ಕ್ಷಮೆಯಾಚಿಸಿದ ರಾಮೇಶ್ವರಂ ಕೆಫೆ ಮಾಲೀಕ; ಇದು ಕ್ಷಮೆಯೋ? ಬೆದರಿಕೆಯೋ? ಎಂದು ಕೇಳಿದ ನೆಟ್ಟಿಗರು

Published : May 30, 2024, 03:20 PM ISTUpdated : May 30, 2024, 03:44 PM IST
ಕ್ಷಮೆಯಾಚಿಸಿದ ರಾಮೇಶ್ವರಂ ಕೆಫೆ ಮಾಲೀಕ; ಇದು ಕ್ಷಮೆಯೋ? ಬೆದರಿಕೆಯೋ? ಎಂದು ಕೇಳಿದ ನೆಟ್ಟಿಗರು

ಸಾರಾಂಶ

ರಾಘವೇಂದ್ರ ರಾವ್ ಮಾತುಗಳಲ್ಲಿ ಯಾವುದೇ ಮೌಲ್ಯಗಳು ಕಾಣಿಸುತ್ತಿಲ್ಲ. ಗ್ರಾಹಕರ ಸಂಖ್ಯೆ ಇಳಿಕೆಯಾಗಿರುವ ಕಾರಣ ಮಾಲೀಕರ ಭಾವದಲ್ಲಿ ಹತಾಶೆ ಕಾಣಿಸುತ್ತಿದೆ ಎಂದು ಬಳಕೆದಾರರು ಕಮೆಂಟ್ ಮಾಡಿದ್ದಾರೆ.

ಹೈದರಾಬಾದ್: ಅವಧಿ ಮೀರಿದ ಆಹಾರ ಬಳಕೆಯ ಕುರಿತು ರಾಮೇಶ್ವರಂ ಕೆಫೆಯ ಮಾಲೀಕ ರಾಘವೇಂದ್ರ ರಾವ್ (Rameshwaram cafe's co-founder, Raghavendra Rao) ಗ್ರಾಹಕರಲ್ಲಿ ಕ್ಷಮೆಯಾಚಿಸಿದ್ದಾರೆ. ಕೆಲ ದಿನಗಳ ಹಿಂದೆಯಷ್ಟೇ ಹೈದರಾಬಾದ್ ನಗರದಲ್ಲಿರುವ ರಾಮೇಶ್ವರಂ ಕೆಫೆಯ ಮೇಲೆ ಆಹಾರ ಸುರಕ್ಷತಾ ಅಧಿಕಾರಿಗಳು (Food safety authority) ನಡೆಸಿದ್ದರು. ಈ ವೇಳೆ ರಾಮೇಶ್ವರಂ ಕೆಫೆಯಲ್ಲಿ ಅವಧಿ ಮೀರಿದ ಆಹಾರ ಸಾಮಾಗ್ರಿ ಬಳಕೆ (expired food items) ಮಾಡುತ್ತಿರೋದು ಕಂಡು ಬಂದಿತ್ತು. ಇದೀಗ ವಿಡಿಯೋ ಮೂಲಕ ತಮ್ಮ ಕೆಫೆಯ ಮೇಲಾದ ದಾಳಿಯ ಕುರಿತು ರಾಘವೇಂದ್ರ ರಾವ್ ಪ್ರತಿಕ್ರಿಯೆ ನೀಡಿದ್ದಾರೆ. ಆದ್ರೆ ಈ ವಿಡಿಯೋದಲ್ಲಿ ರಾಘವೇಂದ್ರ ರಾವ್ ಮಾತನಾಡಿದ ಶೈಲಿ ಮತ್ತು ಬಾಡಿ ಲಾಂಗ್ವೆಜ್‌ಗೆ (Talking Style and Bodu Language) ಸಾರ್ವಜನಿಕರು ಅಸಮಾಧಾನ ಹೊರ ಹಾಕಿದ್ದಾರೆ. ನೀವು ನಮ್ಮಲ್ಲಿ ಕ್ಷಮೆ ಕೇಳ್ತಿದ್ದೀರಾ ಅಥವಾ ಬೆದರಿಕೆ ಹಾಕ್ತಿದ್ದೀರಾ ಎಂದು ಸಾರ್ವಜನಿಕರು ಪ್ರಶ್ನೆ ಮಾಡಿದ್ದಾರೆ. 

ವಿಡಿಯೋದಲ್ಲಿ ಏನಿದೆ? 

ನಾವು ಜನತೆಗೆ ಭರವಸೆ ನೀಡಿದಂತೆ ಉತ್ತಮ ಗುಣಮಟ್ಟದ ಆಹಾರ ಪೂರೈಕೆ ಮಾಡಲು ನಾವು ಬದ್ಧರಾಗಿದ್ದೇವೆ. ಕೆಲಸದ ವೇಳೆ ಸಣ್ಣ ತಪ್ಪುಗಳನ್ನು ಮಾಡಿರೋದು ನಿಜ. ಇದಕ್ಕೆ ನಾನು ನಿಮ್ಮೆಲ್ಲರಲ್ಲಿಯೂ ಕ್ಷೆಮೆ ಯಾಚಿಸುತ್ತೇನೆ. ನಾವು ಮಾಜಿ ರಾಷ್ಟ್ರಪತಿಗಳಾದ ಎಪಿಜೆ ಅಬ್ದುಲ ಕಲಾಂ ಅವರ ಹೆಜ್ಜೆಗಳನ್ನು ಪಾಲಿಸುತ್ತಿದ್ದೇವೆ. ಜಾಗತಿಕವಾಗಿ ನಮ್ಮ ಉದ್ಯಮವನ್ನು ವಿಸ್ತರಿಸೋದು ನಮ್ಮ ಉದ್ದೇಶ ಮತ್ತು ಗುರಿಯಾಗಿದೆ ಎಂದು ರಾಘವೇಂದ್ರ ರಾವ್ ಹೇಳಿಕೊಂಡಿದ್ದಾರೆ. 

ನಾವು ನಮ್ಮ ಕೆಫೆಯಲ್ಲಿ ಪ್ರೀಮಿಯಂ ಗುಣಮಟ್ಟದ ಆಹಾರ ಪದಾರ್ಥ ಮತ್ತು ತರಕಾರಿಯನ್ನು ಬಳಕೆ ಮಾಡುತ್ತೇವೆ. ಉತ್ತಮ ಗುಣಮಟ್ಟದಲ್ಲಿಯೇ ಆಹಾರವನ್ನು ತಯಾರಿಸಲಾಗುತ್ತದೆ. ಆಹಾರ ಇಲಾಖೆಯ ಅಧಿಕಾರಿಗಳು ಯಾವಾಗ ಬೇಕಾದ್ರೂ ನಮ್ಮ ಕೆಫೆಗೆ ಬಂದು ಪರಿಶೀಲನೆ ನಡೆಸಬಹುದು. ರೆಸ್ಟೊರೆಂಟ್‌ನಲ್ಲಿ ಬಳಸುವ ಬೇಳೆಕಾಳುಗಳು, ಮಸಾಲೆಗಳು ಮತ್ತು ತರಕಾರಿಗಳು ಪ್ರೀಮಿಯಂ ಗುಣಮಟ್ಟವನ್ನು ಹೊಂದಿವೆ ಎಂದು ಗ್ರಾಹಕರಿಗೆ ರಾಘವೇಂದ್ರ ರಾವ್ ಭರವಸೆ ನೀಡಿದರು. 

ಕ್ಷಮೆಯಾಚನೆ ವಿಡಿಯೋಗೆ ನೆಟ್ಟಿಗರಿಂದ ತೀವ್ರ ಅಸಮಾಧಾನ 

ರಾಘವೇಂದ್ರ ರಾವ್ ಅವರ ಕ್ಷಮೆಯಾಚನೆ ವಿಡಿಯೋಗೆ ನೆಟ್ಟಿಗರುತ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ರಾಘವೇಂದ್ರ ರಾವ್ ತಮ್ಮ ತಪ್ಪಿಗೆ ಕ್ಷಮೆ ಕೇಳುವ ಬದಲಾಗಿ ಜನತೆಗೆ ಬೆದರಿಕೆ ಹಾಕಿದಂತೆ ಕಾಣಿಸುತ್ತಿದೆ. ಕ್ಷಮೆ ಕೇಳುತ್ತಿಲ್ಲ, ಬದಲಾಗಿ ಬೆದರಿಕೆ ಹಾಕಿದ್ದಾರೆ ಎಂದು ಹಲವರು ಕಮೆಂಟ್ ಮಾಡಿದ್ದಾರೆ. 

Rameshwaram cafe: 42 ದಿನ..ಕರ್ನಾಟಕ ಟು ಕೊಲ್ಕತ್ತಾ..ಹೇಗಿತ್ತು ರಾಮೇಶ್ವರಂ ಕೆಫೆ ಸ್ಫೋಟಿಸಿದ ಉಗ್ರರ ಬೇಟೆ ?

ನಿಮ್ಮ ಆಕ್ರಮಣಕಾರಿ ದೇಹದ ಭಾಷೆ, ಮಾತಿನ ಧ್ವನಿಯಲ್ಲಿ ನಮಗೆ ಕ್ಷಮೆ ಭಾವನೆ ಕಾಣಿಸುತ್ತಿಲ್ಲ. ಅವಧಿ ಮೀರಿದ ಪದಾರ್ಥ ಬಳಕೆ ಮಾಡಲಾಗುತ್ತಿದೆ ಎಂಬ ವಿಷಯವನ್ನು ಬಹಿರಂಗಗೊಳಿಸಿದವರನ್ನು ನೋಡಿಕೊಳ್ಳುತ್ತೇನೆ. ನನ್ನ ಔಟ್‌ಲೆಟ್‌ಗೆ ಬಂದು ಆಹಾರ ಸೇವಿಸಿ ಎಂದು ಅವಾಜ್ ಹಾಕಿದಂತೆ ಕಾಣಿಸುತ್ತಿದೆ ಎಂದು ಹೇಳಿದಂತೆ ನಿಮ್ಮ ವರ್ತನೆ ಹೇಳುತ್ತಿದೆ ಎಂದಿದ್ದಾರೆ. ನಿಮ್ಮ ಈ ವಿಡಿಯೋ ನೋಡಿದರೇ ಗ್ರಾಹಕರು ನಿಮ್ಮ ಕೆಫೆಗೆ ಬರೋದು ಅನುಮಾನ ಎಂದು ಕೆಲವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಮಧ್ಯರಾತ್ರಿ 3 ಗಂಟೆಗೆ ಊಟ ಮಾಡುತ್ತಿದ್ದರು; ಅನಂತ್ ಅಂಬಾನಿ ಪ್ರೀ-ವೆಡ್ಡಿಂಗ್‌ ಬಗ್ಗೆ ರಾಮೇಶ್ವರಂ ಕೆಫೆ ಮಾಲೀಕರ ಮಾತು

ರಾಘವೇಂದ್ರ ರಾವ್ ಮಾತುಗಳಲ್ಲಿ ಯಾವುದೇ ಮೌಲ್ಯಗಳು ಕಾಣಿಸುತ್ತಿಲ್ಲ. ಗ್ರಾಹಕರ ಸಂಖ್ಯೆ ಇಳಿಕೆಯಾಗಿರುವ ಕಾರಣ ಮಾಲೀಕರ ಭಾವದಲ್ಲಿ ಹತಾಶೆ ಕಾಣಿಸುತ್ತಿದೆ ಎಂದು ಬಳಕೆದಾರರು ಕಮೆಂಟ್ ಮಾಡಿದ್ದಾರೆ. 

ತೆಲಂಗಾಣ ಆಹಾರ ಸುರಕ್ಷತಾ ಅಧಿಕಾರಿಗಳು ದಾಳಿ ನಡೆಸಿ ಅಲ್ಲಿನ ಆಹಾರ ಸಾಮಗ್ರಿಗಳನ್ನು ಪರಿಶೀಲನೆ ನಡೆಸಿದ ಸಂದರ್ಭದಲ್ಲಿ ಅವಧಿ ಮುಕ್ತಾಯವಾದ 100 ಕೆಜಿ ಕಪ್ಪು ಹೆಸರು ಕಾಳು, 10 ಕೆಜಿ ನಂದಿನಿ ಮೊಸರು, 8 ಲೀಟರ್‌ ಹಾಲು, ಬೆಲ್ಲ, ತುಪ್ಪ ಮೊದಲಾದ ವಸ್ತುಗಳು ಪತ್ತೆಯಾಗಿದ್ದವು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಅಕ್ರಮ ಸಂಬಂಧದ ಹಾದಿ ಹಿಡಿದ ಅಮ್ಮ: ಆಕೆಯ ಇಬ್ಬರು ಪುಟ್ಟ ಮಕ್ಕಳ ಮೋರಿಗೆಸೆದ ಪ್ರಿಯಕರ
19ರ ತರುಣನ ಜೊತೆ ಮಗಳ ಮದುವೆಗೆ ನಿರಾಕರಿಸಿದ ಪ್ರೇಯಸಿ ಮನೆಯವರು: ಕರೆಂಟ್ ಟವರ್ ಏರಿ ಪ್ರಿಯಕರನ ಹೈಡ್ರಾಮಾ