
ಮಧ್ಯ ಪ್ರದೇಶ(ಜು.06): ಪೊಲೀಸ್ ಮನೆಗೆ ಕನ್ನ ಹಾಕಿ ಹಣ, ಒಡವೆ ದೋಚಿದ ಕಳ್ಳ ಭಾವುಕ ಪತ್ರವೊಂದನ್ನು ಬರೆದಿಟ್ಟಿದ್ದಾರೆ. ಈ ಪತ್ರ ನೋಡಿದರೆ ಒಂದು ಕ್ಷಣ ಯಾರ ಹೃದಯವೂ ಕರಗದೇ ಇರುವುದಿಲ್ಲ. ಈ ವಿಚಿತ್ರ ಘಟನೆ ಮಧ್ಯ ಪ್ರದೇಶದ ಭಿಂದ್ ಪಟ್ಟಣದಲ್ಲಿ ನಡೆದಿದೆ.
ಮನೆಯ ಬೀಗ ಒಡೆದು ಕಳ್ಳತನ ಮಾಡಿದ್ದ ಆರೋಪಿ ಚಿನ್ನಾಭರಣ ಸಮೇತ ಅರೆಸ್ಟ್
ಮಧ್ಯಪ್ರದೇಶ ಭಿಂದ್ ಪಟ್ಟಣದ ನಿವಾಸಿಯಾಗಿರುವ ಈ ಪೊಲೀಸ್ ಅಧಿಕಾರಿಗೆ ಚತ್ತೀಸಘಡದಲ್ಲಿ ಕರ್ತವ್ಯ. ಇನ್ನು ಮನೆಯಲ್ಲಿದ್ದ ಪತ್ನಿ ಹಾಗೂ ಮಕ್ಕಳು ಕುಟುಂಬಸ್ಥರ ಮನೆಗೆ ತೆರಳಿದ ವೇಳೆ ಕಳ್ಳತನ ನಡೆದಿದೆ. ಮರಳಿ ಮನೆಗೆ ಬಂದಾಗ ಕಳ್ಳತನವಾಗಿರುವುದು ಗಮನಕ್ಕೆ ಬಂದಿದೆ.
ಮಾಹಿತಿ ತಿಳಿದು ಕೋತ್ವಾಲಿ ಪೊಲೀಸ್ ಠಾಣೆ ಎಎಸ್ಐ ಕಮಲೇಶ್ ಕಟಾರೆ ಸ್ಥಳಕ್ಕೆ ಧಾವಿಸಿದ್ದಾರೆ. ಸ್ಥಳ ಪರಿಶೀಲನೆ ನಡೆಸಿದಾಗ ಪತ್ರವೊಂದು ದೊರೆತಿದೆ. ಈ ಪತ್ರದಲ್ಲಿ ಕಳ್ಳ, ಕ್ಷಮಿಸಿ, ನಾನು ಅನಿವಾರ್ಯವಾಗಿ ಈ ಕಳ್ಳತನ ಮಾಡುತ್ತಿದ್ದೇನೆ. ನಾನು ಈ ಕೆಲಸ ಮಾಡದಿದ್ದರೆ, ನನ್ನ ಗೆಳೆಯನ ಉಳಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಗೆಳೆಯನ ಪ್ರಾಣ ಉಳಿಸಲು ಕಳ್ಳತನ ಮಾಡಿದ್ದೇನೆ. ಆತಂಕ ಬೇಡ, ನನಗೆ ಹಣ ಸಿಕ್ಕಾಗ ತಕ್ಷಣವೇ ನಾನು ಮರಳಿ ನೀಡುತ್ತೇನೆ ಎಂದು ಪತ್ರದಲ್ಲಿ ಹೇಳಿದ್ದಾನೆ.
ಕೊಲೆ ಮಾಡಿ 15 ವರ್ಷ ಮೃತದೇಹದ ಜೊತೆಯೇ ವಾಸಿಸಿದ್ದ
ಮನೆಯ ಲಾಕರ್, ಡ್ರವರ್ ಮುರಿದು ಚಿನ್ನ, ಬೆಳ್ಳಿ ಹಾಗೂ ನಗದು ದೋಚಲಾಗಿದೆ. ಈ ಕಳ್ಳತನದಲ್ಲಿ ಕುಟುಂಬಸ್ಥರ ಕೈವಾಡವಿದೆ ಎಂದು ಮನೆ ಕಳ್ಳತನವಾದ ಪೊಲೀಸ್ ಅಧಿಕಾರಿ ಅನುಮಾನ ವ್ಯಕ್ತಪಡಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಕೋತ್ವಾಲಿ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ