
ನವದೆಹಲಿ (ಜುಲೈ 21): ಹಿರಿಯ ನಾಗರಿಕರು ಹಾಗೂ ಕ್ರೀಡಾಪಟುಗಳು ರೈಲು ಪ್ರಯಾಣದ ದರದ ರಿಯಾಯಿತಿಗಳನ್ನು ಯಾವುದೇ ಸಮಯದಲ್ಲಿ ಸರ್ಕಾರ ಮರು ಸ್ಥಾಪನೆ ಮಾಡಬಹುದು ಎನ್ನುವುದನ್ನು ನಿರೀಕ್ಷೆ ಮಾಡಬೇಡಿ. ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಈ ಕುರಿತಾಗಿ ದೊಡ್ಡ ಹೇಳಿಕೆ ನೀಡಿದ್ದು, ಈ ವೆಚ್ಚಗಳು ರೈಲ್ವೆಯ ವೆಚ್ಚ ನಿರ್ವಹಣೆಯ ಮೇಲೆ ಭಾರೀ ಪರಿಣಾಮ ಬೀಳುತ್ತಿದ್ದು, ಈ ರಿಯಾಯಿತಿಯನ್ನು ಶೀಘ್ರದಲ್ಲಿ ಮತ್ತೆ ನೀಡುವ ಯೋಚನೆ ಇಲಾಖೆಗೆ ಇಲ್ಲ ಎಂದು ಹೇಳಿದ್ದಾರೆ. ಡಿಸ್ಕೌಂಟ್‌ಗಳ ಪೈಕಿ ಹಿರಿಯ ನಾಗರಿಕರಿಗೆ ರೈಲ್ವೆ ಟಿಕೆಟ್ ದರದಲ್ಲಿ ಶೇ 40ರಷ್ಟು ವಿನಾಯಿತಿ ಸಿಗುತ್ತಿದ್ದವು. ಆದರೆ, ಕಳೆದ ಎರಡು ವರ್ಷದಲ್ಲಿ ಕೋವಿಡ್-19 ಪರಿಣಾಮವಾಗಿ ಇದನ್ನು ರದ್ದು ಮಾಡಲಾಗಿದೆ. ಬುಧವಾರ ಈ ಕುರಿತಾಗಿ ಸಂಸತ್‌ನಲ್ಲಿ ಮಾತನಾಡಿದ ವೈಷ್ಣವ್ ಅವರು, "ಇಂಥ ಸವಾಲುಗಳ ನಡುವೆಯೂ, ನಾಲ್ಕು ವರ್ಗದ ದಿವ್ಯಾಂಗರು, 11 ವರ್ಗದ ರೋಗಿಗಳು ಮತ್ತು ವಿದ್ಯಾರ್ಥಿಗಳಿಗೆ ರಿಯಾಯಿತಿಯನ್ನು ಮುಂದುವರಿಕೆ ಮಾಡಲಾಗಿದೆ' ಎಂದು ಹೇಳಿದರು. ಆದರೆ, ಉಳಿದ ರಿಯಾಯಿತಿಗಳನ್ನು ಮರುಸ್ಥಾಪನೆ ಮಾಡುವುದು ರೈಲ್ವೇಸ್‌ಗೆ ಕಷ್ಟವಾಗಲಿದೆ ಎಂದು ಹೇಳುವ ಮೂಲಕ ಹಿರಿಯ ನಾಗರಿಕರ ರೈಲ್ವೆ ಟಿಕೆಟ್ ದರದ ರಿಯಾಯಿತಿ ಬಹುತೇಕ ರದ್ದು ಮಾಡಿದ್ದಾಗಿ ಲೋಕಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಲಿಖಿತ ಉತ್ತರವನ್ನು ನೀಡಿದ್ದಾರೆ.
4794 ಕೋಟಿ ರೂಪಾಯಿ ನಷ್ಟ: ಸಾಂಕ್ರಾಮಿಕ ರೋಗ (Covid pandemic) ಅಪ್ಪಳಿಸುವ ಮುನ್ನ ಮೂರು ವರ್ಷಗಳಲ್ಲಿ ಅವರು ಹಿರಿಯ ನಾಗರಿಕರಿಗೆ (Senior citizen) ನೀಡಿದ ರಿಯಾಯಿತಿಯ ( Rail Fare Concessions) ಡೇಟಾವನ್ನು ಹಂಚಿಕೊಂಡಿದ್ದಾರೆ: " ಈ ರಿಯಾಯಿತಿಯಿಂದಾಗಿ 2017-18, 2018-19 ಮತ್ತು 2019-20 ರ ಅವಧಿಯಲ್ಲಿ ಕಾಯ್ದಿರಿಸಿದ ಮತ್ತು ಕಾಯ್ದಿರಿಸದ ವರ್ಗಗಳಿಗೆ ರೈಲ್ವೆಯು ₹ 4,794 ಕೋಟಿ ಆದಾಯವನ್ನು ಬಿಟ್ಟುಕೊಟ್ಟಿದೆ." ಎಂದು ಹೇಳಿದ್ದಾರೆ. ತನ್ನ ಅತ್ಯಂತ ಕಡಿಮೆ ದರದ ಕಾರಣದಿಂದಾಗಿ, ರೈಲ್ವೇಯು ಈಗಾಗಲೇ ಪ್ರಯಾಣದ ವೆಚ್ಚದ ಶೇಕಡ 50 ಕ್ಕಿಂತ ಹೆಚ್ಚು ವೆಚ್ಚವನ್ನು ಭರಿಸುತ್ತಿದೆ ಎಂದು ಅವರು ವಾದಿಸಿದರು.
2017-18 ರಲ್ಲಿ ರಿಯಾಯಿತಿಯ ಕಾರಣದಿಂದಾಗಿ ರೈಲ್ವೇಸ್ (Indian Railways) 1,491 ಕೋಟಿ ರೂಪಾಯಿ ಆದಾಯವನ್ನು ಬಿಟ್ಟುಕೊಟ್ಟಿದ್ದರೆ, 2018-19ರಲ್ಲಿ 1638 ಕೋಟಿ ರೂಪಾಯಿ ಹಾಗೂ 2019-20ರಲ್ಲಿ 1667 ಕೋಟಿ ರೂಪಾಯಿ ಹಣವನ್ನು ಬಿಟ್ಟುಕೊಟ್ಟಿದೆ ಎನ್ನುವ ಮಾಹಿತಿಯನ್ನು ರೈಲ್ವೇ ಸಚಿವರು ನೀಡಿದ್ದಾರೆ.
50 ರು. ಸೇವಾ ಶುಲ್ಕ ತೆಗೆದು ಊಟ, ತಿಂಡಿ ದರವನ್ನೇ ಹೆಚ್ಚಿಸಿದ ರೈಲ್ವೆ!
ರೈಲ್ವೆ ಮೇಲೆ ಪರಿಣಾಮ: "ಇದಲ್ಲದೆ, COVID-19 ಕಾರಣದಿಂದಾಗಿ, 2019-20 ಕ್ಕೆ ಹೋಲಿಸಿದರೆ ಕಳೆದ ಎರಡು ವರ್ಷಗಳಲ್ಲಿ ಪ್ರಯಾಣಿಕರ ಗಳಿಕೆ ಕಡಿಮೆಯಾಗಿದೆ. ಇದು ರೈಲ್ವೆಯ ಆರ್ಥಿಕ ಆರೋಗ್ಯದ ಮೇಲೆ ದೀರ್ಘಕಾಲೀನ ಪರಿಣಾಮ ಬೀರುತ್ತದೆ. ರಿಯಾಯಿತಿಗಳನ್ನು ನೀಡುವ ವೆಚ್ಚವು ರೈಲ್ವೆಯ ಮೇಲೆ ಹೆಚ್ಚು ಭಾರವಾಗಿರುತ್ತದೆ. ಆದ್ದರಿಂದ ಹಿರಿಯ ನಾಗರಿಕರು ಸೇರಿದಂತೆ ಎಲ್ಲಾ ವರ್ಗದ ಪ್ರಯಾಣಿಕರಿಗೆ ರಿಯಾಯಿತಿಯ ವ್ಯಾಪ್ತಿಯನ್ನು ವಿಸ್ತರಿಸುವುದು ಸರಿಯಲ್ಲ; ಎಂದು ಅವರು ಹೇಳಿದ್ದಾರೆ. ದು ವಿವಿಧ ರೀತಿಯ ರೈಲುಗಳು ಮತ್ತು ಬರ್ತ್‌ಗಳಿವೆ, ದರಗಳ ಶ್ರೇಣಿಯೊಂದಿಗೆ ಹಿರಿಯ ನಾಗರಿಕರು ಯಾವುದೇ ರಿಯಾಯಿತಿಗಳಿಲ್ಲದೆ ಆಯ್ಕೆ ಮಾಡಬಹುದು ಎಂದು ಅವರು ಹೇಳಿದರು.
ಅಪಘಾತದಲ್ಲಿ ಪೋಷಕರು ನಿಧನ, ದೇಶದಲ್ಲೇ ಮೊದಲ ಬಾರಿಗೆ 10 ತಿಂಗಳ ಮಗುವಿಗೆ ನೌಕರಿ!
ರಿಯಾಯಿತಿ ತ್ಯಜಿಸಿದ 22.62 ಲಕ್ಷ ಹಿರಿಯ ನಾಗರಿಕರು: 2019-20, 2020-21 ಮತ್ತು 2021-22ರಲ್ಲಿ ರೈಲ್ವೆಯ ಮೀಸಲು ವಿಭಾಗದಲ್ಲಿ ಪ್ರಯಾಣ ಮಾಡಿದ ಹಿರಿಯ ನಾಗರೀಕರ ಸಂಖ್ಯೆ ಕ್ರಮವಾಗಿ 6.18 ಕೋಟಿ, 1.90 ಕೋಟಿ ಹಾಗೂ 5.55 ಕೋಟಿ ರೂಪಾಯಿ ಆಗಿದೆ ಎಂದು ತಿಳಿಸಿದ್ದಾರೆ. 2020-21 ಮತ್ತ 2021-22ರಲ್ಲಿ ಪ್ರಯಾಣಿಕರ ಸಂಖ್ಯೆಯಲ್ಲಿ ಇಳಕೆಗೆ ಪ್ರಮುಖವಾಗಿ ಕೋವಿಡ್-19 ಕಾರಣವಾಗಲಿದೆ ಎಂದು ತಿಳಿಸಿದ್ದಾರೆ. 2019-20ರ ಅವಧಿಯಲ್ಲಿ, 22.62 ಲಕ್ಷ ಹಿರಿಯ ನಾಗರಿಕ ಪ್ರಯಾಣಿಕರು ಪ್ರಯಾಣಿಕ ದರದಲ್ಲಿ ರಿಯಾಯಿತಿ ಯೋಜನೆಯನ್ನು ತ್ಯಜಿಸಲು ಮತ್ತು ಉತ್ತಮ ಸೌಲಭ್ಯಗಳೊಂದಿಗೆ ರೈಲ್ವೇಯ ಸುಸ್ಥಿರ ಅಭಿವೃದ್ಧಿಗಾಗಿ ರಿಯಾಯಿತಿಗಳನ್ನು ತ್ಯಜಿಸಲು ನಿರ್ಧರಿಸಿದ್ದಾರೆ ಎಂದು ಸಚಿವರು ಹೇಳಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ