ವಕ್ಫ್‌ ಜೆಪಿಸಿಗೆ ವಿಪಕ್ಷ ಸದಸ್ಯರ ಗುಡ್‌ಬೈ ಸುಳಿವು

By Kannadaprabha News  |  First Published Nov 5, 2024, 9:36 AM IST

ವಕ್ಫ್‌ (ತಿದ್ದುಪಡಿ) ಮಸೂದೆಯ ಜಂಟಿ ಪರಿಶೀಲನಾ ಸಮಿತಿಯ ಅಧ್ಯಕ್ಷರ ಏಕಪಕ್ಷೀಯ ನಿರ್ಧಾರಗಳಿಂದಾಗಿ ವಿಪಕ್ಷ ಸದಸ್ಯರು ಸಮಿತಿಯಿಂದ ಹೊರನಡೆಯುವ ಸೂಚನೆ ನೀಡಿದ್ದಾರೆ. 


ನವದೆಹಲಿ: ವಕ್ಫ್‌ (ತಿದ್ದುಪಡಿ) ಮಸೂದೆ జంటి ಪರಿಶೀಲನೆಗೆ ರಚಿಸಲಾಗಿರುವ ಸಂಸದೀಯ ಸಮಿತಿ (ಜೆಪಿಸಿ) ಭಾಗವಾಗಿರುವ ವಿಪಕ್ಷಗಳ ಸದಸ್ಯರು, ಸಮಿತಿಗೆ ವಿದಾಯ ಹೇಳುವ ಸುಳಿವು ನೀಡಿದ್ದಾರೆ.

ಜೆಪಿಸಿ ಅಧ್ಯಕ್ಷ ಜಗದಾಂಬಿಕಾ ಪಾಲ್, ಸಮಿತಿ ನಡಾವಳಿ ಕುರಿತು ಏಕಪಕ್ಷೀಯವಾಗಿ ನಿರ್ಧಾರ ತೆಗೆದುಕೊಳ್ಳುತ್ತಿದ್ದಾರೆ ಎಂದು ಆರೋಪಿಸಿರುವ ವಿಪಕ್ಷ ಸದಸ್ಯರು, ಈ ಸಂಬಂಧ ಲೋಕಸಭೆಯ ಸೀಕರ್ ಓಂ ಬಿರ್ಲಾ ಅವರನ್ನು ಮಂಗಳವಾರ ಭೇಟಿ ಮಾಡಿ ದೂರು ಸಲ್ಲಿಸಲು ನಿರ್ಧರಿಸಿದ್ದಾರೆ.

Latest Videos

undefined

'ಸಮಿತಿಯ ಸಭೆಗಳಿಗೆ ಪೂರ್ವ ಸಿದ್ಧತೆ ನಡೆಸಲು ಸಮಯ ನೀಡುತ್ತಿಲ್ಲ. ಎಲ್ಲಾ ನಿರ್ಧಾರಗಳನ್ನು ಪಾಲ್ ಏಕಪಕ್ಷೀಯವಾಗಿ ತೆಗೆದುಕೊಳ್ಳುತ್ತಿದ್ದಾರೆ. ಸಭೆಯಲ್ಲಿ ಪರಸ್ಪರ ಸಂವಾದಕ್ಕೆ ಅವಕಾಶವೇ ಇಲ್ಲದಾಗಿದೆ. ಹೀಗಾಗಿ ನಾವು ಸಮಿತಿಯಿಂದ ದೂರ ಸರಿಯುವುದು ಅನಿವಾರ್ಯವಾಗಿದೆ' ಎಂಬ ಅಂಶಗಳನ್ನು ಒಳಗೊಂಡ ಪತ್ರವನ್ನು ಸೋಮವಾರ, ವಿಪಕ್ಷಗಳ ನಾಯಕರ ನಡುವೆ ಹಂಚಿಕೊಳ್ಳಲಾಗಿದೆ. ಇದೇ ಪತ್ರವನ್ನು ಮಂಗಳವಾರ ಓಂ ಬಿರ್ಲಾಗೆ ಸಲ್ಲಿಸಲೂ ನಿರ್ಧರಿಸಲಾಗಿದೆ.

ಕೇರಳ ವಕ್ಸ್‌ ಭೂಮಿ ವಿವಾದ: ಸರ್ವಪಕ್ಷ ಸಭೆಗೆ ವಿಪಕ್ಷ ಪಟ್ಟು

ತಿರುವನಂತಪುರಂ: ಎರ್ನಾಕುಲಂನ ಮುನಂಬಂ ಗ್ರಾಮಸ್ಥರ ಜಮೀನನ್ನು ತನ್ನ ಆಸ್ತಿ ಎಂದು ಹೇಳಿರುವ ವಕ್ಸ್ ಮಂಡಳಿ ವಿರುದ್ಧ ಜನರು ಪ್ರತಿಭಟನೆಗೆ ಇಳಿದಿರುವ ಬೆನ್ನಲ್ಲೇ, ಸಮಸ್ಯೆ ಬಗೆಹರಿಸಲು ಸರ್ವಪಕ್ಷಗಳ ಸಭೆ ಕರೆಯುವಂತೆ ಕೇರಳ ವಿಪಕ್ಷ ನಾಯಕ ವಿ.ಡಿ. ಸತೀಶನ್ ಅವರು ಸಿಎಂ ಪಿಣರಾಯಿ ವಿಜಯನ್ ಅವರಿಗೆ ಆಗ್ರಹಿಸಿದ್ದಾರೆ. ಈ ಸಂಬಂಧ ಪತ್ರ ಬರೆದಿರುವ ಅವರು, 'ವಕ್ಸ್ ಮಂಡಳಿ 464 ಎಕರೆ ಜಮೀನನ್ನು ಹಿಂಪಡೆಯಲು ಕಾನೂನು ಕ್ರಮಕ್ಕೆ ಮುಂದಾಗಿರುವುದು 600ಕ್ಕೂ ಹೆಚ್ಚು ಕುಟುಂಬಗಳನ್ನು ಬೀದಿಗೆ ತಂದು ನಿಲ್ಲಿಸಿದೆ. ಜಮೀನನ್ನು ಯಾವುದೇ ಮುಸ್ಲಿಂ ಸಂಘಟನೆಗಳು ತಮ್ಮದೆಂದು ಹೇಳಿಕೊಂಡಿಲ್ಲ. ಈ ಸಮಸ್ಯೆಯನ್ನು 10 ನಿಮಿಷದಲ್ಲೇ ಬಗೆಹರಿಸಬಹುದು' ಎಂದು ಹೇಳಿದ್ದಾರೆ.

click me!