
ಸೇಲಂ(ಆ.11): ಕರ್ನಾಟಕದ ಕೃಷ್ಣರಾಜಸಾಗರ (ಕೆಆರ್‌ಎಸ್) ಹಾಗೂ ಕಬಿನಿ ಜಲಾಶಯಗಳಿಂದ ಭಾರಿ ಪ್ರಮಾಣದಲ್ಲಿ ನೀರು ಬಿಡುಗಡೆ ಮಾಡಲಾಗಿರುವ ಹಿನ್ನೆಲೆಯಲ್ಲಿ ತಮಿಳುನಾಡಿನ ಮೆಟ್ಟೂರು ಡ್ಯಾಂಗೆ ಎರಡೇ ದಿನದಲ್ಲಿ 16 ಅಡಿ ನೀರು ಬಂದಿದೆ.
ಜಲಾಶಯದ ಮಟ್ಟ87 ಅಡಿಗೆ ಏರಿಕೆಯಾಗಿದೆ. ಹೀಗಾಗಿ ಈ ವರ್ಷ ಕಾವೇರಿ ವಿವಾದ ತಲೆದೋರುವ ಸಾಧ್ಯತೆ ದೂರವಾಗತೊಡಗಿದೆ. ಜಲಾಶಯಕ್ಕೆ ಸೋಮವಾರ 1.30 ಲಕ್ಷ ಕ್ಯುಸೆಕ್ಸ್ ನೀರು ಹರಿದುಬರುತ್ತಿದೆ. ಹೊರಹರಿವು 10 ಸಾವಿರ ಕ್ಯುಸೆಕ್ಸ್ ಇದೆ. ಶನಿವಾರವಷ್ಟೇ 71 ಅಡಿ ಇದ್ದ ಜಲಾಶಯದ ಮಟ್ಟಎರಡೇ ದಿನದಲ್ಲಿ 16 ಅಡಿಯಷ್ಟುಹೆಚ್ಚಿರುವುದು ಇಲ್ಲಿ ಗಮನಾರ್ಹ.
ಧರಿಸಿದ್ದ ಸೀರೆ ಬಿಚ್ಚಿ ನದಿಗೆಸೆದು ಮುಳುಗುತ್ತಿದ್ದ ಯುವಕರ ಕಾಪಾಡಿದ ಮಹಿಳೆಯರು!
ಜಲಾಶಯದ ಗರಿಷ್ಠ ಮಟ್ಟ120 ಅಡಿಗಳಾಗಿವೆ. ಡ್ಯಾಂನ ನೀರು ಸಂಗ್ರಹ ಸಾಮರ್ಥ್ಯ 93 ಟಿಎಂಸಿ ಇದ್ದು, ಈಗ 49 ಟಿಎಂಸಿಯಷ್ಟುನೀರು ಸಂಗ್ರಹವಾಗಿದೆ. ಕಳೆದ ವರ್ಷ ಮುಂಗಾರಿನಲ್ಲಿ 2.5 ಲಕ್ಷ ಕ್ಯುಸೆಕ್ಸ್ ನೀರು ಕರ್ನಾಟಕದಿಂದ ಹರಿದುಬಂದಿತ್ತು. ಇದು ಈವರೆಗಿನ ದಾಖಲೆಯಾಗಿದೆ.
ಪ್ರಧಾನಿ ಮೋದಿ ಜೊತೆ ವಿಡಿಯೋ ಸಂವಾದ: ರಾಜ್ಯದ ಸಚಿವರಿಗೆ ಸಿದ್ದರಾಮಯ್ಯ ಸಲಹೆ
‘ಕರ್ನಾಟಕವು ಕೆಆರ್‌ಎಸ್ ಹಾಗೂ ಕಬಿನಿಯಿಂದ ಬಿಟ್ಟನೀರು, ತಮಿಳುನಾಡಿನಲ್ಲಿ ಕಾವೇರಿ ನದಿ ಪ್ರವೇಶಿಸುವ ಸ್ಥಳವಾದ ಬಿಳಿಗುಂಡ್ಲುವಿನಲ್ಲಿ ಭಾನುವಾರ 1.1 ಲಕ್ಷದಿಂದ 1.3 ಲಕ್ಷ ಕ್ಯುಸೆಕ್ಸ್ ಇತ್ತು. ಇದು ಕ್ರಮೇಣ 86 ಸಾವಿರ ಕ್ಯುಸೆಕ್ಸ್‌ಗೆ ಇಳಿಕೆಯಾಗಿದೆ. ಕರ್ನಾಟಕದಲ್ಲಿ ಮಳೆ ಇಳಿಕೆ ಆಗಿರುವುದೇ ಇದಕ್ಕೆ ಕಾರಣ. ಹೀಗಾಗಿ ಮುಂಬರುವ ದಿನಗಳಲ್ಲಿ ಒಳಹರಿವು ಕಡಿಮೆ ಆಗಲಿದೆ’ ಎಂದು ಅಧಿಕಾರಿಗಳು ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ