NRC ಜಾರಿಯಾದರೂ ಗೂರ್ಖಾಗಳನ್ನು ಹೊರದಬ್ಬುವುದಿಲ್ಲ; ಸ್ಪಷ್ಟನೆ ನೀಡಿದ ಅಮಿತ್ ಶಾ!

By Suvarna NewsFirst Published Apr 12, 2021, 10:12 PM IST
Highlights

ಕೇಂದ್ರ ಸರ್ಕಾರದ NRC ಕಾಯ್ದೆ ಕುರಿತು ಪಶ್ಚಿಮ ಬಂಗಾಳದಲ್ಲಿ ಹರಡುತ್ತಿರುವ ಸುಳ್ಳು ಮಾಹಿತಿಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಸ್ಪಷ್ಟನೆ ನೀಡಿದ್ದಾರೆ. ಇದೇ ವೇಳೆ ಗೂರ್ಖಾ ಸಮುದಾಯದ ಅಭಿವೃದ್ಧಿಗೆ ಬಿಜೆಪಿ ಶ್ರಮಿಸಲಿದೇ ಹೊರತು, ಹೊರದಬ್ಬುವುದಿಲ್ಲ ಎಂದಿದ್ದಾರೆ. ಈ ಕುರಿತ ಹೆಚ್ಚಿನ ವಿವರ ಇಲ್ಲಿದೆ.
 

ಕಲಿಂಪಾಂಗ್(ಏ.12): ಪಶ್ಚಿಮ ಬಂಗಾಳದ ಗಡಿ ಭಾಗದಲ್ಲಿರುವ ಕಲಿಂಪಾಂಗ್‌ನಲ್ಲಿ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಕೇಂದ್ರ ಗೃಹ ಸಚಿವ ಅಮಿತ್ ಶಾ, ಕೇಂದ್ರದ NRC ಜಾರಿ ಕುರಿತ ತಪ್ಪು ಮಾಹಿತಿಗೆ ತೆರೆಳೆದಿದ್ದಾರೆ. NRC ಜಾರಿಗೆ ತರುವ ಯಾವುದೇ ನಿರ್ಧಾರ ಕೇಂದ್ರ ಸರ್ಕಾರದ ಮುಂದಿಲ್ಲ. ಒಂದು ವೇಳೆ NRC ಜಾರಿಯಾದರೂ ಗೂರ್ಖಾ ಸಮದಾಯವನ್ನು ಹೊರದಬ್ಬುವುದಿಲ್ಲ ಎಂದು ಅಮಿತ್ ಶಾ ಹೇಳಿದ್ದಾರೆ.

ಪುಟಾಣಿಗಳಲ್ಲಿ ಬಾಯಲ್ಲಿ ದೀದಿ..ಓ..ದೀದಿ ಟ್ರೆಂಡ್: ಬಂಗಾಳ ಚುನಾವಣೆ ಟೆನ್ಶನ್ ನಡುವೆ ಫನ್ನಿ ವಿಡಿಯೋ!

ತೃಣಮೂಲ ಕಾಂಗ್ರೆಸ್ ಗೂರ್ಖಾ ಸಮುದಾಯದ ಮೇಲೆ ಸವಾರಿ ಮಾಡಿದೆ. ಈ ಹಿಂದೆ ಸಿಪಿಎಂ 1,200ಕ್ಕೂ ಹೆಚ್ಚು ಗೂರ್ಖಾಗಳನ್ನು ಬಲಿಪಡೆದಿತ್ತು. ನಂತರ ಬಂದ ತೃಣಮೂಲ ಕಾಂಗ್ರೆಸ್ ಕೂಡ ಗೂರ್ಖಾಗಳ ಕುರಿತು ಕಣ್ಣೆತ್ತಿ ನೋಡಿಲ್ಲ. ಆದರೆ ಬಿಜೆಪಿ ನಿಮ್ಮೊಂದಿಗಿದೆ ಎಂದು ಅಮಿತ್ ಶಾ ಹೇಳಿದ್ದಾರೆ. 

ಕಾಲಿಂಪಾಂಗ್ ವಲಯದಲ್ಲಿ ವರ್ಷಗಳಿಂದ ತುಳಿತಕ್ಕೊಳಗಾಗಿದ್ದ ಗೂರ್ಖಾ ಸಮುದಾಯ 1986ರಲ್ಲಿ ಸಿಪಿಎಂ ಅಟ್ಟಹಾಸಕ್ಕೆ ಪ್ರಾಣಕಳೆದುಕೊಂಡಿದೆ. ಆದರೆ ಬಿಜೆಪಿಯನ್ನು ಆರಿಸಿದರೆ ಗೂರ್ಖಾಗಳ ಅಭಿವೃದ್ಧಿಗೆ ಕಟಿಬದ್ಧವಾಗಿದೆ ಎಂದು ಅಮಿತ್ ಶಾ ಹೇಳಿದ್ದಾರೆ.

click me!