗಳನ್ನು ಹೊಂದಿದೆ, ಇದರಲ್ಲಿ ಹಲವಾರು ತಳಿಗಳಿದ್ದು ಅವುಗಳ ಪ್ರಾಮುಖ್ಯ ಅರಿಯುವ ಕೆಲಸವಾಗಬೇಕಿದೆ.
ದೇಶಿಯ ತಳಿಗಳಿಗೆ ಮಾರುಕಟ್ಟೆ ನಿರ್ಮಾಣ, ವಿದೇಶದಿಂದ ಆಮದಾಗುವ ತಳಿಗಳ ಬದಲು ನಮ್ಮಲ್ಲಿಯ ಶ್ವಾನಗಳ ಬಳಕೆ ಮಾಡಿಕೊಳ್ಳುವುದು ಮುಖ್ಯ ಉದ್ದೇಶ. ಶ್ವಾನ ಮತ್ತು ಬೆಕ್ಕಿಗೆ ಹೊಸ ರೀತಿಯ ಮಾರುಕಟ್ಟೆ ಕೆಲವೆ ದಿನಗಳಲ್ಲಿ ನಿರ್ಮಾಣ ಆಗಲಿದೆ.