ಹಿಮಾಚಲದ ಪರ್ವತಗಳಲ್ಲಿ ರಫೇಲ್‌ ರಾತ್ರಿ ಸಮರಾಭ್ಯಾಸ!

By Kannadaprabha News  |  First Published Aug 11, 2020, 8:16 AM IST

ಹಿಮಾಚಲದ ಪರ್ವತಗಳಲ್ಲಿ ರಫೇಲ್‌ ರಾತ್ರಿ ಸಮರಾಭ್ಯಾಸ| ಗಡಿಯಲ್ಲಿ ಪರಿಸ್ಥಿತಿ ಹದಗೆಟ್ಟರೆ ದಾಳಿಗೆ ಸಜ್ಜು


ನವದೆಹಲಿ(ಆ.11): ಇತ್ತೀಚೆಗಷ್ಟೆಭಾರತೀಯ ವಾಯುಪಡೆಯ ಬತ್ತಳಿಕೆ ಸೇರಿರುವ ಐದು ರಫೇಲ್‌ ಯುದ್ಧ ವಿಮಾನಗಳು ಹಿಮಾಚಲ ಪ್ರದೇಶದ ಗುಡ್ಡಗಾಡು ಪ್ರದೇಶದಲ್ಲಿ ರಾತ್ರಿ ವೇಳೆ ಸಮರಾಭ್ಯಾಸ ನಡೆಸುತ್ತಿವೆ. ಒಂದು ವೇಳೆ ಲಡಾಖ್‌ನ ಗಡಿಯಲ್ಲಿ ಪರಿಸ್ಥಿತಿ ಹದಗೆಟ್ಟರೆ ಕಾರ್ಯಾಚರಣೆಗೆ ಸಿದ್ಧವಾಗಿವೆ.

ರಫೇಲ್‌ನಿಂದ ಈಗ ಚೀನಾಕ್ಕೂ ತಲ್ಲಣ..!

Tap to resize

Latest Videos

120 ಕಿ.ಮೀ. ದೂರದವರೆಗೆ ದಾಳಿ ನಡೆಸುವ ಸಾಮರ್ಥ್ಯವನ್ನು ಹೊಂದಿರುವ ಮೀಟಿಯೋರ್‌ ಹಾಗೂ ಫ್ರಾನ್ಸ್‌ನ ಸ್ಕಾಲ್ಪ್‌ ಕ್ಷಿಪಣಿಗಳನ್ನು ರಫೇಲ್‌ಗೆ ಅಳವಡಿಸಲಾಗಿದೆ. ಸ್ಕಾಲ್ಪ್‌ ಕ್ಷಿಪಣಿ 1300 ಕೆ.ಜಿ. ತೂಕ ಇದ್ದು, 600 ಕಿ.ಮೀ. ದೂರದಲ್ಲಿರುವ ಶತ್ರುವನ್ನು ನಿಖರವಾಗಿ ಸಂಹಾರ ಮಾಡಬಲ್ಲದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

"

ಫ್ರಾನ್ಸ್‌ನಿಂದ ಮೊದಲ ಬ್ಯಾಚಿನಲ್ಲಿ ಯುದ್ಧ ಸನ್ನದ್ಧ ಸ್ಥಿತಿಯಲ್ಲಿ 5 ರಫೇಲ್‌ ವಿಮಾನಗಳು ಜು.29ರಂದು ಅಂಬಾಲಾದ ಗೋಲ್ಡನ್‌ ಆ್ಯರೋ ಸ್ಕಾ$್ವರ್ಡನ್‌ಗೆ ಆಗಮಿಸಿದ್ದವು. ಫ್ರಾನ್ಸ್‌ನಿಂದ ಒಟ್ಟು 36 ವಿಮಾನಗಳನ್ನು ಖರೀದಿಸಲು ಭಾರತ ನಿರ್ಧರಿಸಿದೆ. ಈ ಪೈಕಿ ಗೋಲ್ಡನ್‌ ಆ್ಯರೋ ಸ್ಕಾ$್ವರ್ಡನ್‌ನಲ್ಲಿ 18 ರಫೇಲ್‌ ವಿಮಾನಗಳು ಇರಲಿವೆ. ಉಳಿದ 18 ವಿಮಾನಗಳು ಭೂತಾನ್‌ ಗಡಿಯಲ್ಲಿರುವ ಹಸಿಮ್ರಾ ವಾಯು ನೆಲೆಯಿಂದ ಕಾರ್ಯಾಚರಣೆ ನಡೆಸಲಿವೆ.

ಸೇನೆ ಸೇರಿದ ರಫೇಲ್, ಬಿಸಿ ಬಿಸಿ ಜಿಲೇಬಿ ಹಂಚಿದ ಉಡುಪಿ

ಅಲ್ಲದೇ ರಫೇಲ್‌ ವಿಮಾನಗಳನ್ನು ಲಡಾಖ್‌ ವಲಯದಲ್ಲಿ ತರಬೇತಿ ಉದ್ದೇಶಕ್ಕಾಗಿ ಬಳಕೆ ಮಾಡಿಕೊಳ್ಳಲಾಗುವುದು. ಇವು ಅನ್ಯ ದೇಶದ ರಾಡಾರ್‌ ಕಣ್ಣು ತಪ್ಪಿಸಿ ರಹಸ್ಯ ಕಾರ್ಯಾಚರಣೆ ನಡೆಸುವ ಸಾಮರ್ಥ್ಯವನ್ನು ಹೊಂದಿವೆ.

click me!