ಮಲಯಾಳಂ ಬೇಡ, ಹಿಂದಿ- ಇಂಗ್ಲೀಷ್ ಮಾತ್ರ ಸಾಕು: ಭುಗಿಲೆದ್ದ ವಿವಾದ, ಆದೇಶ ವಾಪಾಸ್!

By Suvarna NewsFirst Published Jun 6, 2021, 3:42 PM IST
Highlights

* ಜಿ. ಬಿ. ಪಂತ್ ಆಸ್ಪತ್ರೆ ಆಡಳಿತ ಮಂಡಳಿಯ ವಿಚಿತ್ರ ಆದೇಶ

* ಹಿಂದಿ- ಇಂಗ್ಲೀಷ್ ಬಿಟ್ಟು ಬೇರಾವ ಭಾಷೆ ಬೇಡ, ಭುಗಿಲೆದ್ದ ವಿವಾದ

* ವಿವಾದವೇಳುತ್ತಿದ್ದಂತೆಯೇ ಮೌನ ವಹಿಸಿದ ಆಸ್ಪತ್ರೆ, ಆದೇಶ ವಾಪಾಸ್

* ಇಷ್ಟಾದರೂ ಮೌನ ವಹಿಸಿದ ಕೇರಳ, ಅಚ್ಚರಿಯಾಗುತ್ತಿದೆ ಎಂದ ಬಿಜೆಪಿ ನಾಯಕ

ನವದೆಹಲಿ(ಜೂ.06): ಜಿ. ಬಿ. ಪಂತ್ ಆಸ್ಪತ್ರೆ ಆಡಳಿತ ಮಂಡಳಿಯು ತನ್ನ ನರ್ಸಿಂಗ್ ಸಿಬ್ಬಂದಿಗೆ ಕರ್ತವ್ಯದ ಸಮಯದಲ್ಲಿ ಮಲಯಾಳಂನಲ್ಲಿ ಮಾತನಾಡದಂತೆ ನೀಡಿದ್ದ ತನ್ನ ಆದೇಶವನ್ನು ಹಿಂಪಡೆದಿದೆ. ಪ್ರಕರಣ ಗಂಭೀರಗೊಂಡ ಬೆನ್ನಲ್ಲೇ ಆದೇಶ ಹಿಂಡಪೆದಿರುವ ಆಡಳಿತ ಮಂಡಳಿ, ತಮ್ಮ ಗಮನಕ್ಕೆ ಬಾರದೆ ಈ ಬೆಳವಣಿಗೆ ನಡೆದಿದೆ. ಹೀಗಾಗಿ ಈ ಆದೇಶ ಹಿಂಪಡೆಯುತ್ತಿರುವುದಾಗಿ ತಿಳಿಸಿದ್ದಾರೆ.

ಅಗತ್ಯ ಬಂದಾಗ ಕೇರಳ ಸಹಾಯ ಮಾಡಿತು, ಆದರೀಗ ದೆಹಲಿ ಹಕ್ಕು ಕಸಿಯುತ್ತಿದೆ

ಭಾರತೀಯ ಜನತಾ ಪಕ್ಷದ ವಕ್ತಾರ ಟಾಮ್ ವಡಕ್ಕಮ್ ಈ ಬಗ್ಗೆ ಮಾತನಾಡುತ್ತಾ 'ದೆಹಲಿಯಲ್ಲಿರುವ ಸರ್ಕಾರ ಭಾರತದ ಸಂವಿಧಾನ ಹಾಗೂ ಅದರ ಮಾನ್ಯತೆ ಪಡೆದ ಭಾಷೆಯನ್ನು ಗೌರವಿಸುತ್ತಿಲ್ಲ. ಇಲ್ಲಿ ಮಲಯಾಳಂ ಮಾತನಾಡುವ ಕೇರಳದ ಅತೀ ಹೆಚ್ಚು ನರ್ಸ್‌ಗಳಿದ್ದಾರೆ. ಇಡೀ ವಿಶ್ವದಲ್ಲಿ ಅವರ ಸೇವಾ ಮನೋಭಾವವನ್ನು ಶ್ಲಾಘಿಸಲಾಗುತ್ತದೆ. ಆದರೆ ದೆಹಲಿಯ ಜಿ. ಬಿ. ಪಂತ್ ಆಸ್ಪತ್ರೆ ಆಸ್ಪತ್ರೆಯಲ್ಲಿ ಕೇವಲ ಇಂಗ್ಲೀಷ್ ಅಥವಾ ಹಿಂದಿ ಭಾಷೆ ಮಾತನಾಡಬೇಕು ಎನ್ನುವುದು, ಅವರಿಗೆ ಸಂವಿಧಾನ ನೀಡಿದ ಹಕ್ಕನ್ನು ಕಸಿದುಕೊಂಡಂತೆ' ಎಂದಿದ್ದಾರೆ. ಅಲ್ಲದೇ 'ದೆಹಲಿಗೆ ಆಕ್ಸಿಜನ್ ಬೇಕಾದಾಗ ಕೇರಳ ಸಹಾಯ ಮಾಡಿತ್ತು. ಆದರೀಗ ಇಂದು ಅದು ಅವರ ಭಾಷೆಯನ್ನು ಕಸಿದುಕೊಳ್ಳುವ ಯತ್ನ ನಡೆಸುತ್ತಿದೆ. ಆದರೆ ಕೇರಳ ಸರ್ಕಾರ ಈ ವಿಚಾರವಾಗಿ ಮೌನವಾಗಿದೆ ಎಂಬುವುದು ಎಲ್ಲಕ್ಕಿಂತ ಅಚ್ಚರಿಯುಂಟು ಮಾಡುತ್ತಿದೆ' ಎಂದಿದ್ದಾರೆ

ಗೂಗಲ್‌ ಬೆನ್ನಲ್ಲೇ ಅಮೇಜಾನ್ ಉದ್ಧಟತನ, ಮಹಿಳೆಯರ ಒಳ ಉಡುಪಿನಲ್ಲಿ ಕನ್ನಡ ಧ್ವಜ

ಇನ್ನು ಜಿ. ಬಿ. ಪಂತ್ ಆಸ್ಪತ್ರೆಯಲ್ಲಿ ಕಾರ್ಯ ನಿರ್ವಹಿಸುವ ಎಲ್ಲಾ ನರ್ಸ್‌ಗಳಿಗೆ ಹಿಂದಿ ಅಥವಾ ಇಂಗ್ಲೀಷ್‌ನಲ್ಲಿ ಮಾತನಾಡಬೇಕೆಂಬ ಆದೇಶ ನೀಡಲಾಗಿತ್ತು. ಹೀಗಾಗದಿದ್ದಲ್ಲಿ ಕಠಿಣ ಕ್ರಮ ಕೈಗೊಳ್ಳುವ ಎಚ್ಚರಿಕೆಯನ್ನೂ ನೀಡಲಾಗಿತ್ತು. ಅಲ್ಲದೇ ಈ ಆದೇಶ ಪ್ರತಿಯಲ್ಲಿ ನರ್ಸಿಂಗ್ ಸ್ಟಾಫ್‌ಗಳು ಮಲಯಾಳಂನಲ್ಲಿ ಮಾತನಾಡುತ್ತಾರೆ. ಈ ಆಸ್ಪತ್ರೆಗೆ ಬರುವ ಹೆಚ್ಚಿನ ರೋಗಿಗಳು ಹಾಗೂ ಅವರನ್ನು ಭೇಟಿಯಾಗಲು  ಬರುವವರಿಗೆ ಈ ಭಾಷೆ ಅರ್ಥವಾಗುವುದಿಲ್ಲ. ಹೀಗಾಗಿ ಸಮಸ್ಯೆ ಎದುರಿಸಬೇಕಾಗುತ್ತದೆ ಎಂಬ ದೂರು ಕೇಳಿ ಬಂದಿರುವುದಾಗಿ ಉಲ್ಲೇಖಿಸಲಾಗಿತ್ತು. ಹೀಗಾಗಿ ಎಒಲ್ಲಾ ಸಿಬ್ಬಂದಿ ಹಿಂದಿ ಅಥವಾ ಇಂಗ್ಲೀಷ್‌ನಲ್ಲಿ ಮಾತನಾಡಬೇಕೆಂಬ ಆದೇಶ ಹೊರಡಿಸಲಾಗಿತ್ತು. 

ತೆಲುಗು ಪರ ನಿಂತು ಕನ್ನಡ ಬಗ್ಗೆ ತಪ್ಪು ಮಾತನಾಡಿದ ನಟಿ ಆಶಿಕಾ, ಚಂದು ಗೌಡ ಬಹಿರಂಗ ಕ್ಷಮೆ!

ವಿವಾದ ಹುಟ್ಟುತ್ತಿದ್ದಂತೆಯೇ ಆದೇಶ ವಾಪಾಸ್

ಈ ಆದೇಶ ಜಾರಿಯಾದ ಬೆನ್ನಲ್ಲೇ ಕಾಂಗ್ರೆಸ್‌ ಎಂಪಿ ಕೆ. ಸಿ. ವೇಣುಗೋಪಾಲ್, ಶಶಿ ತರೂರ್ ಸೇರಿ ಅನೇಕ ನಾಯಕರು ಈ ಆದೇಶವನ್ನು ಟೀಕಿಸಲಾರಂಭಿಸಿದರು. ಸಾಂವಿಧಾನಿಕವಾಗಿ ಆಸ್ಪತ್ರೆ ಹೊರಡಿಸಿದ ಆದೇಶ ತಪ್ಪು, ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಹೀಗಾಗಿ ಇದನ್ನು ಹಿಂಪಡೆಯಬೇಕೆಂದು ಆರೋಗ್ಯ ಸಚಿವ ಡಾ. ಹರ್ಷ ವರ್ಧನ್‌ಗೆ ಮನವಿ ಮಾಡಿದ್ದರು. ಈ ವಿಚಾರ ಗಂಭೀರಗೊಳ್ಳುತ್ತಿದ್ದಂತೆಯೇ ಆಸ್ಪತ್ರೆ ಮಂಡಳಿ ಇದು ತಮ್ಮ ಗಮನಕ್ಕೆ ಬಾರದೆ ನಡೆದ ಬೆಳವಣಿಗೆ ಎಂದು ಹೇಳಿ ಆದೇಶ ಹಿಂಪಡೆದಿದೆ. 

click me!