
ಕಾಶ್ಮೀರ(ಜೂ.06): ಪುಲ್ವಾಮಾ ದಾಳಿ ಯಾವ ಭಾರತೀಯನೂ ಮರೆಯುವುದಿಲ್ಲ. ಕಾರಣ ಈ ಭೀಕರ ದಾಳಿಯಲ್ಲಿ 40 CRPF ಯೋಧರು ಹುತಾತ್ಮರಾಗಿದ್ದಾರೆ. 2 ವರ್ಷಗಳ ಬಳಿಕ ಇದೀಗ ಮತ್ತೆ ಪುಲ್ವಾಮಾದಲ್ಲಿ CRPF ಯೋಧರನ್ನೇ ಟಾರ್ಗೆಟ್ ಮಾಡಿ ಭಯೋತ್ಪಾದಕರು ಗ್ರೈನೇಡ್ ದಾಳಿ ನಡೆಸಿದ್ದಾರೆ.
ಭದ್ರತಾ ಸಿಬ್ಬಂದಿಯನ್ನು ಬಿಟ್ಟು ಹೋದ BJP ಕೌನ್ಸಿಲರ್ ಉಗ್ರರ ಗುಂಡಿನಿಂದ ಸಾವು
ಪುಲ್ವಾಮಾದಲ್ಲಿ CRPF ಯೋಧರನ್ನು ಹೆಚ್ಚಿನ ಸಂಖ್ಯೆಯಲ್ಲಿ ನಿಯೋಜಿಸಲಾಗಿದೆ. ಇದನ್ನು ಅರಿತಿದ್ದ ಭಯೋತ್ಪಾದಕರು CRPF ಯೋಧರ ಬೇಸ್ ಕ್ಯಾಂಪ್ ಮೇಲೆ ಗ್ರೆನೇಡ್ ದಾಳಿ ನಡೆಸಿದ್ದಾರೆ. ಆದರೆ ಕ್ಯಾಂಪ್ ಸನಿಹದಲ್ಲಿ ಗ್ರೈನೇಡ್ ಸ್ಫೋಟಗೊಂಡಿದೆ. ಅದೃಷ್ಠವಶಾತ್ ಈ ದಾಳಿಯಿಂದ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಎಲ್ಲಾ ಯೋಧರು ಸುರಕ್ಷಿತರಾಗಿದ್ದಾರೆ ಎಂದು CRPF ಹೇಳಿದೆ.
ಈ ದಾಳಿಯಲ್ಲಿ 7 ನಾಗರೀಕರು ಗಾಯಗೊಂಡಿದ್ದು, ತಕ್ಷಣವವೇ ಆಸ್ಪತ್ರೆ ದಾಖಲಿಸಲಾಗಿದೆ. ನಾಗರೀಕರ ಆರೋಗ್ಯ ಸ್ಥಿರವಾಗಿದೆ. ಭಯೋತ್ಪಾದಕರ ಗ್ರೆನೇಡ್ ದಾಳಿಗೆ ಪ್ರತಿಯಾಗಿ ಪುಲ್ವಾಮಾದಲ್ಲಿ ಸೇನೆ ಕಾರ್ಯಾಚರಣೆ ಆರಂಭಿಸಿದೆ.
ಕಾಶ್ಮೀರದಲ್ಲಿ ತಪ್ಪಿತು ಭಾರೀ ಸ್ಪೋಟ: 7 ಉಗ್ರರ ಬಂಧನ!..
ಇತ್ತೀಚೆಗೆ ಕಾಶ್ಮೀರದಲ್ಲಿ ಭಯೋತ್ಪಾದಕರ ಉಪಟಳ ಹೆಚ್ಚಾಗುತ್ತಿದೆ. ದಕ್ಷಿಣ ಕಾಶ್ಮೀರದ ಟ್ರಾಲ್‌ನಲ್ಲಿ ಬಿಜೆಪಿ ಕೌನ್ಸಿಲರ್ ರಾಕೇಶ್ ಪಂಡಿತಾರನ್ನು ಉಗ್ರರು ಗುಂಡಿಕ್ಕಿ ಹತ್ಯೆ ಮಾಡಿದ್ದರು. ಇನ್ನೂ ಶನಿವಾರ(ಜೂ.05) ಶ್ರೀನಗರದಲ್ಲಿ ಸೇನೆ ಸ್ಫೋಟಕ IED ಪತ್ತೆ ಮಾಡಿ ನಿಷ್ಕ್ರೀಯ ಮಾಡಿತ್ತು. ಈ ಮೂಲಕ ಮಹಾ ದುರಂತವನ್ನು ತಪ್ಪಿಸಿತ್ತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ