ದೇಶದ ಅತಿವೇಗದ ಮೆಟ್ರೋ ರೈಲು, ನಮೋ ಭಾರತ್‌ಗೆ ಮೋದಿ ಚಾಲನೆ

Kannadaprabha News   | Kannada Prabha
Published : Feb 23, 2026, 06:30 AM IST
Namo Bharat Rapid Rail

ಸಾರಾಂಶ

ದೇಶದ ಅತಿ ವೇಗದ ಮೆಟ್ರೋ ಹಾಗೂ ನಮೋ ಭಾರತ್‌ ಪ್ರಾದೇಶಿಕ ತ್ವರಿತಗತಿ ಸಾರಿಗೆ ವ್ಯವಸ್ಥೆಯನ್ನು ಪ್ರಧಾನಿ ನರೇಂದ್ರ ಮೋದಿ ಭಾನುವಾರ ಇಲ್ಲಿ ಉದ್ಘಾಟಿಸಿದರು. ಒಂದೇ ಹಳಿಯ ಮೇಲೆ ಮೆಟ್ರೋ ಮತ್ತು ರ್‍ಯಾಪಿಡ್‌ ರೈಲು ಸಂಚಾರಕ್ಕೆ ಅವಕಾಶ ಕಲ್ಪಿಸಿದ ಮೊದಲ ಉದಾಹರಣೆ ಇದಾಗಿದೆ.

ಮೇರಠ್‌: ದೇಶದ ಅತಿ ವೇಗದ ಮೆಟ್ರೋ ಹಾಗೂ ನಮೋ ಭಾರತ್‌ ಪ್ರಾದೇಶಿಕ ತ್ವರಿತಗತಿ ಸಾರಿಗೆ ವ್ಯವಸ್ಥೆಯನ್ನು ಪ್ರಧಾನಿ ನರೇಂದ್ರ ಮೋದಿ ಭಾನುವಾರ ಇಲ್ಲಿ ಉದ್ಘಾಟಿಸಿದರು. ಒಂದೇ ಹಳಿಯ ಮೇಲೆ ಮೆಟ್ರೋ ಮತ್ತು ರ್‍ಯಾಪಿಡ್‌ ರೈಲು ಸಂಚಾರಕ್ಕೆ ಅವಕಾಶ ಕಲ್ಪಿಸಿದ ಮೊದಲ ಉದಾಹರಣೆ ಇದಾಗಿದೆ. ಈ ವೇಳೆ ಮೆಟ್ರೋ ರೈಲಲ್ಲಿ ಸಂಚರಿಸಿದ ಮೋದಿ ವಿದ್ಯಾರ್ಥಿಗಳು, ಅಧಿಕಾರಿಗಳ ಜತೆ ಸಂವಾದ ನಡೆಸಿದರು.

ಆ ಬಳಿಕ 12, 930 ಕೋಟಿ ರು. ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೂ ಚಾಲನೆ ನೀಡಿದ ಮೋದಿ, ನಮ್ಮ ಸರ್ಕಾರ ಇದೀಗ ಉದ್ಘಾಟಿಸಿದ ಯೋಜನೆಗಳು ವಿಕಸಿತ ಉತ್ತರ ಪ್ರದೇಶ ಮತ್ತು ವಿಕಸಿತ ಭಾರತಕ್ಕೆ ಹೆಚ್ಚಿನ ಬಲ ನೀಡುತ್ತವೆ. ಈ ಯೋಜನೆಗಳು ಬಿಜೆಪಿಯ ಡಬಲ್‌ ಎಂಜಿನ್‌ ಸರ್ಕಾರದ ಕೆಲಸದ ಸಂಸ್ಕೃತಿಯನ್ನು ತೋರಿಸುತ್ತದೆ. ನಮ್ಮ ಸರ್ಕಾರ ಯಾವುದೇ ಯೋಜನೆಯನ್ನು ನಿಗದಿತ ಸಮಯದಲ್ಲಿ ಮುಗಿಸಲು ಬದ್ಧವಾಗಿದೆ ಎಂದರು.

120 ಕಿ.ಮೀ. ವೇಗದ ಮೆಟ್ರೋ:

ಗಂಟೆಗೆ 120 ಕಿ.ಮೀ. ವೇಗದಲ್ಲಿ ಸಂಚರಿಸುವ 23 ಕಿ.ಮೀ. ಉದ್ದದ ಮೇರಠ್‌ ಮೆಟ್ರೋ ದೇಶದ ಅತಿವೇಗದ ಮೆಟ್ರೋ ಎಂಬ ಹಿರಿಮೆಗೆ ಪಾತ್ರವಾಗಿದೆ. ದಕ್ಷಿಣ ಮೇರಠ್‌ ಮತ್ತು ಮೋದಿಪುರಂ ನಡುವೆ ಈ ರೈಲು ಸಂಚರಿಸಲಿದೆ.

ನಮೋ ಭಾರತ್‌:

ನಮೋ ಭಾರತ್‌ ಕಾರಿಡಾರ್‌ ದೆಹಲಿ - ಗಾಝಿಯಾಬಾದ್‌ - ಮೇರಠ್‌ ಸಂಪರ್ಕಿಸುವ ದೇಶದ ಮೊದಲ ಪ್ರಾದೇಶಿಕ ತ್ವರಿತಗತಿಯ ಸಾರಿಗೆ ವ್ಯವಸ್ಥೆಯಾಗಿದೆ. ಈ ವ್ಯವಸ್ಥೆಯಡಿ ಈಗಾಗಲೇ ಕೆಲವು ಮಾರ್ಗ ಉದ್ಘಾಟನೆಗೊಂಡಿದ್ದು, ಬಾಕಿ ಉಳಿದಿದ್ದ ದೆಹಲಿಯ ಸರಾಯಿ ಕಾಲೆ ಖಾನ್‌ ಮತ್ತು ನ್ಯೂ ಅಶೋಕ್‌ ನಗರ ನಡುವಿನ 5 ಕಿ.ಮೀ. ಮತ್ತು ಉತ್ತರ ಪ್ರದೇಶದ ದಕ್ಷಿಣ ಮೇರಠ್‌ ಮತ್ತು ಮೋದಿಪುರಂ ನಡುವಿನ 21 ಕಿ.ಮೀ. ಮಾರ್ಗಕ್ಕೆ ಚಾಲನೆ ನೀಡಿದರು. ಈ ಮೂಲಕ ದೆಹಲಿ ಮತ್ತು ಮೇರಠ್‌ ನಡುವಿನ ಸಂಪೂರ್ಣ ಕಾರಿಡಾರ್‌ ಉದ್ಘಾಟನೆಗೊಂಡಂತಾಗಿದೆ. ಗಂಟೆಗೆ 180 ಕಿ.ಮೀ. ವೇಗದಲ್ಲಿ ಚಲಿಸುವ ಈ 82 ಕಿ.ಮೀ. ಉದ್ದದ ನಮೋ ಭಾರತ್‌ ತ್ವರಿತಗತಿ ಸಾರಿಗೆಯು ಪ್ರಮುಖ ನಗರ ಕೇಂದ್ರಗಳಾದ ಸಾಹಿಬಾಬಾದ್‌, ಗಾಝಿಯಾಬಾದ್‌, ಮೋದಿನಗರ್‌ ಮತ್ತು ಮೀರತ್‌ ಅನ್ನು ದೆಹಲಿಯೊಂದಿಗೆ ಸಂಪರ್ಕಿಸುತ್ತದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಕೈ ಬಿಟ್ಟ ಬೊಹ್ರಾ ಬಿಜೆಪಿಗೆ ಸೇರ್ಪಡೆ : ನೀವಿನ್ನು ನಮ್ಮ ಹೆಮ್ಮೆ ಸದಸ್ಯ ಎಂದ ಸಿಎಂ
ಪ್ರಧಾನಿ ಮನೆ ಸುತ್ತಲಿನ 717 ಮನೆ ತೆರವಿಗೆ ಆದೇಶ