ಸಹಕಾರ ಕ್ಷೇತ್ರಕ್ಕೆ ಪ್ರತ್ಯೇಕ ಸಚಿವಾಲಯ; ಕೇಂದ್ರದ ಐತಿಹಾಸಿಕ ತೀರ್ಮಾನ

By Suvarna NewsFirst Published Jul 6, 2021, 10:58 PM IST
Highlights

* ಕೇಂದ್ರ ಸರ್ಕಾರದ ಐತಿಹಾಸಿಕ ತೀರ್ಮಾನ
* ಸಹಕಾರ ಕ್ಷೇತ್ರಕ್ಕೆ ಪ್ರತ್ಯೇಕ ಸಚಿವಾಲಯ
* ತಳಮಟ್ಟದಿಂದ ಸುಧಾರಣೆಗೆ ಆದ್ಯತೆ
* ಬಹು-ರಾಜ್ಯ ಸಹಕಾರ ಸಂಘಗಳ (ಎಂಎಸ್‌ಸಿಎಸ್) ಅಭಿವೃದ್ಧಿ ಗಣನೆ

ನವದೆಹಲಿ(ಜು. 06)  ಕೇಂದ್ರ ಸರ್ಕಾರ ಐತಿಹಾಸಿಕ ತೀರ್ಮಾನವೊಂದನ್ನು ತೆಗೆದುಕೊಂಡಿದೆ. ಸಹಕಾರ ಕ್ಷೇತ್ರದ ಸರ್ವೋತೋಮುಖ ಅಭಿವೃದ್ಧಿಗಾಗಿ ಪ್ರತ್ಯೇಕ ಸಚಿವಾಲಯವನ್ನು ಸ್ಥಾಪಿಸಲಾಗಿದೆ. 'ಸಹಕಾರ್ ಸೇ ಸಮೃದ್ಧಿ' ಧ್ಯೇಯ   ಇಟ್ಟುಕೊಂಡು ಸಚಿವಾಲಯ ಸ್ಥಾಪನೆ ಮಾಡಲಾಗಿದೆ.

ಪ್ರತ್ಯೇಕ ಆಡಳಿತ ವ್ಯವಸ್ಥೆ, ಕಾನೂನು ಮತ್ತು ಯೋಜನೆಗಳ ನಿರೂಪಣೆ, ಸಹಕಾರ ಕ್ಷೇತ್ರದ ಬಲವರ್ಧನೆ ಇದರ ಮುಖ್ಯ ಉದ್ದೇಶ.  ತಳಮಟ್ಟದ ಪ್ರತಿಯೊಬ್ಬರನ್ನು ತಲುಪಲು ಈ ಅಭಿಯಾನ ನೆರವಾಗಲಿದೆ ಎನ್ನುವುದು ಕೇಂದ್ರದ ಆಲೋಚನೆ.

ಕೇಂದ್ರ ಸಂಪುಟದಲ್ಲಿ ಕರ್ನಾಟಕದ ಯಾರಿಗೆಲ್ಲ ಸ್ಥಾನ?

ಆರ್ಥಿಕ ಅಭಿವೃದ್ಧಿ ಪ್ರಮುಖ ಮಾನದಂಡವಾಗಿದ್ದು  ಪ್ರತಿಯೊಬ್ಬ ಸದಸ್ಯನು ಆರ್ಥಿಕವಾಗಿ ಸದೃಢವಾಗಲು ನೆರವಾಗುತ್ತದೆ.  ಸಹಕಾರಿ ಸಂಸ್ಥೆಗಳ ವ್ಯವಹಾರವನ್ನು ಸುಲಭಗೊಳಿಸುವ  ಪ್ರಕ್ರಿಯೆ ಆರಂಭವಾಗಲಿದೆ. ಬಹು-ರಾಜ್ಯ ಸಹಕಾರ ಸಂಘಗಳ (ಎಂಎಸ್‌ಸಿಎಸ್) ಅಭಿವೃದ್ಧಿಯನ್ನು ಗಣನೆಗೆ ತೆಗೆದುಕೊಳ್ಳಲಾಗಿದೆ. ಸಹಕಾರ ವಿಭಾಗಕ್ಕೆ ಇನ್ನು ಮುಂದೆ ಬಜೆಟ್ ನಲ್ಲಿಯೂ ಸಿಂಹಪಾಲು ದೊರೆಯಲಿದೆ. 

ಕೊರೋನಾ ಸಂದರ್ಭದಲ್ಲಿ ಆರ್ಥಿಕ ಚಟುವಟಿಗಳನ್ನು ಭದ್ರಪಡಿಸಲು ಕೇಂದ್ರ ಸರ್ಕಾರ ವಿಶೇಷ ಪ್ಯಾಕೇಜ್ ಗಳನ್ನು ನೀಡಿದೆ. ಈ ನಡುವೆ ಸಹಕಾರ  ವಿಭಾಗಕ್ಕೆ ಪ್ರತ್ಯೇಕ ಸಚಿವಾಲಯ ನೀಡಿರುವುದು ದೊಡ್ಡ ಬದಲಾವಣೆಗೆ ಕಾರಣವಾಗಲಿದೆ. 

click me!