ತಿರುಪತಿ ಲಡ್ಡು ವಿರುದ್ಧ ಇಂತಹದೊಂದು ಸುಳ್ಳು ಆರೋಪ ಮಾಡಿರುವ ನಾಯ್ಡು ಮಹಾಪಾಪ ಎಸಗಿದ್ದಾರೆ. ಈ ವಾಪದ ಪ್ರಾಯಶ್ಚಿತಕ್ಕಾಗಿ ಸೆ.28ರಂದು ಜನರು ರಾಜ್ಯವ್ಯಾಪಿ ದೇಗುಲಗಳಲ್ಲಿ ಪೂಜೆ ಮಾಡಬೇಕು ಎಂದು ಜಗನ್ ಕರೆ ನೀಡಿದ್ದಾರೆ. ಅಲ್ಲದೆ, ಅಂದು ಖುದ್ದು ತಿರುಪತಿಗೆ ಭೇಟಿ ನೀಡಿ ದೇವರಿಗೆ ಪ್ರಾರ್ಥನೆ ಸಲ್ಲಿಸಲಿದ್ದಾರೆ.
ಅಮರಾವತಿ(ಸೆ.26): ತಮ್ಮ ಅವಧಿಯಲ್ಲಿ ತಿರುಪತಿ ಲಡ್ಡುಗೆ ದನ, ಹಂದಿ ಮಾಂಸದ ಕೊಬ್ಬಿನ ಅಂಶವಿದ್ದ ತುಪ್ಪ ಬಳಸಲಾಗಿತ್ತು ಎಂದು ಆರೋಪಿಸಿದ್ದ ಅಂಧ್ರ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ವಿರುದ್ಧ ಇದೀಗ ಹಿಂದಿನ ಮುಖ್ಯಮಂತ್ರಿ ಜಗನ್‌ಮೋಹನ್ ರೆಡ್ಡಿ ಸಿಡಿದೆದ್ದಿದ್ದಾರೆ.
ತಿರುಪತಿ ಲಡ್ಡು ವಿರುದ್ಧ ಇಂತಹದೊಂದು ಸುಳ್ಳು ಆರೋಪ ಮಾಡಿರುವ ನಾಯ್ಡು ಮಹಾಪಾಪ ಎಸಗಿದ್ದಾರೆ. ಈ ವಾಪದ ಪ್ರಾಯಶ್ಚಿತಕ್ಕಾಗಿ ಸೆ.28ರಂದು ಜನರು ರಾಜ್ಯವ್ಯಾಪಿ ದೇಗುಲಗಳಲ್ಲಿ ಪೂಜೆ ಮಾಡಬೇಕು ಎಂದು ಜಗನ್ ಕರೆ ನೀಡಿದ್ದಾರೆ. ಅಲ್ಲದೆ, ಅಂದು ಖುದ್ದು ತಿರುಪತಿಗೆ ಭೇಟಿ ನೀಡಿ ದೇವರಿಗೆ ಪ್ರಾರ್ಥನೆ ಸಲ್ಲಿಸಲಿದ್ದಾರೆ.
ತಿಮ್ಮಪ್ಪನಿಗೂ ಮೋಸ, 'ನಮೋ ವೆಂಕಟೇಶ..' ಎಂದವರಿಗೆ ನಾನ್‌ವೆಜ್ ಪ್ರಸಾದ ತಿನ್ನಿಸಿದ ಜಗನ್!
ಜಗನ್ ಧರ್ಮ ಘೋಷಿಸಿಕೊಳ್ಳಲಿ:
ಈ ನಡುವೆ ಜಗನ್ ಅವರು ತಿರುಮಲಕ್ಕೆ ಭೇಟಿ ನೀಡಿದಾಗ ನಿಯಮಾನುಸಾರ ತಮ್ಮ ಧರ್ಮ ಘೋಷಿಸಿಕೊಳ್ಳಬೇಕು ಎಂದು ರಾಜ್ಯ ಬಿಜೆಪಿ ನಾಯಕಿ ಹಾಗೂ ಲೋಕಸಭಾ ಸದಸ್ಯೆ ದಗ್ಗುಬಾಟಿ ಪುರಂದೇಶ್ವರಿ ಆಗ್ರಹಿಸಿದ್ದಾ