ಆಗ್ರಾದಲ್ಲಿ ಮಿಗ್-29 ಯುದ್ಧ ವಿಮಾನ ಪತನಗೊಂಡಿದ್ದು, ಪೈಲಟ್ ಸುರಕ್ಷಿತವಾಗಿ ಜಿಗಿದಿದ್ದಾರೆ. ತಾಂತ್ರಿಕ ದೋಷದಿಂದಾಗಿ ವಿಮಾನ ಪತನಗೊಂಡಿದೆ ಎಂದು ಶಂಕಿಸಲಾಗಿದೆ.
ಆಗ್ರಾ: ಭಾರತೀಯ ವಾಯಪಡೆಯ ಮಿಗ್-29 ಯುದ್ಧ ವಿಮಾನವು ಸೋಮವಾರ ಉತ್ತರ ಪ್ರದೇಶದ ಆಗ್ರಾದಲ್ಲಿ ಪತನಗೊಂಡಿದೆ. ಜೆಟ್ ಸಂಪೂರ್ಣವಾಗಿ ಬೆಂಕಿಗೆ ಆಹುತಿಯಾಗಿದೆ. ಹಾರಾಟದ ವೇಳೆ ಜೆಟ್‌ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದ್ದು, ಪತನಗೊಂಡಿದೆ ಎಂದು ಮೂಲಗಳು ತಿಳಿಸಿವೆ.
ಜೆಟ್‌ನಲ್ಲಿದ್ದ ಪೈಲಟ್ ಜನವಸತಿ ಪ್ರದೇಶದ ಮೇಲೆ ವಿಮಾನ ಬೀಳದಂತೆ ತಡೆದು ಕೆಳಗೆ ಜಿಗಿದಿದ್ದಾರೆ. ಹೀಗಾಗಿ ಯಾವುದೇ ಸಾವು ನೋವು ಸಂಭವಿಸಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಬಗ್ಗೆ ಆಂತರಿಕ ತನಿಖೆಗೆ ಆದೇಶಿಸಿದ್ದಾರೆ. ಈ ಹಿಂದೆ ಸೆ.2 ರಂದು ಮಿಗ್ -29 ಯುದ್ಧವಿಮಾನದಲ್ಲಿ ತಾಂತ್ರಿಕ ದೋಷ ಕಂಡು ಬಂದಿದ್ದು, ರಾಜಸ್ಥಾನದ ಬಾಢಮೇರ್ ನಲ್ಲಿ ಪತನಗೊಂಡಿತ್ತು. ಸುದೈವವಶಾತ್ ಯಾವುದೇ ಸಾವುನೋವು ಸಂಭವಿಸಿರಲಿಲ್ಲ.
ತೆಲುಗರ ಬಗ್ಗೆ ತಮಿಳು ಅಭಿನೇತ್ರಿ ಕಸ್ತೂರಿ ಶಂಕರ್ ಹೇಳಿಕೆ: ವಿವಾದ
ಚೆನ್ನೈ: ತೆಲುಗು ಭಾಷಿಕರು ತಮಿಳುನಾಡಿಗೆ 300 ವರ್ಷಗಳ ಹಿಂದೆ ವಲಸೆ ಬಂದಿದ್ದು, ತಮಿಳು ರಾಣಿಯರ ಸೇವೆ ಸಲ್ಲಿಸುವ ಸಲುವಾಗಿ, ಅವರು ಸೇವಕರಾಗಿ ತಮಿಳು ರಾಜ್ಯಕ್ಕೆ ಬಂದಿದ್ದರು ಎಂದು ತಮಿಳು ನಟಿ ಕಸ್ತೂರಿ ಶಂಕರ್ ನೀಡಿದ ಹೇಳಿಕೆ ವಿವಾದಕ್ಕೀಡಾಗಿದೆ. ಕಸ್ತೂರಿ ಕೂಡಲೇ ಕ್ಷಮೆಯಾಚಿಸಬೇಕು ಎಂದು ಬಿಜೆಪಿ ಸೇರಿ ಅನೇಕ ರಾಜಕೀಯ ನಾಯಕರು ಹಾಗೂ ತೆಲುಗು ಭಾಷಿಕರು ಆಗ್ರಹಿಸಿದ್ದಾರೆ. ಆದರೆ ಇದಕ್ಕೆ ಸ್ಪಷ್ಟನೆ ನೀಡಿರುವ ನಟಿ, 'ನಾನು ಎಲ್ಲ ತೆಲುಗರ ಬಗ್ಗೆ ಹೇಳಿಲ್ಲ. ಇತಿಹಾಸವನ್ನು ಉಲ್ಲೇಖಿಸಿ ಕೆಲವು ತೆಲುಗರು 300 ವರ್ಷ ಹಿಂದೆ ತಮಿಳುನಾಡಿಗೆ ಬಂದಿದ್ದರ ಬಗ್ಗೆ ಹೇಳಿದ್ದೆ. ಅವರ ಕುಟುಂಬಸ್ಥರು ಈಗ ತಮಿಳುನಾಡಿನಲ್ಲಿ ಇದ್ದು ತಮಿಳರೇ ಆಗಿದ್ದಾರೆ. ಅವರ ಬಗ್ಗೆ ನಾನು ಹೇಳಿಕೆ ನೀಡಿಲ್ಲ' ಎಂದು ಸ್ಪಷ್ಟಪಡಿಸಿದ್ದಾರೆ.