ತಿರುಪತಿ ಪ್ರಸಾದದಲ್ಲಿ ಪ್ರಾಣಿಗಳ ಕೊಬ್ಬನ್ನು ಬಳಸಿರುವ ಮಾಹಿತಿ ಬೆಳಕಿಗೆ ಬಂದಿದೆ. ಈ ರೀತಿ ನಡೆದಿದ್ದರೆ ಅದು ತಪ್ಪು ನಾವೂ ಇದನ್ನು ತಪ್ಪಾಗಿ ಪರಿಗಣಿಸುತ್ತೇವೆ. ಹೀಗಾಗಬಾರದಿತ್ತು. ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರಬಾರದು ಎಂದ ಎಐಎಂಐಎಂ ಪಕ್ಷದ ಅಧ್ಯಕ್ಷ ಅಸಾದುದ್ದೀನ್ ಒವೈಸಿ
ಮುಂಬೈ(ಸೆ.26): ತಿರುಪತಿ ತಿಮ್ಮಪ್ಪನ ಲಡ್ಡು ಪ್ರಸಾದದಲ್ಲಿ ದನ ಹಾಗೂ ಹಂದಿ ಕೊಟ್ಟು ಮತ್ತು ಮೀನಿನ ಎಣ್ಣೆಯನ್ನು ಬಳಸಿದ್ದನ್ನು ಎಐಎಂಐಎಂ ಪಕ್ಷದ ಅಧ್ಯಕ್ಷ ಅಸಾದುದ್ದೀನ್ ಒವೈಸಿ ಖಂಡಿಸಿದ್ದಾರೆ.
ಮುಂಬೈನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಓದ್ದೆಸಿ ಅವರು, 'ತಿರುಪತಿ ಪ್ರಸಾದದಲ್ಲಿ ಪ್ರಾಣಿಗಳ ಕೊಬ್ಬನ್ನು ಬಳಸಿರುವ ಮಾಹಿತಿ ಬೆಳಕಿಗೆ ಬಂದಿದೆ. ಈ ರೀತಿ ನಡೆದಿದ್ದರೆ ಅದು ತಪ್ಪು ನಾವೂ ಇದನ್ನು ತಪ್ಪಾಗಿ ಪರಿಗಣಿಸು ತ್ತೇವೆ. ಹೀಗಾಗಬಾರದಿತ್ತು. ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರಬಾರದು' ಎಂದು ಹೇಳಿದರು.
ಸೆ. 28ಕ್ಕೆ ತಿರುಮಲಕ್ಕೆ ಜಗನ್: ನಾಯ್ಡು ಆರೋಪದ ವಿರುದ್ಧ ರಾಜ್ಯವ್ಯಾಪಿ 'ಕ್ಷಮಾ ಪೂಜೆ'..!
ಟಿಟಿಡಿ ವಿರುದ ಬಿಹಾರದಲ್ಲಿ ದೂರು
ಮುಜಪ್ಟರ್‌ಪುರ: ತಿರುಪತಿ ಲಡ್ಡು ಪ್ರಸಾದದಲ್ಲಿ ಪ್ರಾಣಿಗಳ ಅಂಶ ಬೆರೆಸಿ ಭಕ್ತರ ಭಾವನೆಗೆ ಧಕ್ಕೆ ತಂದಿದ್ದಾರೆ ಎಂದು ಆರೋಪಿಸಿ ತಿರುಮಲ ತಿರು ಪತಿ ದೇವಸ್ಥಾನಂ (ಟಿಡಿಡಿ) ಸಮಿತಿ ವಿರುದ್ಧ ವಕೀಲ ಸುಧೀರ ಓಝಾ ಎಂಬುವರು ಅರ್ಜಿ ಸಲ್ಲಿಸಿದ್ದಾರೆ.
ತಿರುಪತಿ ಲಡ್ಡು: ಭಕ್ತರ ಮೇಲೆ ಬೀರಿಲ್ಲ ಪ್ರಸಾದದಲ್ಲಿ ದನದ ಕೊಬ್ಬಿನ ವಿವಾದ
ಕಲಬೆರಕೆ ತುಪ್ಪ ಪೂರೈಕೆ ಆರೋಪ: ಎಆರ್ ಡೈರಿ ವಿರುದ್ಧ ಟಿಟಿಡಿ ಎಫ್‌ಐಆರ್
ತಿರುಪತಿ: ದೇಗುಲದ ಪ್ರಸಾದ ತಯಾರಿಕೆಗೆ ಬಳಸಲು ಪೂರೈಸಿದ್ದ ತುವ ಕಲಬೆರಕೆ ಯಾಗಿತ್ತು ಎಂಬ ಕಾರಣಕ್ಕೆ ತಮಿಳುನಾಡಿನ ದಿಂಡಿಗಲ್ ಮೂಲದ ಎಆರ್ ಡೈರಿ ಫುಡ್ಸ್ ವಿರುದ್ಧ ತಿರುಪತಿ ತಿರುಮಲ ದೇಗುಲ ಮಂಡಳಿ (ಟಿಟಿಡಿ) ದೂರು ದಾಖಲಿಸಿದೆ. ಇದರ ಬೆನ್ನಲ್ಲೇ ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ.
ದೇಗುಲಕ್ಕೆ ಪೂರೈಕೆ ಮಾಡುತ್ತಿರುವ ತುಪ್ಪ ಕಲಬೆರಕೆ ಯಾಗಿದೆ ಎಂಬ ಅನುಮಾನದ ಕಾರಣ ಟಟಡಿ, ತುಪ ಪೂರೈಸುವ 4 ಸಂಸ್ಥೆಗಳ ಮಾದರಿಯನ್ನು ಪರೀಕ್ಷೆಗೆ ಮಾಡಿತ್ತು. ಈ ಸಂಬಂಧ ವರದಿ ನೀಡಿದ್ದ ಗುಜರಾತ್ ಪ್ರಯೋಗಾಲಯವು, ತಮಿಳುನಾಡು ಮೂಲದ ಸಂಸ್ಥೆ ಪೂರೈಸಿದ್ದ ತುಪ್ಪದಲ್ಲಿ ದನ, ಹಂದಿಯ ಕೊಬ್ಬಿನ ಅಂತ ಮತ್ತು ಮೀನಿನ ಎಣ್ಣೆ ಪತ್ತೆಯಾಗಿದೆ ಎಂದು ವರದಿ ನೀಡಿತ್ತು. ಈ ಹಿನ್ನೆಲೆಯಲ್ಲಿ ಟಿಟಿಡಿ ದೂರು ನೀಡಿದೆ. ಆದರೆ ತಾನು ಶುದತೆ ಪರೀಕ್ಷೆಗೆ ಒಳಪಡಿಸಿದ ಮತ್ತು ಶುದತೆ ಪ್ರಮಾಣಪತ್ರ ಹೊಂದಿದ ತುಪವನ್ನು ಮಾತ್ರವೇ ಸರಬರಾಜು ಮಾಡಿದ್ದಾಗಿ ಎಆರ್ ಡೈರಿ ಸ್ಪಷ್ಟನೆ ನೀಡಿತ್ತು.