
ಸಂಚೋರ್(ಜೂ.20): ಆಗಸದಿಂದ ರಭಸವಾಗಿ ಬಂದ ಉಲ್ಕಾಶಿಲೆಯೊಂದು ಭೂಮಿಗೆ ಅಪ್ಪಳಿಸಿದೆ. ಬಿದ್ದ ರಭಸಕ್ಕೆ 3 ಅಡಿ ಆಳದ ಗುಂಡಿ ನಿರ್ಮಾಣವಾಗಿದೆ. ಸುಮಾರು 2.8 ಕೆಜಿ ತೂಕದ ಉಲ್ಕಾಶಿಲೆ ರಾಜಸ್ಥಾನದ ಸಿಂಚೋರ್ ಪಟ್ಟಣ ಸಮೀಪ ಬಿದ್ದಿದೆ. ಬಿದ್ಧ ರಭಸದ ಶಬ್ದ ಸುಮಾರು 2 ಕಿಲೋಮೀಟರ್ ದೂರದ ವರೆಗೂ ಕೇಳಿಸಿದೆ. ಅಕ್ಕಪಕ್ಕದ ನಿವಾಸಿಗಳು ಒಂದು ಕ್ಷಣ ಬೆಚ್ಚಿ ಬಿದ್ದಿದ್ದರು.
ಸೂರ್ಯ ಗ್ರಹಣ: ರಾಜ್ಯದ ವಿವಿಧ ದೇವಸ್ಥಾನಗಳಲ್ಲಿ ಪೂಜಾ ಆಚರಣೆಗಳು ಹೀಗಿರಲಿವೆ
ಭಾರತ-ಚೀನಾ ಗಡಿ ನಡುವಿನ ಸಂಘರ್ಷ ತೀವ್ರಗೊಳ್ಳುತ್ತಿರುವ ಬೆನ್ನಲ್ಲೇ, ಈ ರೀತಿಯ ಶಬ್ದ ಕೇಳಿದ ಸಿಂಚೋರ್ ಪಟ್ಟಣದ ಜನರು ಬೆಚ್ಚಿ ಬಿದ್ದಿದ್ದಾರೆ. ಉಲ್ಕಾಶಿಲೆ ಅಪ್ಪಳಿಸಿದ ಸುದ್ದಿ ಕೇಳಿ ಜನರು ನಿಟ್ಟುಸಿರು ಬಿಟ್ಟಿದ್ದಾರೆ. ಸ್ಥಳಕ್ಕೆ ಧಾವಿಸಿದ ಗ್ರಾಮಸ್ಥರು ಉಲ್ಕಾಶಿಲೆ ನೋಡಿ ದಂಗಾದಿದ್ದಾರೆ. ಕಾರಣ ಬೆಂಕಿ ಉಂಡೆಯಂತಿದ್ದ ಉಲ್ಕಾ ಶಿಲೆಯಿಂದ ದೂರ ಸರಿದಿದ್ದಾರೆ.
ಸುದ್ದಿ ತಿಳಿದ ಉಪ ಜಿಲ್ಲಾಧಿಕಾರಿ ಭೂಪೇಂದ್ರ ಯಾದವ್ ಸ್ಥಳಕ್ಕೆ ಬೇಟಿ ನೀಡಿದ್ದಾರೆ. ಉಲ್ಕಾಶಿಲೆ ಬಿಸಿ ಇದ್ದ ಡಿಸಿ, ಪೊಲೀಸ್ ಹಾಗೂ ತಜ್ಞರ ತಂಡ ಗಂಟೆಗಳ ಕಾಲ ಕಾದಿದ್ದಾರೆ. ಬಳಿಕ 2.8 ಕೆಜಿ ತೂಕದ ಉಲ್ಕಾಶಿಲೆಯನ್ನು ಸಮೀಪದ ಚಿನ್ನದ ಅಂಗಡಿಯಲ್ಲಿ ಪರೀಶಿಲನೆ ನಡೆಸಲಾಗಿದೆ. ಪ್ಲಾಟಿನಂ, ನಿಕೆಲ್ ಹಾಗೂ ಜರ್ಮಾನಿಯಂ ಹೊಂದಿರುವ ಉಲ್ಕಾ ಶಿಲೆಯನ್ನು ಪ್ಯಾಕ್ ಮಾಡಿ ದೆಹಲಿಗೆ ಕಳುಹಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ