ಸ್ವಂತ ಮಗಳು, ಅಣ್ಣನ ಮಗಳು ಇಬ್ಬರನ್ನು 7 ವರ್ಷ ನಿರಂತರ ಅತ್ಯಾ**ರ, ಮಕ್ಕಳ ಕಣ್ಣೀರ ಕತೆ

Published : Feb 02, 2026, 04:53 PM IST
gurugram ex navy officer death wife knife accidentally chest police case

ಸಾರಾಂಶ

ಸ್ವಂತ ಮಗಳು, ಅಣ್ಣನ ಮಗಳು ಇಬ್ಬರನ್ನು 7 ವರ್ಷ ನಿರಂತರ ಅತ್ಯಾ**ರ, ಇಬ್ಬರು ಮಕ್ಕಳ ಕಣ್ಣೀರ ಕತೆ ಬಯಲಾಗುತ್ತಿದ್ದಂತೆ ತಂದೆ ಅರೆಸ್ಟ್ ಆಗಿದ್ದಾರೆ. ಈ ಘಟನೆ ಬಯಲಾಗಿದ್ದೇ ಮತ್ತೊಂದು ದುರಂತದ ಮೂಲಕ. 

ರಾಜ್‌ಕೋಟ್ (ಫೆ.02) ದೇಶದಲ್ಲಿ ಹೆಣ್ಣುಮಕ್ಕಳು, ಮಹಿಳೆಯರ ಮೇಲೆ ನಡೆಯುತ್ತಿರುವ ಕಿರುಕುಳ ಘಟನೆಗಳು ಹೆಚ್ಚಾಗುತ್ತಲೇ ಇದೆ. ಅದರಲ್ಲೂ ತಂದೆಯಿಂದಲೇ ಮಗಳ ಮೇಲೆ ನಡೆಯುತ್ತಿರುವ ಘಟನೆಗಳು ಸಮಾಜವನ್ನೇ ತಲೆತಗ್ಗಿಸುವಂತಿದೆ. ಇದೀಗ ಇಬ್ಬರು ಮಕ್ಕಳನ್ನು ನಿರಂತರವಾಗಿ 7 ವರ್ಷಗಳ ಕಾಲ ಅತ್ಯಾ**ರ ಮಾಡಿದ ಘಟನೆ ಬೆಳಕಿಗೆ ಬಂದಿದೆ. ಅಣ್ಣನ ಮಗಳನ್ನು ಸತತ 7 ವರ್ಷ ಹಾಗೂ ತನ್ನ ಮಗಳ ಮೇಲೆ ಸತತ 4 ವರ್ಷಗಳ ಅತ್ಯಾ**ರ ಎಸಗಿದ ಘಟನೆ ಗುಜರಾತ್‌ನ ರಾಜ್‌ಕೋಟ್‌ನಲ್ಲಿ ನಡೆದಿದೆ. ನೀಚ ತಂದೆ ಅರೆಸ್ಟ್ ಆಗಿದ್ದಾನೆ. ಈ ಕಿರುಕಳ ಬೆಳಕಿಗೆ ಬಂದಿದ್ದು ಮತ್ತೊಂದು ದುರಂತದ ಮೂಲಕ. ಅದೃಷ್ಠವಶಾತ್ ಕೊನೆಗೂ ಈ ಮಕ್ಕಳು ಪಾರಾಗಿದ್ದಾರೆ.

ಏನಿದು ಘಟನೆ?

ಈ ನೀಚ ತಂದೆಯ ಕ್ರೂರ ನಡೆಗೆ ಸಮಾಜ ತಲೆ ತಗ್ಗಿಸುವಂತಾಗಿದೆ. ಈತನ ಸಹೋದರ ಮಗಳನ್ನು 10 ವರ್ಷ ವಯಸ್ಸಿದ್ದಾಗ ನೋಡಿಕೊಳ್ಳಲು ಸಮಸ್ಯೆಯಾಗುತ್ತಿದ್ದ ಕಾರಣ ಈ ನೀಚನ ಮನೆಯಲ್ಲಿ ಬಿಟ್ಟಿದ್ದಾರೆ. ನೀಚನ ಸಹೋದರ ಮೃತಪಟ್ಟಿದ್ದ. ಹೀಗಾಗಿ ಸಹೋದರನ ಪತ್ನಿ ಜೀವನ ಸಾಗಿಸಲು ಕೆಲಸಕ್ಕೆ ಹೋಗುತ್ತಿದ್ದರು. ಹೀಗಾಗಿ ಮಗಳನ್ನು ನೋಡಿಕೊಳ್ಳುವುದು ಕಷ್ಟವಾಗಿತ್ತು.ನೀಚನ ಮಗಳ ಜೊತೆ ಸಹೋದರನ ಮಗಳು ಬೆಳೆಯುತ್ತಾಳೆ. ಸುರಕ್ಷಿತವಾಗಿರುತ್ತಾಳೆ ಎಂದು ನೀಚನ ಮನೆಯಲ್ಲಿ ಬಿಟ್ಟಿದ್ದಾಳೆ. ಮಗಳಂತೆ ನೋಡಿಕೊಳ್ಳುತ್ತೇನೆ ಎಂದು ಸಹೋದರನ ಪತ್ನಿಗೆ ಭರವಸೆ ನೀಡಿದ್ದ.

ಮಗಳು ಮಲಗಿದ ಬಳಿಕ ಅಣ್ಣನ ಮಗಳನ್ನು ದೈಹಿಕವಾಗಿ ಬಳಕೆ

ಅಣ್ಣನ ಮಗಳು 10 ವರ್ಷದವಳಿದ್ದಾಗ ಈ ನೀಚನ ಮನೆಗೆ ಬಿಡಲಾಗಿತ್ತು. ಕೆಲವೇ ದಿನಗಳಲ್ಲಿ ಈ ಪಾಪಿ ತಂದೆ ಕೆಲಸ ಶುರುಮಾಡಿದ್ದ. ತನ್ನ ಮಗಳು ಹಾಗೂ ಅಣ್ಣನ ಮಗಳು ಇಬ್ಬರು ಜೊತೆಯಾಗಿ ಒಂದೇ ಕೋಣೆಯಲ್ಲಿ ಮಲಗುತ್ತಿದ್ದರು. ತನ್ನ ಮಗಳು ಮಲಗುತ್ತಿದ್ದಂತೆ ಮೆಲ್ಲನೆ ಕೋಣೆಗೆ ಬರುತ್ತಿದ್ದ ಈ ನೀಚ ತಂದೆ, ಅಣ್ಣನ ಮಗಳಿಗೆ ಅಶ್ಲೀಲ ವಿಡಿಯೋಗಳನ್ನು ತೋರಿಸುತ್ತಿದ್ದ. ಬಳಿಕೆ ಆಕೆಯನ್ನು ದೈಹಿಕವಾಗಿ ಬಳಸಿಕೊಳ್ಳಲು ಆರಂಭಿಸಿದ್ದ. ಇದು ಸತತವಾಗಿ ಕಳೆದ 7 ವರ್ಷಗಳಿಂದ ಮುಂದುವರಿದಿತ್ತು.

ಮಗಳನ್ನೂ ಬಳಸಿಕೊಂಡ ತಂದೆ

ಅಣ್ಣನ ಮಗಳನ್ನು ನಿರಂತರವಾಗಿ ದೈಹಿಕವಾಗಿ ಬಳಸಿದ ಈ ನೀಚ ತಂದೆ, ಬಳಿಕ ತನ್ನ ಸ್ವಂತ ಮಗಳನ್ನೇ ಬಳಸಿಕೊಳ್ಳಲು ಮುಂದಾಗಿದ್ದ. ಕಳೆದ ನಾಲ್ಕು ವರ್ಷಗಳಿಂದ ತನ್ನ ಸ್ವಂತ ಮಗಳನ್ನೇ ಬಳಸಿಕೊಳ್ಳುತ್ತಿದ್ದ. ಅಣ್ಣನ ಮಗಳಿಗೆ ಇದೀಗ 17 ವರ್ಷ. ಇಬ್ಬರು ಹೆಣ್ಣುಮಕ್ಕಳು ಹಲವು ವರ್ಷಗಳಿಂದ ನರಕ ಯಾತನೆ ಅನುಭವಿಸುತ್ತಿದ್ದರು.

ಘಟನೆ ಬೆಳಕಿಗೆ ಬಂದಿದ್ದು ಹೇಗೆ

ಇಬ್ಬರು ಹೆಣ್ಣುಮಕ್ಕಳನ್ನು ಕಾಡಿಸಿ, ಪೀಡಿಸಿ, ಬೆದರಿಸಿ ಈ ನೀಚ ತಂದೆ ದೈಹಿಕವಾಗಿ ಬಳಸಿಕೊಂಡಿದ್ದ. ತಂದೆಯ ಕಿರುಕುಳ ತಾಳಲಾರದೆ ಸ್ವಂತ ಮಗಳು ಮನೆ ಬಿಟ್ಟು ಓಡಿ ಹೋಗಿದ್ದಳು. ಮಗಳು ಕಾಣುತ್ತಿಲ್ಲ ಎಂದು ನೀಚ ತಂದೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಳು. ಹೀಗಾಗಿ ಪೊಲೀಸರು ಈಕೆಯನ್ನು ಪತ್ತೆ ಹಚ್ಚಿತ್ತು. ಮನೆಗೆ ಬಿಡಲು ಮುಂದಾಗ, ಪೊಲೀಸರ ಕಾಲು ಹಿಡಿದು ದಯವಿಟ್ಟುು ಮನೆಗೆ ವಾಪಸ್ ಕಳುಹಿಸಬೇಡಿ ಎಂದು ಗಳಗಳನೇ ಅತ್ತಿದ್ದಾಳೆ. ಪೊಲೀಸರು ಏನೇ ಕೇಳಿದರೂ ಯಾವುದೇ ವಿಚಾರ ಬಾಯಿಬಿಡಲಿಲ್ಲ. ಅನುಮಾನಗೊಂಡ ಪೊಲೀಸರು ಹೆಣ್ಣುಮಗುವನ್ನು ಕೌನ್ಸಿಲಿಂಗ್ ಕಳುಹಿಸಿದ್ದಾರೆ. ಈ ವೇಳೆ ಹೆಣ್ಣು ಮಗು ಕಳೆದ ಕೆಲ ವರ್ಷಗಳಿಂದ ನಡೆಯುತ್ತಿರುವ ಕಿರುಕುಳ ಕುರಿತು ಬಾಯ್ಬಿಟ್ಟಿದ್ದಾರೆ. ಅಣ್ಣನ ಮಗಳನ್ನೂ ಇದೇ ರೀತಿ ಪೀಡಿಸಿದ್ದಾರೆ ಎಂದು ಎಲ್ಲಾ ಘಟನೆ ಹೇಳಿದ್ದಾರೆ. ಕಾರ್ಯಪ್ರವೃತ್ತರಾದ ಪೊಲೀಸರು ನೀಚನನ್ನು ಬಂಧಿಸಿದ್ದಾದರೆ. 45 ವರ್ಷದ ಎಲೆಕ್ಟ್ರಿಶಿಯನ್ ಇದೀಗ ಪೊಲೀಸರ ಅತಿಥಿಯಾಗಿದ್ದಾನೆ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಬೀಚ್‌ನಲ್ಲಿ ಗಾಂಜಾ ಒಣಗಲು ಹಾಕಿ ಅಲ್ಲೇ ನಿದ್ದೆಗೆ ಜಾರಿದ ಆರೋಪಿಯ ಬಂಧನ
ಟ್ರಿಲಿಯನ್ ಡಾಲರ್ ಆರ್ಥಿಕತೆ ನಿಭಾಯಿಸೋ ಸಚಿವೆ ಬಳಿ ಕಾರೇ ಇಲ್ಲ! ಮಧ್ಯಮ ವರ್ಗದವರ ಸಿಟ್ಟಲ್ಲಿರುವ ನಿರ್ಮಲಾ ಸೀತಾರಾಮನ್ ಆಸ್ತಿ ಎಷ್ಟು?