ಆಕೃತಿ ಕಾರಣ ಡ್ರ್ಯಾಗನ್ ಹಣ್ಣಿನ ಹೆಸ್ರು ಬದಲಿಸಿದ್ರೆ, ಬಾಳೆ ಹಣ್ಣಿಗೆ? ಗುಜರಾತ್ ನಿರ್ಧಾರ ಟ್ರೋಲ್!

Published : Jan 20, 2021, 04:06 PM ISTUpdated : Aug 12, 2021, 10:07 AM IST
ಆಕೃತಿ ಕಾರಣ ಡ್ರ್ಯಾಗನ್ ಹಣ್ಣಿನ ಹೆಸ್ರು ಬದಲಿಸಿದ್ರೆ, ಬಾಳೆ ಹಣ್ಣಿಗೆ? ಗುಜರಾತ್ ನಿರ್ಧಾರ ಟ್ರೋಲ್!

ಸಾರಾಂಶ

ಗುಜರಾತ್ ಮುಖ್ಯಮಂತ್ರಿ ವಿಜಯ್ ರೂಪಾನಿ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ಟ್ರೋಲ್ ಆಗುತ್ತಿದ್ದಾರೆ. ಕಾರಣ ಗುಜರಾತ್ ಸರ್ಕಾರ ಡ್ರ್ಯಾಗನ್ ಹಣ್ಣು ಕಮಲದ ಆಕೃತಿ ಇದೆ ಎಂದು ಕಮಲಂ ಹಣ್ಣು ಎಂದು ಮರುನಾಮಕರಣ ಮಾಡಿದ್ದಾರೆ. ಆಕೃತಿ ಕಾರಣಕ್ಕೆ ಹೆಸರು ಬದಲಿಸುವುದಾದರೆ ಬಾಳೆ ಹಣ್ಣಿಗೆ ಏನು ಹೆಸರಿಡುತ್ತೀರಿ? ಗುಜರಾತ್ ಸರ್ಕಾರದ ನಿರ್ಧಾರಕ್ಕೆ ಸಾಮಾಜಿಕ ಜಾಲತಾಣದಲ್ಲಿ ಬಂದ ಪ್ರತಿಕ್ರಿಯೆ ಇಲ್ಲಿದೆ.  

ಗುಜರಾತ್(ಜ.20):  ಗುಜರಾತ್ ಸರ್ಕಾರ ದಿಢೀರನೆ ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡ್ ಆಗಿದೆ. ಮುಖ್ಯಮಂತ್ರಿ ವಿಜಯ್ ರೂಪಾನಿ, ಡ್ರ್ಯಾಗನ್ ಹಣ್ಣ ಹಾಗೂ ಬಾಳೆ ಹಣ್ಣು ಕೂಡ ಟ್ರೆಂಡ್ ಆಗುತ್ತಿದೆ. ಇದಕ್ಕೆ ಕಾರಣ ಗುಜರಾತ್ ಸರ್ಕಾರದ ನಿರ್ಧಾರ.  ಡ್ರ್ಯಾಗನ್ ಹಣ್ಣಿನ ಹೆಸರನ್ನು ಕಮಲಂ ಎಂದು ಮರುನಾಮಕರಣ ಮಾಡಲಾಗಿದೆ. ಇದೇ ನಿರ್ಧಾರ ಟ್ರೋಲ್ ಆಗಿದೆ.

ನಗರ ಆಯ್ತು ಇದೀಗ ಡ್ರ್ಯಾಗನ್ ಫ್ರೂಟ್ ಹೆಸರು ಬದಲಿಸಿದ ಗುಜರಾತ್ ಸರ್ಕಾರ!

ಡ್ರ್ಯಾಗನ್ ಹೆಸರು ಚೀನಾ ದೇಶವನ್ನು ಕರೆಯುವ ಹೆಸರಾಗಿದೆ. ಚೀನಾದೊಂದಿಗೆ ಡ್ರ್ಯಾಗನ್ ಹೆಸರು ಥಳಕು ಹಾಕಿಕೊಂಡಿದೆ. ಇನ್ನು ಡ್ರ್ಯಾಗನ್ ಹಣ್ಣಿನ ಆಕೃತಿ ಕಮಲದ ರೀತಿ ಇದೆ. ಹೀಗಾಗಿ ಇದಕ್ಕೆ ಕಮಲಂ ಹಣ್ಣು ಎಂದು ಹೆಸರಿಡುವುದಾಗಿ ವಿಜಯ್ ರೂಪಾನಿ ಹೇಳಿದ್ದಾರೆ. ಆಕೃತಿ ನೋಡಿ ಹೆಸರಿಡುವುದಾದರೆ, ಬಾಳೆ ಹಣ್ಣಿಗೆ ಯಾವ ಹೆಸರಿಡುತ್ತೀರಿ ಎಂದು ಸಾಮಾಜಿಕ ಜಾಲತಾಣದಲ್ಲಿ ಪ್ರಶ್ನೆಗಳ ಸುರಿಮಳೆಗೈದಿದ್ದಾರೆ.

ಡ್ರ್ಯಾಗನ್ ಹೆಸರಿನಲ್ಲಿ ಬಂದಿರುವ ಹಾಲಿವುಡ್ ಸೇರಿದಂತೆ ಇತರ ಸಿನಿಮಾಗಳ ಹೆಸರನ್ನು ಇದೀಗ ಕಮಲಂ ಎಂದು ಮರುನಾಮಕರ ಮಾಡಿ ಮೇಮ್ಸ್ ಮಾಡಲಾಗಿದೆ. 

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಬಾಬ್ರಿ ಮಸೀದಿಗೆ ಅಡಿಗಲ್ಲು ವಿವಾದ ಬೆನ್ನಲ್ಲೇ ಬಂಗಾಳದಲ್ಲಿ 5 ಲಕ್ಷ ಹಿಂದೂಗಳಿಂದ ಭಗವದ್ಗೀತೆ ಪಠಣ
ಖ್ಯಾತ ಸ್ಟಾರ್ ನಟನಿಗೆ ಬಿಷ್ಟೋಯ್ ಗ್ಯಾಂಗ್ ಬೆದರಿಕೆ! ಆತಂಕದಲ್ಲಿರುವ ಫ್ಯಾನ್ಸ್, ಏನಾಗ್ತಿದೆ ಅಲ್ಲೀಗ?