ನವದೆಹಲಿ: ‘ಸಿರಿಧಾನ್ಯ ವರ್ಷ’ದ ಪ್ರಯುಕ್ತ ಇಂದು ಸಂಸತ್ತಿನಲ್ಲಿ ಎಲ್ಲಾ ಸಂಸದರಿಗೂ ಕರ್ನಾಟಕದ ರಾಗಿ ದೋಸೆ ಮತ್ತು ಜೋಳದ ರೊಟ್ಟಿ ಊಟವನ್ನು ಏರ್ಪಡಿಸಲಾಗಿದೆ. ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಇದನ್ನು ಆಯೋಜಿಸಿದ್ದು, ಪ್ರಧಾನಿ ನರೇಂದ್ರ ಮೋದಿ ಸಹ ಭಾಗಿಯಾಗಲಿದ್ದಾರೆ.ಈ ಅಡುಗೆಗಳನ್ನು ತಯಾರಿಸಲು ಕರ್ನಾಟಕದಿಂದ ನುರಿತ ಬಾಣಸಿಗರನ್ನು ಕರೆಸಿಕೊಳ್ಳಲಾಗಿದೆ. ಇವರು ರಾಗಿ ದೋಸೆ, ಇಡ್ಲಿ, ರಾಗಿ ಹಾಗೂ ಜೋಳದ ರೊಟ್ಟಿ, ಸಜ್ಜೆ ಹಾಗೂ ಜೋಳದ ಕಿಚಡಿ ಮತ್ತು ಸಜ್ಜೆ ಪಾಯಸವನ್ನು ತಯಾರು ಮಾಡಲಿದ್ದಾರೆ. ಸಿರಿಧಾನ್ಯಗಳನ್ನು ತಿನ್ನುವ ಸಂಸ್ಕೃತಿಯನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಇದನ್ನು ಆಯೋಜಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಪ್ರಧಾನಿ ಮೋದಿ ಅವರ ಶಿಫಾರಸ್ಸಿನ ಮೇಲೆ 2023ನೇ ವರ್ಷವನ್ನು ವಿಶ್ವಸಂಸ್ಥೆ ‘ಸಿರಿಧಾನ್ಯ ವರ್ಷ’ ಎಂದು ಘೋಷಿಸಿದೆ. ಸರ್ಕಾರವು ಸಹ ಸಿರಿಧಾನ್ಯ ಸೇವನೆಗೆ ಹೆಚ್ಚು ಒತ್ತು ನೀಡಿದ್ದು, ಇದನ್ನು ಪೋಷಣ್ ಮಿಶನ್ ಆಂದೋಲನದಲ್ಲಿ ಸೇರಿಸಿದೆ.
ಪೌಷ್ಟಿಕ ಆಹಾರ ವಿತರಣೆ: ಶಾಲಾ ಮಕ್ಕಳಿಗೆ ಸದ್ಯಕ್ಕಿಲ್ಲ ರಾಗಿ ಮುದ್ದೆ, ಜೋಳದ ರೊಟ್ಟಿ ಭಾಗ್ಯ..!
ಇನ್ಮುಂದೆ ಬಿಸಿಯೂಟದಲ್ಲಿ ಮುದ್ದೆ, ಜೋಳದ ರೊಟ್ಟಿ..?
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ