ಲೋಕಸಭಾ ಚುನಾವಣೆ ವೇಳೆ ಹಿಂದೂಗಳ ಕುರಿತು ಅವಹೇಳನಕಾರಿ ಹೇಳಿಕೆ ನೀಡಿದ್ದ ಟಿಎಂಸಿ ನಾಯಕ ಹುಮಾಯೂನ್ ಹಬೀರ್‌ಗೆ ಬಿಜೆಪಿ ನಾಯಕ ಮಿಥುನ್ ಚಕ್ರವರ್ತಿ ತಿರುಗೇಟು ನೀಡಿದ್ದಾರೆ.
ನವದೆಹಲಿ: ಲೋಕಸಭಾ ಚುನಾವಣೆ ವೇಳೆ ಹಿಂದೂಗಳ ಕಡಿದು ನದಿಗೆ ಎಸಿತೀವಿ ಎಂದಿದ್ದ ಟಿಎಂಸಿ ನಾಯಕ ಹುಮಾಯೂನ್ ಹಬೀರ್ ಎಚ್ಚರಿಕೆಗೆ ಪ್ರತಿಕ್ರಿಯೆ ನೀಡಿರುವ ಬಿಜೆಪಿ ನಾಯಕ, ನಟ ಮಿಥುನ್ ಚಕ್ರವರ್ತಿ, ' ನಾವು ಅವರನ್ನು ಕೊಚ್ಚಿ ಹೂತು ಹಾಕುತ್ತೇವೆ. ಸಿಂಹಾಸನ ಗೆಲ್ಲಲು ಏನು ಬೇಕಾದರೂ ಮಾಡುತ್ತೇವೆ' ಎಂದು ಎಚ್ಚರಿಸಿದ್ದಾರೆ. ಭಾನುವಾರ ನಡೆದ ಕಾರ್ಯಕ್ರಮದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಸಮ್ಮುಖದಲ್ಲೇ ಮಾತನಾಡಿದ ಮಿಥುನ್ 'ಶೇ.70ರಷ್ಟು ಮುಸ್ಲಿಮರು, ಶೇ.30ರಷ್ಟಿರುವ ಹಿಂದೂಗಳನ್ನು ನದಿ ಭಾಗೀರಥಿಯಲ್ಲಿ ಕತ್ತರಿಸಿ ಎಸೆಯುತ್ತಾರೆ ಎಂದು ನಾಯಕರೊಬ್ಬರು ಹೇಳುತ್ತಾರೆ. ಈ ಬಗ್ಗೆ ಮಮತಾ ಪ್ರತಿಕ್ರಿಯಿಸಲಿಲ್ಲ. ಆದರೆ ನಾವು ಅವರನ್ನು ಕೊಚ್ಚಿ ಹೂತು ಹಾಕುತ್ತೇವೆ. ಬಂಗಾಳ ಗೆಲ್ಲಲು ಏನೂ ಬೇಕಿದ್ದರೂ ಮಾಡುತ್ತೇವೆ ಎಂದಿದ್ದಾರೆ.
ದೀಪಾವಳಿ ವೇಳೆ ದೇಶವ್ಯಾಪಿ ₹4.25 ಲಕ್ಷ ಕೋಟಿ ಬಿಸಿನೆಸ್
undefined
ನವದೆಹಲಿ: ಬೆಳಕಿನ ಹಬ್ಬ ದೀಪಾವಳಿ ಸಮೀಪಿಸುತ್ತಿದ್ದು, ಜನ ಹಬ್ಬದ ಖರೀದಿ ಆರಂಭಿಸಿದ್ದಾರೆ. ಹೀಗಿರುವಾಗ, ಈ ಬಾರಿ ದೇಶವ್ಯಾಪಿ 4.25 ಲಕ್ಷ ಕೋಟಿ ರು. ಮೊತ್ತದ ವಹಿವಾಟು ನಡೆಯುವ ನಿರೀಕ್ಷೆ ಇದ್ದು, ದೆಹಲಿಯೊಂದರಲ್ಲೇ 75 ಸಾವಿರ ರು. ವ್ಯಾಪಾರ ನಡೆಯಲಿದೆ ಎಂದು ಅಖಿಲ ಭಾರತ ವ್ಯಾಪಾರಿಗಳ ಒಕ್ಕೂಟ (ಸಿಎಐಟಿ) ಭರವಸೆ ವ್ಯಕ್ತಪಡಿಸಿದೆ. ಶಾಪಿಂಗ್‌ಗೆ ಹೆಸರುವಾಸಿಯಾಗಿರುವ ದೆಹಲಿಯ ಚಾಂದನಿ ಚೌಕ್ ಸಂಸದ ಹಾಗೂ ಸಿಎಐಟಿ ಪ್ರಧಾನ ಕಾರ್ಯದರ್ಶಿ ಪ್ರವೀಣ್ ಖಂಡೇಲ್ವಾಲ್ ಮಾತನಾಡಿ, 'ಮಹಾನಗರಗಳು, ಟೈರ್ 2, 3 ನಗರ, ಪಟ್ಟಣ, ಗ್ರಾಮಗಳಲ್ಲಿ ಅಂಗಡಿಗಳನ್ನು ವರ್ಣರಂಜಿತ ದೀಪ, ರಂಗೋಲಿ ಹಾಗೂ ಅಲಂಕಾರಿಕ ವಸ್ತುಗಳಿಂದ ಸಿಂಗರಿಸಲಾಗುವುದು. ಇದು ಇ-ಕಾಮರ್ಸ್ ವಿರುದ್ಧ ಸೆಣಸಿ, ಗ್ರಾಹಕರನ್ನು ಮಾರುಕಟ್ಟೆಯತ್ತ ಸೆಳೆಯಲು ಸಹಕಾರಿ. ಬೇಡಿಕೆ ಏರಿಕೆಯಾಗುವ ನಿರೀಕ್ಷೆಯಿಂದ ವ್ಯಾಪಾರಿಗಳು ಉಡುಗೊರೆಗಳು, ವಸ್ತ್ರಾಭರಣ, ಪೀಠೋಪಕರಣ, ಪೂಜಾ ಸಾಮಗ್ರಿ, ತಿಂಡಿ-ತಿನಿಸುಗಳನ್ನು ದಾಸ್ತಾನು ಮಾಡಲು ಪ್ರಾರಂಭಿಸಿದ್ದಾರೆ ಎಂದರು.
ಅಮೆರಿಕಾ ಅಧ್ಯಕ್ಷೀಯ ಚುನಾವಣೆ: ಕಮಲಾ ಹ್ಯಾರಿಸ್ ಪಕ್ಷದ ಪರ ಅನಿವಾಸಿ ಭಾರತೀಯರ ಒಲವು ಇಳಿಕೆ!
ವಾಷಿಂಗ್ಟನ್: ಕಮಲಾ ಹ್ಯಾರಿಸ್ ಅವರನ್ನು ಅಧ್ಯಕ್ಷೀಯ ಅಭ್ಯರ್ಥಿಯಾಗಿ ಕಣಕ್ಕಿಳಿಸಿರುವ ಅಮೆರಿಕದ ಡೆಮಾಕ್ರಟಿಟ್ ಪಕ್ಷದ ಪರ ಅನಿವಾಸಿ ಭಾರತೀಯರ ಒಲವು ಇಳಿಕೆಯಾಗಿರುವುದು ಕಂಡುಬಂದಿದೆ. ಮತ್ತೊಂದೆಡೆ ಟ್ರಂಪ್ ಅವರ ರಿಪಬ್ಲಿಕನ್ ಪಕ್ಷದ ಪರವಾಗಿ ಒಲವು ಹೆಚ್ಚಾಗಿದೆ. ಆದರೂ ಒಟ್ಟಾರೆ ಅಲ್ಲಿನ ಬಹುತೇಕ ಭಾರತೀಯರು ಕಮಲಾ ಹ್ಯಾರಿಸ್ ಪರ ಮತ ಚಲಾಯಿಸುವುದಾಗಿ ಹೇಳಿದ್ದಾರೆ. ಇತ್ತೀಚೆಗೆ ಭಾರತೀಯ ಅಮೆರಿಕರನ್ನು ಗುರಿಯಾಗಿಸಿ ನಡೆಸಿದ ಆನ್‌ಲೈನ್ ಸಮೀಕ್ಷೆಯೊಂದರ ವೇಳೆ ಶೇ.61ರಷ್ಟು ಅಮೆರಿಕನ್ ಭಾರತೀಯರು ಡೆಮಾಕ್ರಟಿಕ್ ಪಕ್ಷದ ಪರ ಮತ್ತು ಶೇ.32ರಷ್ಟು ಜನರು ರಿಪಬ್ಲಿಕನ್ ಪಕ್ಷದ ಪರ ಒಲವು ತೋರಿದ್ದಾರೆ. ಆದರೆ 2020ರ ಅಮೆರಿಕನ್ ಅಧ್ಯಕ್ಷೀಯ ಚುನಾವಣೆಯಲ್ಲಿ ಈ ಎರಡೂ ಪಕ್ಷಗಳ ಕಡೆಗೆ ಭಾರತೀಯರು ಚಲಾಯಿಸಿದ್ದ ಮತಗಳನ್ನು ಗಮನಿಸಿದರೆ, ಈ ಬಾರಿ ಕಮಲಾ ಹ್ಯಾರಿಸ್ ಪಕ್ಷದ ಪರ ಒಲವು ಸ್ವಲ್ಪ ಇಳಿದಿದ್ದು, ಟ್ರಂಪ್ ಪರ ಸ್ವಲ್ಪ ಏರಿದ್ದು ಕಂಡುಬಂದಿದೆ ಎಂದು ಸಮೀಕ್ಷೆ ಹೇಳಿದೆ. ಅಮೆರಿಕದಲ್ಲಿ ಭಾರತ ಮೂಲದ 52 ಲಕ್ಷ ಜನ ವಾಸವಿದ್ದಾರೆ.
5 ದಿನಗಳ ಕುಸಿತದ ಬಳಿಕ ಏರಿಕೆ ಹಾದಿಗೆ ಸೆನ್ಸೆಕ್ಸ್: 620 ಅಂಕಗಳ ಹೆಚ್ಚಳ
ಮುಂಬೈ: ಸತತ 5 ದಿನಗಳಿಂದ ಕುಸಿತ ಕಾಣುತ್ತಿದ್ದ ಬಾಂಬೆ ಷೇರುಪೇಟೆಯ ಸಂವೇದಿ ಸೂಚ್ಯಂಕವಾದ ಸೆನ್ಸೆಕ್ಸ್ ಸೋಮವಾರ 602 ಅಂಕಗಳ ಏರಿಕೆ ಕಂಡು 80005ರಲ್ಲಿ ಮುಕ್ತಾಯವಾಗಿದೆ. ಮಧ್ಯಂತರ ಅವಧಿಯಲ್ಲಿ 1137 ಅಂಕಗಳವರೆಗೆ ಏರಿದ್ದ ಸೂಚ್ಯಂಕ ಬಳಿಕ ಕುಸಿತ ಕಂಡಿತು. ಇನ್ನೊಂದೆಡೆ ನಿಫ್ಟಿ ಕೂಡಾ 158 ಅಂಕ ಏರಿ 24339ರಲ್ಲಿ ಕೊನೆಗೊಂಡಿತು. ಐಸಿಐಸಿಐ ಬ್ಯಾಂಕ್ ಷೇರು ಮೌಲ್ಯ ಏರಿಕೆ, ಜಾಗತಿಕ ಷೇರುಪೇಟೆ, ದೇಶೀಯ ಸಾಂಸ್ಥಿಕ ಹೂಡಿಕೆದಾರರ ಖರೀದಿ ಸೂಚ್ಯಂಕವನ್ನು ಮೇಲಕ್ಕೆ ಏರಿಸಿತು. ಸೋಮವಾರ ಷೇರುಪೇಟೆಯಲ್ಲಿ ನೊಂದಾಯಿತ ಷೇರುಗಳ ಮೌಲ್ಯ ಏರಿಕೆ ಪರಿಣಾಮ ಹೂಡಿಕೆದಾರರ ಸಂಪತ್ತು 4.21 ಲಕ್ಷ ಕೋಟಿ ರು. ಏರಿತು.