ಇದಕ್ಕಿದ್ದಂತೆ ರಿವರ್ಸ್ ಬಂದ ಲಾರಿ: ಸಾವಿನ ದವಡೆಯಿಂದ ಯುವತಿ ಜಸ್ಟ್ ಮಿಸ್

Published : May 16, 2025, 04:14 PM ISTUpdated : May 16, 2025, 04:38 PM IST
ಇದಕ್ಕಿದ್ದಂತೆ ರಿವರ್ಸ್ ಬಂದ ಲಾರಿ: ಸಾವಿನ ದವಡೆಯಿಂದ ಯುವತಿ ಜಸ್ಟ್ ಮಿಸ್

ಸಾರಾಂಶ

ರಸ್ತೆಯಲ್ಲಿ ಚಲಿಸುತ್ತಿದ್ದ ಗೂಡ್ಸ್ ಲಾರಿಯೊಂದು ಇದ್ದಕ್ಕಿದ್ದಂತೆ ರಿವರ್ಸ್‌ ತಗೊಂಡಿದ್ದು, ಹಿಂದೆ ಸ್ಕೂಟಿಯಲ್ಲಿದ್ದ ಯುವತಿಯೊಬ್ಬರು ಈ ಘಟನೆಯಿಂದ ಪವಾಡಸದೃಶರಾಗಿ ಪಾರಾಗಿದ್ದಾರೆ.

ಕೇರಳ: ರಸ್ತೆಯಲ್ಲಿ ಚಲಿಸುತ್ತಿದ್ದ ಗೂಡ್ಸ್ ಲಾರಿಯೊಂದು ಇದ್ದಕ್ಕಿದ್ದಂತೆ ರಿವರ್ಸ್‌ ತಗೊಂಡಿದ್ದು, ಹಿಂದೆ ಸ್ಕೂಟಿಯಲ್ಲಿದ್ದ ಯುವತಿಯೊಬ್ಬರು ಈ ಘಟನೆಯಿಂದ ಪವಾಡಸದೃಶರಾಗಿ ಪಾರಾಗಿದ್ದಾರೆ.  ಕೇರಳದ ಕೋಜಿಕೋಡ್‌ನಲ್ಲಿ ಈ ಘಟನೆ ನಡೆದಿದೆ. ಇಳಿಜಾರಿನಲ್ಲಿ ಚಲಿಸುತ್ತಿದ್ದ ಸರಕಿನಿಂದ ಲೋಡ್ ಆಗಿದ್ದ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ಹಿಂದೆ ಹಿಂದೆ ಬಂದಿದೆ. ಈ ವೇಳೆ ಲಾರಿ ಹಿಂದೆ ಸ್ಕೂಟಿಯಲ್ಲಿದ್ದ ಯುವತಿಯೊಬ್ಬಳು ಪಕ್ಕಕ್ಕೆ ಸರಿಯುವ ಪ್ರಯತ್ನ ಮಾಡಿದ್ದು, ಅಷ್ಟರಲ್ಲಿ ಸ್ಕೂಟಿಯ ಮೇಲೆಯೇ ಲಾರಿ ಹರಿದು ಹಿಂದೆ ಬಂದು ನಿಂತಿದೆ. ಆದರೆ ಪವಾಡಸದೃಶವೆಂಬಂತೆ ಸ್ಕೂಟಿಯಲ್ಲಿದ್ದ ಯುವತಿ ಯಾವ ಅನಾಹುತವೂ ಆಗದೇ ಪಾರಾಗಿದ್ದಾಳೆ. ಕೇರಳದಲ್ಲಿ ಈ ಘಟನೆ ನಡೆದಿದೆ.

ಈ ಘಟನೆಯ ದೃಶ್ಯ ಸಿಸಿಟಿವಿಯಲ್ಲಿ ರೆಕಾರ್ಡ್ ಆಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಪೆರಿಂಗಾಲಮ್ ಕೋಜಿಕೋಡ್ ರಸ್ತೆಯಲ್ಲಿ ಈ ಘಟನೆ ನಡೆದಿದ್ದು, ಟ್ರಕ್ ಇದ್ದಕ್ಕಿದ್ದಂತೆ ಚಾಲಕನ ನಿಯಂತ್ರಣ ತಪ್ಪಿ ಹಿಂದಕ್ಕೆ ಬರಲು ಆರಂಭಿಸಿದ ಕಾರಣ ಹಿಂದಿದ್ದ ಸ್ಕೂಟಿ ಸವಾರ ಯುವತಿ ತಮ್ಮ ಸ್ಕೂಟಿಯನ್ನು ಪಕ್ಕಕ್ಕೆ ಸರಿಸುವಷ್ಟರಲ್ಲಿ ಲಾರಿ ಟಚ್ ಆಗಿ ಸ್ಕೂಟಿ ಕೆಳಗೆ ಬಿದ್ದಿದೆ, ಜೊತೆಗೆ ಆಕೆಯೂ ರಸ್ತೆಗೆ ಬಿದ್ದಿದ್ದಾಳೆ. ಆದರೆ ಲಾರಿಯ ಚಕ್ರಗಳು ಆಕೆಯ ಮೇಲೆ ಹರಿಯದೇ ತುಸುವೇ ಪಕ್ಕದಲ್ಲಿ ಸರಿದಿದ್ದರಿಂದ ಆಕೆ ಪವಾಡಸದೃಶವೆಂಬಂತೆ ಪಾರಾಗಿದ್ದಾಳೆ. 

27 ಸೆಕೆಂಡ್‌ಗಳ ಈ ವೀಡಿಯೋ ನೋಡುಗರ ಎದೆ ನಡುಗಿಸುವಂತಿದೆ. ಹೀಗೆ ಪವಾಡ ಸದೃಶ ರೀತಿಯಲ್ಲಿ ಪಾರಾದ ಸ್ಕೂಟಿ ಚಾಲಕಿ ಯುವತಿಯನ್ನು ಓಝಯಾಡಿ ಮೂಲದ ಅಶ್ವಥಿ ಎಂದು ಗುರುತಿಸಲಾಗಿದೆ. ಪೆರಿಂಗಾಲಂ ಪಟ್ಟಣದಿಂದ ಕೋಝಿಕೋಡ್‌ ವೈದ್ಯಕೀಯ ಕಾಲೇಜಿಗೆ ಹೋಗುವ ರಸ್ತೆಯಲ್ಲಿ ಸಿಡ್ಬ್ಲಯುಆರ್‌ಡಿಎಂ ಬಳಿ ಬೆಳಗ್ಗೆ 7.30ಕ್ಕೆ ಘಟನೆ ನಡೆದಿದೆ. 

ವೈದ್ಯಕೀಯ ಕಾಲೇಜು ಕಡೆಗೆ ಹೋಗುತ್ತಿದ್ದ ಇಟ್ಟಿಗೆ ತುಂಬಿದ್ದ ಲಾರಿ ಯಾವುದೇ ಮುನ್ಸೂಚನೆ ಇಲ್ಲದೇ ಇದ್ದಕ್ಕಿದ್ದಂತೆ ರಸ್ತೆಯಲ್ಲಿ ಹಿಂದಕ್ಕೆ ಬರಲು ಆರಂಭಿಸಿದೆ. ನಂತರ ಅದು ಅಶ್ವಥಿ ಅವರ ಸ್ಕೂಟಿಗೆ ಡಿಕ್ಕಿ ಹೊಡೆದಿದ್ದು, ಅವರು ಸ್ಕೂಟಿ ಸಹಿತ ರಸ್ತೆಗೆ ಬಿದ್ದಿದ್ದಾರೆ. ಅದೃಷ್ಟವಶಾತ್ ರಿವರ್ಸ್ ಬರುತ್ತಿದ್ದ ಲಾರಿ ಅವರ ಸ್ಕೂಟಿ ಮೇಲೆ ಚಲಿಸದೇ ಕೂದಲೆಳೆ ಅಂತರದಲ್ಲಿ ತಾಗೊಕೊಂಡೆ ಪಕ್ಕಕ್ಕೆ ಹೋಗಿದ್ದರಿಂದ ಅಶ್ವಥಿ ಅವರು ಯಾವುದೇ ಪ್ರಾಣಪಾಯವಾಗದೇ ಬದುಕುಳಿದಿದ್ದಾರೆ. 

ಇತ್ತ ಹಿಂದಕ್ಕೆ ಬರುತ್ತಿದ್ದ ಸ್ಕೂಟಿ ಮರಕ್ಕೆ ಡಿಕ್ಕಿ ಹೊಡೆದು ನಿಂತಿದೆ. ಕೂಡಲೇ ಅಪಘಾತದ ಸದ್ದುಕೇಳಿ ಸ್ಥಳೀಯ ನಿವಾಸಿಗಳು ಅಲ್ಲಿಗೆ ಓಡಿ ಬಂದಿದ್ದಾರೆ. ಘಟನೆಯ ವೀಡಿಯೋ ಸಿಸಿಟಿವಿಯಲ್ಲಿ ರೆಕಾರ್ಡ್‌ ಆಗಿದ್ದು, ಬಳಿಕ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಪುಟಿನ್ ಭಾರತ ಭೇಟಿಯಿಂದ ಹೊಸ ಚರಿತ್ರೆಗೆ ಮುನ್ನುಡಿ, ಕೆಲ ರಾಷ್ಟ್ರಗಳಿಗೆ ಟೆನ್ಶನ್
ಪುಟಿನ್ ಔತಣಕೂಟಕ್ಕೆ ರಾಹುಲ್ ಗಾಂಧಿ-ಖರ್ಗೆಗಿಲ್ಲ ಆಮಂತ್ರಣ, ಶಶಿ ತರೂರ್‌ಗೆ ಜಾಕ್‌ಪಾಟ್