ವೇದಿಕೆ ಮೇಲೆ ಕಮಲಾ ಕಾಲಿಗೆರಗಿದ ಪ್ರಧಾನಿ ಮೋದಿ ವಿಡಿಯೋ ವೈರಲ್, ಯಾರು ಈ ಮಹಿಳೆ?

By Chethan KumarFirst Published May 30, 2024, 4:57 PM IST
Highlights

ಬಿಜೆಪಿ ಸಮಾವೇಶದ ವೇದಿಕೆ ಮೇಲಿದ್ದ ಮೋದಿ ಭೇಟಿಯಾಗಲು ಸಾಮಾನ್ಯ ಮಹಿಳೆ ಕಮಲಾ ಮಹರಾನ ಆಗಮಿಸಿದ್ದರು. ಪ್ರಧಾನಿ ಮೋದಿ ಕಮಲಾ ಕಾಲಿಗೆರಗಿ ಆಶೀರ್ವಾದ ಪಡೆದ ವಿಡಿಯೋ ಭಾರಿ ವೈರಲ್ ಆಗಿದೆ. ಯಾರು ಈ ಕಮಲಾನ ಮಹರಾನ?
 

ಒಡಿಶಾ(ಮೇ.30) ಪ್ರಧಾನಿ ನರೇಂದ್ರ ಮೋದಿ ಕಾಲಿಗೆರಗಿ ಆಶೀರ್ವಾದ ಪಡೆಯಲು ಹಲವರು ಯತ್ನಿಸಿದ್ದಾರೆ. ಆದರೆ ಇದಕ್ಕೆ ಮೋದಿ ಅವಕಾಶ ನೀಡಿಲ್ಲ. ಕಾರ್ಯಕರ್ತರು, ಯುವಕರು, ಬೆಂಬಲಿಗರು ಸೇರಿದಂತೆ ಹಲವು ಮೋದಿ ಭೇಟಿಯಾಗುವ ಅವಕಾಶ ಸಿಕ್ಕಿದಾಗ ಕಾಲಿಗೆರಗಿ ಆಶೀರ್ವಾದ ಪಡೆಯಲು ಯತ್ನಿಸಿದ್ದಾರೆ. ಇಂದು ಒಡಿಶಾದ ಬಿಜೆಪಿ ಸಮಾವೇಶದಲ್ಲಿ ಮೋದಿ ಬೇಟಿಯಾಗಲು ಆಗಮಿಸಿದ ನಾರಿ ಶಕ್ತಿ ಎಂದೇ ಗರುತಿಸಿಕೊಂಡಿರುವ ಸಾಮಾನ್ಯ ಮಹಿಳೆ ಕಮಲಾ ಮಹರಾನಾಗೆ ಕಾಲಿಗೆ ಮೋದಿ ಎರಗಿ ಆಶೀರ್ವಾದ ಪಡೆದ ವಿಶೇಷ ಘಟನೆ ನಡೆದಿದೆ. ಈ ವಿಡಿಯೋ ವೈರಲ್ ಆಗಿದೆ.

ಒಡಿಶಾದ ಕೆಂದ್ರಪ್ರದಾದಲ್ಲಿ ಬಿಜೆಪಿ ಲೋಕಸಭಾ ಚುನಾವಣಾ ಸಮಾವೇಶ ಆಯೋಜಿಸಿತ್ತು. ಪ್ರಧಾನಿ ನರೇಂದ್ರ ಮೋದಿ ಭಾಷಣಕ್ಕೆ ಕಿಕ್ಕಿರಿದು ಜನ ಸೇರಿದ್ದರು. ಇದೇ ವೇಳೆ ಮೋದಿ ಭೇಟಿಯಾಗಲು ಕಮಲಾ ಮಹರಾನ ಆಗಮಿಸಿದ್ದಾರೆ. ಪ್ರಧಾನಿ ಮೋದಿ ತಮ್ಮ 98ನೇ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಒಂದು ಬಾರಿ ಕಮಲಾ ಮಹರಾನ ಕುರಿತು ಉಲ್ಲೇಖಿಸಿದ್ದರು. ತ್ಯಾಜ್ಯವನ್ನು ಆದಾಯವಾಗಿ ಪರಿವರ್ತಿಸಿ ಮಹಿಳೆಯರಿಗೆ ಮಾದರಿಯಾಗಿರು ಒಡಿಶಾದ ಕಮಲಾ ಸಾಧನೆಯನ್ನು ಮೋದಿ ಕೊಂಡಾಡಿದ್ದರು.

Latest Videos

ಯಾವ ಬೈಗುಳವೂ ನನಗೆ ನಾಟಲ್ಲ: ಪ್ರಧಾನಿ ಮೋದಿ

ಒಡಿಶಾಗೆ ಮೋದಿ ಚುನಾವಣಾ ಸಮಾವೇಶಕ್ಕಾಗಿ ಆಗಮಿಸಿದ ವೇಳೆ ಕಮಲಾ ಆಗಮಿಸಿದ್ದಾರೆ. ಮೋದಿ ಭೇಟಿಯಾಗಲು ವೇದಿಕೆ ಮೇಲೆೇರಿದ್ದಾರೆ. 63 ವರ್ಷದ ಕಮಲಾ ಮೋದಿ ಭೇಟಿಯಾಗಿ ಮಾತನಾಡಿದ್ದಾರೆ. ಈ ವೇಳೆ ಮೋದಿ ಕೂಡ ತಮ್ಮ ನೆನಪುಗಳನ್ನು ಬಿಚ್ಚಿಟ್ಟಿದ್ದಾರೆ. ಮನ್ ಕಿ ಬಾತ್ ಕಾರ್ಯಕ್ರಮದಲ್ಲಿನ ಉಲ್ಲೇಖ, ರಾಖಿ ಸೇರಿದಂತೆ ಹಲವು ಘಟನೆಗಳನ್ನು ಮೋದಿ ನೆನಪಿಸಿದ್ದಾರೆ. ಇದೇ ವೇಳ ಮೋದಿ ಕಾಲಿಗೆರಲು ಬಂದ ಕಮಲಾ ಮಹರಾನ ತಡೆದ ಮೋದಿ, ನೇರವಾಗಿ ಕಮಲಾ ಕಾಲಿಗೆರಗಿದ್ದಾರೆ. ಕಮಲಾ ಮಹರಾನ ಕಾಲಿಗೆ ಬಿದ್ದು ನಮಸ್ಕರಿಸಿದ ಮೋದಿ ಆಶೀರ್ವಾದ ಪಡೆದಿದ್ದಾರೆ.

 

ಮನ್ ಕಿ ಬಾತ್‌ನಲ್ಲಿ ಉಲ್ಲೇಖಿಸಿದ್ದ ನಾರಿ ಶಕ್ತಿ ಕಮಲ ಮೊಹರನಾ ಕಾಲಿಗೆರಗಿದ ಮೋದಿ
ಒಡಿಶಾ ಬಿಜೆಪಿ ಸಮಾವೇಶದಲ್ಲಿ ಪ್ರಧಾನಿ ಮೋದಿ ಭೇಟಿಯಾಗಿ ನಮಸ್ಕರಿಸಿದ ಕಮಲಾ ಮೊಹರನಾ ಗೌರವಿಸಿದ ಮೋದಿ. ಮಹಿಳಾ ಸಬಲೀಕರಣಕ್ಕೆ ಮನ್ ಕಿ ಬಾತ್‌ನಲ್ಲಿ ಕಮಾಲ ಉಲ್ಲೇಖಿಸಿದ್ದ ಮೋದಿ. pic.twitter.com/i1IVwfYIXB

— Asianet Suvarna News (@AsianetNewsSN)

 

ಕೆಂದ್ರಾಪದ ನಗರ ಗುಲ್ನಗರದಲ್ಲಿ ವಾಸವಿರುವ ಕಮಲಾ, ಸ್ವ ಸಹಾಯ ಸಂಘ ನಡೆಸುತ್ತಿದ್ದಾರೆ. ತಾಜ್ಯವಸ್ತುಗಳಿಂದ ಹಲವು ಉತ್ಪನ್ನಗಳನ್ನು ಕಮಲ ಮಹರನಾ ತಯಾರಿಸಿ ಮಾರಾಟ ಮಾಡುತ್ತಿದ್ದಾರೆ. ಕಳೆದ ರಾಖಿ ಹಬ್ಬಕ್ಕೆ ಪ್ರದಾನಿ ಮೋದಿಗೆ ಕಮಲಾ ತಯಾರಿಸಿದ್ದ ರಾಖಿ ಕಟ್ಟಿದ್ದರು. ಪ್ಲಾಸ್ಟಿಕ್ ಸೇರಿದಂತೆ ಹಲವು ತ್ಯಾಜ್ಯ ವಸ್ತುಗಳಿಂದ ಉತ್ಪನ್ನ ಮಾಡಿ ಹಲವು ಮಹಿಳೆಯರಿಗೆ ಉದ್ಯೋಗವನ್ನು ಒದಗಿಸಿದ್ದಾರೆ. ಈ ಕಮಲಾ ಸಾಧನೆಯನ್ನು ಮೋದಿ ಕೊಂಡಾಡಿದ್ದರು. ಇದೀಗ ಸಮಾವೇಶದಲ್ಲಿ ಕಮಲಾ ಮೋದಿ ಬೇಟಿಯಾಗಿದ್ದಾರೆ. ಈ ವೇಳೆ ಮೋದಿ ಕಮಲಾ ಕಾಲಿಗೆರಗಿದ ವಿಡಿಯೋ ಭಾರಿ ವೈರಲ್ ಆಗಿದೆ.

ಮೋದಿ ಮತ್ತೆ ಪ್ರಧಾನಿಯಾಗಲೆಂದು ಗೋಕರ್ಣ ಆತ್ಮಲಿಂಗಕ್ಕೆ ಜೋಶಿ ವಿಶೇಷ ಪೂಜೆ
 

click me!