ಪ್ರಧಾನಿ ಮನೆ ಸುತ್ತಲಿನ 717 ಮನೆ ತೆರವಿಗೆ ಆದೇಶ

Kannadaprabha News   | Kannada Prabha
Published : Feb 23, 2026, 06:16 AM IST
PM House

ಸಾರಾಂಶ

ದೆಹಲಿಯ ಲೋಕಕಲ್ಯಾಣ ಮಾರ್ಗದಲ್ಲಿರುವ ಪ್ರಧಾನಿ ನಿವಾಸದ ಸುತ್ತ ಸರ್ಕಾರಿ ಜಾಗದಲ್ಲಿ ನಿರ್ಮಾಣವಾಗಿದ್ದ 3 ಕೊಳಗೇರಿಗಳ ನಿವಾಸಿಗಳಿಗೆ ಮಾ.6ರ ಒಳಗಾಗಿ ಜಾಗ ಖಾಲಿ ಮಾಡುವಂತೆ ನೋಟೀಸ್‌ ನೀಡಲಾಗಿದೆ. ಅವರಿಗೆ 45 ಕಿ.ಮೀ. ದೂರದಲ್ಲಿರುವ ಸಾವ್ದಾ ಘೇವ್ಡಾದಲ್ಲಿ ಪುನರ್ವಸತಿ ವ್ಯವಸ್ಥೆಯನ್ನೂ ಕಲ್ಪಿಸಲಾಗಿದೆ.

ನವದೆಹಲಿ: ದೆಹಲಿಯ ಲೋಕಕಲ್ಯಾಣ ಮಾರ್ಗದಲ್ಲಿರುವ ಪ್ರಧಾನಿ ನಿವಾಸದ ಸುತ್ತ ಸರ್ಕಾರಿ ಜಾಗದಲ್ಲಿ ನಿರ್ಮಾಣವಾಗಿದ್ದ 3 ಕೊಳಗೇರಿಗಳ ನಿವಾಸಿಗಳಿಗೆ ಮಾ.6ರ ಒಳಗಾಗಿ ಜಾಗ ಖಾಲಿ ಮಾಡುವಂತೆ ನೋಟೀಸ್‌ ನೀಡಲಾಗಿದೆ. ಅವರಿಗೆ 45 ಕಿ.ಮೀ. ದೂರದಲ್ಲಿರುವ ಸಾವ್ದಾ ಘೇವ್ಡಾದಲ್ಲಿ ಪುನರ್ವಸತಿ ವ್ಯವಸ್ಥೆಯನ್ನೂ ಕಲ್ಪಿಸಲಾಗಿದೆ.

ಜಾಗ ಖಾಲಿ ಮಾಡುವಂತೆ ನೋಟೀಸ್‌

ಭಾಯಿ ರಾಮ್‌ ಕ್ಯಾಂಪ್‌, ಮಸ್ಜಿದ್‌ ಕ್ಯಾಂಪ್ ಮತ್ತು ಡಿಐಡಿ ಕ್ಯಾಂಪ್‌ಗಳು ಪ್ರಧಾನಿ ನಿವಾಸದಿಂದ ಕೆಲವೇ ಕಿ.ಮೀ. ದೂರದಲ್ಲಿವೆ. ಇವು ಸರ್ಕಾರಿ ಭೂಮಿಯಲ್ಲಿದ್ದುದರಿಂದ ಜಾಗ ಖಾಲಿ ಮಾಡುವಂತೆ ಕಳೆದ ವರ್ಷ ಅ.29ರಂದೇ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ ನೋಟೀಸ್‌ ಜಾರಿ ಮಾಡಿತ್ತು. ಆದರೆ ಇದನ್ನು ಪ್ರಶ್ನಿಸಿ ದೆಹಲಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಕೆಯಾಗಿತ್ತು. ಈ ಬಗ್ಗೆ ನ.13ರಂದು ಮಧ್ಯಂತರ ತೀರ್ಪು ನೀಡಿದ ಕೋರ್ಟ್‌, ಸುರಕ್ಷತಾ ವಿಧಾನಗಳನ್ನು ಪಾಲಿಸದೆ ಅರ್ಜಿದಾರರನ್ನು ಹೊರಹಾಕಬಾರದು ಎಂದು ಆದೇಶಿಸಿತ್ತು.

717 ಕುಟುಂಬಗಳಿಗೆ ಪುನರ್ವಸತಿ:

ಸರ್ಕಾರ ಖಾಲಿ ಮಾಡಲು ಮುಂದಾಗಿರುವ 3 ಕೊಳಗೇರಿಗಳ 717 ಕುಟುಂಬಗಳಿಗೆ 45 ಕಿ.ಮೀ. ದೂರದ ಸಾವ್ದಾ ಘೇವ್ಡಾದಲ್ಲಿ ಪುನರ್ವಸತಿ ಕಲ್ಪಿಸಲಾಗಿದೆ. ಇವರು ಪುನರ್ವಸತಿಗೆ ಅರ್ಹರೇ ಎಂಬುದರ ಬಗ್ಗೆ ಸಮಗ್ರ ಸಮೀಕ್ಷೆ ನಡೆಸಿ ಈ ನಿರ್ಧಾರ ಕೈಗೊಳ್ಳಲಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಲಿವ್‌-ಇನ್‌ ಗೆಳತಿ ಗುಪ್ತಾಂಗಕ್ಕೆ ಸ್ಯಾನಿಟೈಸರ್‌ ಸುರಿದು ಬೆಂಕಿ
ಸಂಸದೆಯರ ಮುಂದೆಬಿಟ್ಟು ಪ್ರಧಾನಿ ಆಗಬೇಕೆ ? : ಮೋದಿ