10ನೇ ಸುತ್ತಿನ ಮಾತುಕತೆ; ರೈತರಿಗೆ ಹೊಸ ಆಫರ್ ನೀಡಿದ ಕೇಂದ್ರ ಸರ್ಕಾರ!

Published : Jan 20, 2021, 08:34 PM ISTUpdated : Jan 20, 2021, 09:07 PM IST
10ನೇ ಸುತ್ತಿನ ಮಾತುಕತೆ; ರೈತರಿಗೆ ಹೊಸ ಆಫರ್ ನೀಡಿದ ಕೇಂದ್ರ ಸರ್ಕಾರ!

ಸಾರಾಂಶ

ಕೇಂದ್ರ ಕೃಷಿ ಕಾಯ್ದೆ ವಿರೋಧಿಸಿ ರೈತರ ಪ್ರತಿಭಟನೆ ಅಂತ್ಯಗೊಳಿಸಲು ಕೇಂದ್ರ ಸರ್ಕಾರ ಪ್ರಯತ್ನಿಸುತ್ತಿದೆ. ಇದೀಗ ರೈತರ ಜೊತೆಗೆ ಕೇಂದ್ರ 10ನೇ ಸುತ್ತಿನ ಮಾತುಕತೆ ನಡೆಸಿದೆ. ಈ ಮಾತುಕತೆಯ ಪ್ರಮುಖ ಅಂಶಗಳು ಇಲ್ಲಿವೆ.

ನವದೆಹಲಿ(ಜ.20):  ಕೃಷಿ ಕಾಯ್ದೆ ಹಿಂಪಡೆಯಲೇಬೇಕು ಎಂದು ಆಗ್ರಹಿಸಿ ರೈತ ಸಂಘಟನೆಗಳು ನಡೆಸುತ್ತಿರುವ ಪ್ರತಿಭಟನೆ ತೀವ್ರಗೊಳ್ಳುತ್ತಿದೆ. ಇದರ ಜೊತೆಗೆ ರೈತರ ಜೊತೆಗಿನ ಮಾತುಕತೆ ಕೂಡ ನಡೆಯತ್ತಿದೆ. ಇಂದು(ಜ.20) 10ನೇ ಸುತ್ತಿನ ಮಾತುಕತೆ ನಡೆಸಲಾಗಿದೆ. ಈ ಸಭೆಯಲ್ಲಿ  ಕೇಂದ್ರ ಸರ್ಕಾರ  1.5 ವರ್ಷಗಳ ಕಾಲ ಕೃಷಿ ಕಾಯ್ದೆ ತಡೆಹಿಡಿಯಲು ಬದ್ಧವಾಗಿದೆ ಎಂದಿದೆ.

ಬೆಂಗಳೂರಲ್ಲಿ ಬೃಹತ್ ರೈತ ಪ್ರತಿಭಟನೆ : ಫುಲ್ ಟ್ರಾಫಿಕ್ ಜಾಮ್

ರೈತರ ಸಂಘಟನೆಗಳ ಜೊತೆಗಿನ ಮಾತುಕತೆಯಲ್ಲಿ  ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ರೈತರಿಗೆ ಹೊಸ ಆಫರ್ ನೀಡಿದ್ದಾರೆ. ಕೃಷಿ ಕಾಯ್ದೆ ಜಾರಿಗೆ ತರುವುದನ್ನು ಕೇಂದ್ರ ಒಂದೂವರೆ ವರ್ಷ ತಡೆ ಹಿಡಿಯಲು ಸಿದ್ದವಿದೆ ಎಂದಿದೆ. ಸುಪ್ರೀಂ ಕೋರ್ಟ್ ಇತ್ತೀಚೆಗೆ 2 ತಿಂಗಳ ಕಾಲ ಕೃಷಿ ಕಾಯ್ದೆ ಜಾರಿಗೆ ತರುವುದು ಬೇಡ ಎಂದು ಕೇಂದ್ರಕ್ಕೆ ಸೂಚಿಸಿತ್ತು. ಇಷ್ಟೇ ಅಲ್ಲ ಸಮಿತಿ ರಚಿಸಿ, ಕಾಯ್ದೆಯ ಸಾಧಕ ಬಾಧಕ ವರದಿ ನೀಡುವಂತೆ ಸೂಚಿಸಿತ್ತು.

ರೈತರಲ್ಲಿರುವ ಗೊಂದಲ ನಿವಾರಿಸಲು ಕೇಂದ್ರ ಸರ್ಕಾರ 1.5 ವರ್ಷಗಳ ಕಾಲ ಕಾಯ್ದೆ ಜಾರಿಗೆ ತರುವುದನ್ನು ತಡೆ ಹಿಡಿಯಲಿದೆ. ಇದಕ್ಕಾಗಿ ಸುಪ್ರೀಂ ಕೋರ್ಟ್‌ಗೆ ಅಫಿದವಿತ್ ಸಲ್ಲಿಸಲಿದೆ ಎಂದು ನರೇಂದ್ರ ಸಿಂಗ್ ತೋಮರ್ ಹೇಳಿದ್ದಾರೆ ಎಂದು ರೈತ ಸಂಘಟನೆಗಳ ಮುಖಂಡರು ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ. ಇದೇ ವೇಳೆ ಕಾಯ್ದೆ ಹಿಂಪಡೆಯಲು ಸಾಧ್ಯವಿಲ್ಲ, ತಿದ್ದುಪಡಿಗೆ ಕೇಂದ್ರ ಸಿದ್ಧವಿದೆ ಎಂದಿದೆ.

ಮುಂದಿನ ಸುತ್ತಿನ ಮಾತುಕತೆ ಜನವರಿ 22ಕ್ಕೆ ನಿಗದಿ ಪಡಿಸಲಾಗಿದೆ.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಬಾಬ್ರಿ ಮಸೀದಿಗೆ ಅಡಿಗಲ್ಲು ವಿವಾದ ಬೆನ್ನಲ್ಲೇ ಬಂಗಾಳದಲ್ಲಿ 5 ಲಕ್ಷ ಹಿಂದೂಗಳಿಂದ ಭಗವದ್ಗೀತೆ ಪಠಣ
ಖ್ಯಾತ ಸ್ಟಾರ್ ನಟನಿಗೆ ಬಿಷ್ಟೋಯ್ ಗ್ಯಾಂಗ್ ಬೆದರಿಕೆ! ಆತಂಕದಲ್ಲಿರುವ ಫ್ಯಾನ್ಸ್, ಏನಾಗ್ತಿದೆ ಅಲ್ಲೀಗ?