National Herald Case : ಕಾಂಗ್ರೆಸ್‌ ಅಧಿನಾಯಕಿ ಸೋನಿಯಾಗೆ ಇಂದು ಇಡಿ ಡ್ರಿಲ್‌, ಪ್ರತಿಭಟನೆಗೆ ಸಿದ್ಧತೆ!

Published : Jul 21, 2022, 10:49 AM ISTUpdated : Jul 21, 2022, 01:25 PM IST
National Herald Case : ಕಾಂಗ್ರೆಸ್‌ ಅಧಿನಾಯಕಿ ಸೋನಿಯಾಗೆ ಇಂದು ಇಡಿ ಡ್ರಿಲ್‌, ಪ್ರತಿಭಟನೆಗೆ ಸಿದ್ಧತೆ!

ಸಾರಾಂಶ

ಸೋನಿಯಾ ಗಾಂಧಿ ಅವರ ಪುತ್ರ, ಮಾಜಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಜಾರಿ ನಿರ್ದೇಶನಾಲಯವು ಐದು ದಿನಗಳ ಕಾಲ ಪ್ರಶ್ನಿಸಿದಾಗ ಕಾಂಗ್ರೆಸ್ ದೇಶಾದ್ಯಂತ ವ್ಯಾಪಕ ಪ್ರತಿಭಟನೆಗಳನ್ನು ನಡೆಸಿತ್ತು.  

ನವದೆಹಲಿ (ಜುಲೈ 21): ನ್ಯಾಷನಲ್ ಹೆರಾಲ್ಡ್ ಪತ್ರಿಕೆಗೆ ಸಂಬಂಧಿಸಿದ ಆಪಾದಿತ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ಇಡಿ) ಪಕ್ಷದ ಮುಖ್ಯಸ್ಥೆ ಸೋನಿಯಾ ಗಾಂಧಿ ಅವರನ್ನು ಇಂದು ಬೆಳಗ್ಗೆ 11 ಗಂಟೆಯಿಂದ ವಿಚಾರಣೆಗೆ ಒಳಪಡಿಸಲಿದೆ. ಇನ್ನೊಂದೆಡೆ ಕಾಂಗ್ರೆಸ್ ಪಕ್ಷ ಇದೇ ವಿಚಾರವನ್ನು ಮತ್ತೊಂದು ಶಕ್ತಿ ಪ್ರದರ್ಶನಕ್ಕೆ ವೇದಿಕೆಯಾಗಿ ಬಳಸಿಕೊಳ್ಳುವ ನಿಟ್ಟಿನಲ್ಲಿ ಯೋಜನೆ ರೂಪಿಸಿದೆ. ಸೋನಿಯಾ ಗಾಂಧಿ ಅವರಿಗೆ ಕೊರೋನಾ ಪಾಸಿಟಿವ್‌ ಆಗಿ ಆಸ್ಪತ್ರೆಗೆ ದಾಖಲಾದ ಕಾರಣ ಅವರ ವಿಚಾರಣೆಯನ್ನು ಮುಂದೂಡಿಕೆ ಮಾಡಲಾಗಿತ್ತು. ಜೂನ್‌ ಮಧ್ಯಭಾಗದಲ್ಲಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದ ಅವರು ವಿಚಾರಣಾ ಸಂಸ್ಥೆಯ ಮುಂದೆ ಹಾಜಾರಾಗಲು ಹೆಚ್ಚಿನ ಸಮಯವನ್ನು ಕೇಳಿದ್ದರು. ಕಾಂಗ್ರೆಸ್ ಕಚೇರಿ ಬಳಿಯ ಕೆಲವು ರಸ್ತೆಗಳಲ್ಲಿ ಈಗಾಗಲೇ ಪೊಲೀಸರು ಬ್ಯಾರಿಕೇಡ್‌ ಹಾಕಿದ್ದಾರೆ. ಕಾಂಗ್ರೆಸ್ ಪಕ್ಷದ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ನಗರದಾದ್ಯಂತ ಪ್ರತಿಭಟನೆಗಳನ್ನು ಘೋಷಿಸಿರುವುದರಿಂದ ಸಂಚಾರ ಅಸ್ತವ್ಯಸ್ತತೆಯನ್ನು ನಿರೀಕ್ಷಿಸಲಾಗಿದೆ ಎಂದು ದೆಹಲಿ ಪೊಲೀಸರು ಹೇಳಿದ್ದಾರೆ. ಅಂದಾಜು ಐದು ದಿನಗಳ ಕಾಲ ಜಾರಿ ನಿರ್ದೇಶನಾಲಯ ರಾಹುಲ್‌ ಗಾಂಧಿಯವರನ್ನು ವಿಚಾರಣೆ ನಡೆಸಿತ್ತು. ಈ ಐದೂ ದಿನವೂ ಕಾಂಗ್ರೆಸ್‌ ದೇಶಾದ್ಯಂತ ದೊಡ್ಡ ಮಟ್ಟದ ಪ್ರತಿಭಟನೆಗಳನ್ನು ಮಾಡಿತ್ತು.

ಟ್ರಾಫಿಕ್‌ ಜಾಮ್‌ ಅಲರ್ಟ್‌: ಜುಲೈ 21 ರಂದು ಬೆಳಿಗ್ಗೆ 9 ರಿಂದ ಮಧ್ಯಾಹ್ನ 2 ರವರೆಗೆ ಮೋತಿಲಾಲ್ ನೆಹರು ಮಾರ್ಗ, ಅಕ್ಬರ್ ರಸ್ತೆ, ಜನಪಥ್ ಮತ್ತು ಮಾನ್ ಸಿಂಗ್ ರಸ್ತೆಯಲ್ಲಿ ಪ್ರಯಾಣವ್ನು ತಪ್ಪಿಸುವಂತೆ  ದೆಹಲಿ ಪೊಲೀಸರು ಸರಣಿ ಟ್ವೀಟ್‌ಗಳಲ್ಲಿ ಪ್ರಯಾಣಿಕರಿಗೆ ಕೇಳಿಕೊಂಡಿದ್ದಾರೆ. "ವಿಶೇಷ ವ್ಯವಸ್ಥೆಗಳಿಂದಾಗಿ, ಈ ರಸ್ತೆಗಳಲ್ಲಿ ಸುಗಮ ಸಂಚಾರ  ಸಾಧ್ಯವಾಗುವುದಿಲ್ಲ" ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಮತ್ತೊಂದು ಟ್ವೀಟ್‌ನಲ್ಲಿ, ವಿಶೇಷ ಸಂಚಾರ ವ್ಯವಸ್ಥೆಯಿಂದಾಗಿ, ಗೋಲ್ ದಕ್ ಖಾನಾ ಜಂಕ್ಷನ್, ಪಟೇಲ್ ಚೌಕ್, ವಿಂಡ್ಸರ್ ಪ್ಲೇಸ್, ತೀನ್ ಮೂರ್ತಿ ಚೌಕ್, ಪೃಥ್ವಿರಾಜ್ ರಸ್ತೆಯನ್ನು ಮೀರಿ ಹೊಸ ದೆಹಲಿಯಲ್ಲಿ ಬಸ್‌ಗಳ ಒಳಮುಖ ಸಂಚಾರವನ್ನು ನಿರ್ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇದೇ ಪ್ರಕರಣದಲ್ಲಿ ರಾಹುಲ್ ಗಾಂಧಿ ಅವರ ವಿಚಾರಣೆ ನಡೆಸುವ ವೇಳೆಯಲ್ಲೂ ಕಾಂಗ್ರೆಸ್ ಪಕ್ಷವು ಇದೇ ರೀತಿಯ ಪ್ರತಿಭಟನೆಯನ್ನು ನಡೆಸಿತ್ತು. ರಾಹುಲ್ ಗಾಂಧಿ ವಿರುದ್ಧ ಇಡಿ ಕ್ರಮವನ್ನು ವಿರೋಧಿಸಿ ಮುಖ್ಯಮಂತ್ರಿಗಳು ಮತ್ತು ಸಂಸದರು ಸೇರಿದಂತೆ ಪಕ್ಷದ ಮುಖಂಡರು ದೆಹಲಿಯಲ್ಲಿ ಪ್ರತಿಭಟನೆ ನಡೆಸಿದರು. ಪ್ರತಿಭಟನೆಯ ಸಮಯದಲ್ಲಿ, ತಮ್ಮ ಚಲನವಲನವನ್ನು ನಿರ್ಬಂಧಿಸಲು ಬ್ಯಾರಿಕೇಡ್‌ಗಳನ್ನು ಹಾಕಿದ್ದ ಪೊಲೀಸರೊಂದಿಗೆ ಅವರು ಘರ್ಷಣೆ ನಡೆಸಿದ್ದರು.

ಏನಿದು ನ್ಯಾಷನಲ್ ಹೆರಾಲ್ಡ್ ಕೇಸ್, ರಾಜಕೀಯ ಸಂಚಲನಕ್ಕೆ ಕಾರಣವಾಗಿರುವ ಪ್ರಕರಣದ ಇತಿಹಾಸ!

ಕೊರೋನಾ ಕಾರಣದಿಂದ ಮುಂದೂಡಿಕೆ ಆಗಿದ್ದ ವಿಚಾರಣೆ: ಸೋನಿಯಾ ಗಾಂಧಿ ಅವರು ಜೂನ್‌ 23 ರಂದೇ ಇಡಿ ಮುಂದೆ ಹಾಜಾರಾಗಬೇಕಿತ್ತು. ಆದರೆ, ಕೋವಿಡ್‌-19 ಪಾಸಿಟಿವ್‌ ಆಗಿದ್ದ ಸೋನಿಯಾ ಗಾಂಧಿ ಅದರಿಂದ ಚೇತರಿಸಿಕೊಳ್ಳುತ್ತಿದ್ದು, ವಿಚಾರಣೆಯನ್ನು ಮುಂದೂಡಿಕೆ ಮಾಡುವಂತೆ ಕೇಳಿಕೊಂಡಿದ್ದರು. ಇದಕ್ಕೂ ಮುನ್ನ ಜೂನ್‌ 8 ರಂದು ಇಡಿ ಸೋನಿಯಾ ಗಾಂಧಿಗೆ ಮೊದಲ ಸಮನ್ಸ್‌ ನೀಡಿತ್ತು. ಜೂನ್‌ 2 ರಂದೇ ಕೊರೋನಾ ಪಾಸಿಟಿವ್‌ ಆಗಿದ್ದ ಸೋನಿಯಾ ಗಾಂಧಿ ಅವರಿಗೆ, ಉಸಿರಾಟದ ಸೋಂಕು ಹಾಗೂ ಮೂಗಿನ ರಕ್ತಸ್ರಾವದ ಕಾರಣ ಜೂನ್‌ 12 ರಂದು ಆಸ್ಪತ್ರೆಗೆ ದಾಖಲಿಸಲಾಗಿತ್ತು.

ED ಡ್ರಿಲ್, ರಾಹುಲ್ ಗಾಂಧಿ ಪರ ರಮ್ಯಾ ಬ್ಯಾಟಿಂಗ್, ಟ್ವಿಟ್ಟಿಗರು ಫುಲ್ ಕ್ಲಾಸ್

ಏನಿದು ಪ್ರಕರಣ:
ನ್ಯಾಷನಲ್ ಹೆರಾಲ್ಡ್ ಪತ್ರಿಕೆಯನ್ನು ಪ್ರಕಟಿಸಿದ ಅಸೋಸಿಯೇಟೆಡ್ ಜರ್ನಲ್ಸ್ ಲಿಮಿಟೆಡ್‌ನ ಆಸ್ತಿಯನ್ನು ವಂಚನೆಯಿಂದ ಸ್ವಾಧೀನಪಡಿಸಿಕೊಂಡು ಯಂಗ್ ಇಂಡಿಯನ್‌ಗೆ ವರ್ಗಾಯಿಸಲಾಗಿದೆ ಎಂದು ಮನಿ ಲಾಂಡರಿಂಗ್ ಪ್ರಕರಣದಲ್ಲಿ ಆರೋಪಿಸಲಾಗಿದೆ, ಇದರಲ್ಲಿ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ತಲಾ 38% ಷೇರುಗಳನ್ನು ಹೊಂದಿದ್ದಾರೆ. ₹ 90 ಕೋಟಿ ಸಾಲವನ್ನು ಕಾಂಗ್ರೆಸ್‌ಗೆ ವರ್ಗಾಯಿಸಲು ಯಂಗ್ ಇಂಡಿಯಾಗೆ ₹ 50 ಲಕ್ಷ ಪಾವತಿಸಿದ್ದಾರೆ ಎಂದು ಆರೋಪಿಸಲಾಗಿದೆ. ಯಂಗ್ ಇಂಡಿಯನ್ ಕಂಪನಿಗಳ ಕಾಯಿದೆಯ ಸೆಕ್ಷನ್ 25 ರ ಅಡಿಯಲ್ಲಿ ಲಾಭರಹಿತ ಕಂಪನಿಯಾಗಿದೆ ಎಂದು ಪ್ರತೀಕಾರವಾಗಿ ಕಾಂಗ್ರೆಸ್ ಹೇಳಿದೆ, ಅದು ಲಾಭವನ್ನು ಸಂಗ್ರಹಿಸಲು ಅಥವಾ ಅದರ ಷೇರುದಾರರಿಗೆ ಲಾಭಾಂಶವನ್ನು ಪಾವತಿಸಲು ಸಾಧ್ಯವಿಲ್ಲ ಎಂದು ಹಿಂದೂ ವರದಿ ಮಾಡಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ದೆಹಲಿ ರಕ್ಷಣೆಗೆ ಸ್ವದೇಶಿ ಕ್ಷಿಪಣಿ ವ್ಯವಸ್ಥೆ
UIDAI Rules: ಯಾವುದೇ ಹೋಟೆಲ್‌ನಲ್ಲಿ ಆಧಾರ್ ಕಾರ್ಡ್ ಫೋಟೋಕಾಪಿ ನೀಡೋ ಅಗತ್ಯವಿಲ್ಲ: ಈ ಹೊಸ ನಿಯಮ ತಿಳ್ಕೊಳ್ಳಿ