ಕರ್ಟೈನ್ ಸುತ್ತಿಸಿ ಪರೀಕ್ಷೆ ಬರೆಸಿದ್ರು..! ಶಾರ್ಟ್ಸ್‌ ಧರಿಸಿದ್ರೇನು ತಪ್ಪು ?

By Suvarna News  |  First Published Sep 17, 2021, 3:56 PM IST
  • ಪರೀಕ್ಷೆ ಬರೆಯೋಕಜೆ ಬಂದವಳಿಗೆ ಕರ್ಟೈನ್ ಸುತ್ತಿದ್ರು..!
  • ಶಾರ್ಟ್ಸ್‌ ಧರಿಸಿ ಬಂದ್ರೆ ತಪ್ಪಾ ಅಂತಿದ್ದಾಳೆ 19ರ ಯುವತಿ

ಅಸ್ಸಾಂ(ಸೆ.17): ಶಾರ್ಟ್ಸ್ ಧರಿಸಿಕೊಂಡು ಪ್ರವೇಶ ಪರೀಕ್ಷೆ ಬರೆಯಲು ಬಂದ ಹುಡುಗಿಗೆ ಕರ್ಟೈನ್ ಸುತ್ತಿಸಿ ಪರೀಕ್ಷೆ ಬರೆಸಿದ ಘಟನೆ ಅಸ್ಸಾಂನ ತೇಜ್‌ಪುರ ನಗರದಲ್ಲಿ ನಡೆದಿದೆ. 19 ವರ್ಷದ ವಿದ್ಯಾರ್ಥಿನಿ ಶಾರ್ಟ್ಸ್‌ ಧರಿಸಿಕೊಂಡು ಪರೀಕ್ಷೆ ಬರೆಯಲು ಬಂದಿದ್ದಳು. ಆಕೆಯ ಕಾಲುಗಳು ಕಾಣುತ್ತಿದ್ದ ಹಿನ್ನೆಲೆಯಲ್ಲಿ ಕಾಲಿಗೆ ಕರ್ಟೈನ್ ಸುತ್ತಿ ಪರೀಕ್ಷೆ ಬರೆಸಿದ್ದಾರೆ.

ಜುಬ್ಲೀ ತಾಮುಲಿ ಜೋರ್ಹತ್‌ನ ಅಸ್ಸಾಂ ಕೃಷಿ ವಿಶ್ವವಿದ್ಯಾಲಯದ (ಎಎಯು) ಪ್ರವೇಶ ಪರೀಕ್ಷೆಗೆ ಹಾಜರಾದಾಗ ಈ ಘಟನೆ ಬುಧವಾರ ನಡೆದಿದೆ. ಆಕೆ ತನ್ನ ತಂದೆಯೊಂದಿಗೆ ತಮ್ಮ ಊರಾದ ಬಿಸ್ವನಾಥ ಚರಿಯಾಲಿಯಿಂದ 70 ಕಿಮೀ ದೂರದ ತೇಜಪುರಕ್ಕೆ ಬೆಳಗ್ಗೆ ಪರೀಕ್ಷೆಗೆ ಸರಿಯಾದ ಸಮಯಕ್ಕೆ ಪ್ರಯಾಣಿಸಿದ್ದರು.

Tap to resize

Latest Videos

ಜೀನ್ಸ್ ಪ್ಯಾಂಟ್ ಧರಿಸಿದ ಕಾರಣಕ್ಕೆ ಯುವತಿ ಮೇಲೆ ಕುಟುಂಬಸ್ಥರ ಹಲ್ಲೆ; ಸೇತುವೆ ಬಳಿ ಶವ ಪತ್ತೆ!

ಜೂಬ್ಲಿಯ ಪ್ರಕಾರ ಅವಳು ಪರೀಕ್ಷಾ ಸ್ಥಳವನ್ನು ಪ್ರವೇಶಿಸಿದಂತೆ ಯಾವುದೇ ತೊಂದರೆ ಇರಲಿಲ್ಲ. ಗಿರಿಜಾನಂದ ಚೌಧರಿ ಇನ್ಸ್ಟಿಟ್ಯೂಟ್ ಆಫ್ ಫಾರ್ಮಾಸ್ಯುಟಿಕಲ್ ಸೈನ್ಸಸ್ (ಜಿಐಪಿಎಸ್). ಪರೀಕ್ಷಾ ಹಾಲ್ ನಲ್ಲಿ ತೊಂದರೆ ಶುರುವಾಗಿದೆ. ಸೆಕ್ಯುರಿಟಿ ಗಾರ್ಡ್‌ಗಳು ನನ್ನನ್ನು ಆವರಣಕ್ಕೆ ಪ್ರವೇಶಿಸಲು ಅನುಮತಿಸಿದಾಗ, ನನ್ನನ್ನು ಪರೀಕ್ಷಾ ಹಾಲ್‌ನಲ್ಲಿ ತಡೆಯಲಾಗಿದೆ. ಅವರು ನನಗೆ ಶಾರ್ಟ್ಸ್ ಧರಿಸಿ ಪ್ರವೇಶಿಸಲು ಅವಕಾಶ ನೀಡುವುದಿಲ್ಲ ಎಂದು ಹೇಳಿದ್ದಾರೆ ಎಂದು ವಿದ್ಯಾರ್ಥಿನಿ ತಿಳಿಸಿದ್ದಾರೆ.

ಜುಬ್ಲಿ ಪ್ರಕಾರ ಹಾಲ್‌ ಟಿಕೆಟ್‌ನಲ್ಲಿ ಯಾವುದೇ ಡ್ರೆಸ್ ಕೋಡ್ ಉಲ್ಲೇಖಿಸಿರಲಿಲ್ಲ. ಕೆಲವು ದಿನಗಳ ಹಿಂದೆ, ನಾನು ಅದೇ ಊರಿನಲ್ಲಿ ನೀಟ್ ಪರೀಕ್ಷೆಗೆ ಹಾಜರಾಗಿದ್ದೆ, ಅದೇ ಉಡುಪನ್ನು ಧರಿಸಿದ್ದೆ - ಏನೂ ಆಗಲಿಲ್ಲ. AAU ಈ ಬಗ್ಗೆ ಬಗ್ಗೆ ಯಾವುದೇ ನಿಯಮಗಳನ್ನು ಹೊಂದಿಲ್ಲ, ಅಥವಾ ಪ್ರವೇಶ ಪತ್ರದಲ್ಲಿ ಏನನ್ನೂ ಉಲ್ಲೇಖಿಸಿಲ್ಲ. ಹಾಗಿರುವಾಗ ನನಗೆ ಹೇಗೆ ಗೊತ್ತಾಗಬೇಕು ಎಂದು ಪ್ರಶ್ನಿಸಿದ್ದಾರೆ.

ವಿಧಾನಸಭಾ ಸಚಿವಾಲಯದಲ್ಲಿ ಜೀನ್ಸ್-ಟಿ ಶರ್ಟ್ ನಿಷೇಧ; ತಕ್ಷಣದಿಂದ ಆದೇಶ ಜಾರಿ!

ಪರೀಕ್ಷೆಗೆ ಕುಳಿತುಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿದ್ದರಿಂದ ನಾನು ಹೊರಗೆ ಕಾಯುತ್ತಿದ್ದ ನನ್ನ ತಂದೆಯ ಬಳಿ ಅಳುತ್ತಾ ಹೋದೆ. ಕೊನೆಗೆ ಪರೀಕ್ಷೆಗಳ ನಿಯಂತ್ರಕರು ನಾನು ಪ್ಯಾಂಟ್ ಧರಿಸಿದರೆ ಪರೀಕ್ಷೆಯನ್ನು ಬರೆಯಬಹುದೆಂದು ಹೇಳಿದ್ದಾರೆ. ಹಾಗಾಗಿ ನನ್ನ ತಂದೆ ಪ್ಯಾಂಟ್ ಖರೀದಿಸಲು ಮಾರುಕಟ್ಟೆಗೆ ಧಾವಿಸಿದರು ಎಂದು ವಿದ್ಯಾರ್ಥಿನಿ ಹೇಳಿದ್ದಾಳೆ.

ಜೂಬ್ಲಿ ತಾನು ಅಮೂಲ್ಯವಾದ ಸಮಯವನ್ನು ಕಳೆದುಕೊಳ್ಳುತ್ತಿದ್ದೇನೆ. ಕಿರುಕುಳ ಅನುಭವಿಸುತ್ತಿದ್ದೇನೆ ಎಂದು ಹೇಳಿದ್ದಾರೆ. ಆಕೆಯ ತಂದೆ ಬಾಬುಲ್ ತಮುಲಿ ಸುಮಾರು 8 ಕಿಮೀ ದೂರದಲ್ಲಿರುವ ಮಾರುಕಟ್ಟೆಯಿಂದ ಟ್ರೌಸರ್ ಅನ್ನು ತಂದಿದ್ದಾರೆ. ಜೂಬ್ಲಿಗೆ ಅವಳ ಕಾಲುಗಳನ್ನು ಮುಚ್ಚಲು ಕರ್ಟೈನ್ ನೀಡಲಾಗಿತ್ತು.

ನನಗೆ ಬೇಸಿಕ್ ಜ್ಞಾನವಿಲ್ಲದಿದ್ದರೆ, ನಾನು ಜೀವನದಲ್ಲಿ ಹೇಗೆ ಯಶಸ್ವಿಯಾಗುತ್ತೇನೆ ಎಂದು ಅವರು ಹೇಳಿದ್ದಾರೆ. ಇದು ಸಂಪೂರ್ಣವಾಗಿ ಅನ್ಯಾಯ ಎಂದು ಹೇಳಿದ್ದಾರೆ. ಅವರು ಕೋವಿಡ್ ಪ್ರೋಟೋಕಾಲ್‌ಗಳು, ಮಾಸ್ಕ್ ಅಥವಾ ಟೆಂಪರೇಚರ್ ಪರೀಕ್ಷಿಸಲಿಲ್ಲ. ಆದರೆ ಅವರು ಶಾರ್ಟ್ಸ್ ಪರಿಶೀಲಿಸಿದ್ದಾರೆ ಎಂದು ವಿದ್ಯಾರ್ಥಿನಿ ಹೇಳಿದ್ದಾರೆ.

ಇದನ್ನು ನನ್ನ ಜೀವನದ ಅತ್ಯಂತ ಅವಮಾನಕರ ಅನುಭವ ಎಂದ ಜೂಬ್ಲಿ, ಈ ಪ್ರಸಂಗದ ಬಗ್ಗೆ ಅಸ್ಸಾಂ ಶಿಕ್ಷಣ ಸಚಿವ ರಾನೋಜ್ ಪೆಗು ಅವರಿಗೆ ಬರೆಯಲು ಯೋಜಿಸಿದ್ದಾಗಿ ಹೇಳಿದ್ದಾರೆ. ಪ್ರತಿಯೊಬ್ಬರೂ ತಮ್ಮದೇ ಆದ ಕಂಫರ್ಟ್ ಝೋನ್ ಹೊಂದಿದ್ದಾರೆ ಎಂದು ವಿದ್ಯಾರ್ಥಿನಿ ಹೇಳಿದ್ದಾರೆ. ಹುಡುಗರು ಉಡುಪನ್ನು ಧರಿಸಿದರೆ, ಯಾರೂ ಏನನ್ನೂ ಹೇಳುವುದಿಲ್ಲ. ಕೆಲವು ಪುರುಷರು ಸಾರ್ವಜನಿಕವಾಗಿ ಬರಿಮೈಯಲ್ಲಿ ಸುತ್ತುತ್ತಾರೆ. ಯಾರೂ ಏನೂ ಹೇಳುವುದಿಲ್ಲ. ಆದರೆ ಹುಡುಗಿ ಒಂದು ಜೊತೆ ಶಾರ್ಟ್ಸ್ ಧರಿಸಿದರೆ, ಜನರು ಬೆರಳು ತೋರಿಸುತ್ತಾರೆ ಎಂದಿದ್ದಾರೆ.

GIPS ನ ಪ್ರಾಂಶುಪಾಲರಾದ ಡಾ. ಅಬ್ದುಲ್ ಬಾಕೀ ಅಹ್ಮದ್ ಅವರು ಪರೀಕ್ಷೆ ಸಂದರ್ಭ ಕಾಲೇಜಿನಲ್ಲಿ ಇರಲಿಲ್ಲ ಆದರೆ ಘಟನೆ ನಡೆದಿದೆ ಎಂದು ತಿಳಿದೆ ಎಂದು ಹೇಳಿದ್ದಾರೆ. ಪರೀಕ್ಷೆಯೊಂದಿಗೆ ನಮಗೆ ಯಾವುದೇ ಸಂಬಂಧವಿಲ್ಲ - ನಮ್ಮ ಕಾಲೇಜನ್ನು ಕೇವಲ ಪರೀಕ್ಷೆಯ ಸೆಂಟರ್ ಆಗಿ ನೀಡಲಾಗಿದೆ. ಅಲ್ಲಿದ್ದ ಇನ್ವಿಜಿಲೇಟರ್ ಕೂಡ ಹೊರಗಿನಿಂದ ಬಂದವರು. ಶಾರ್ಟ್ಸ್‌ ಬಗ್ಗೆ ಯಾವುದೇ ನಿಯಮವಿಲ್ಲ, ಆದರೆ ಪರೀಕ್ಷೆಯ ಸಮಯದಲ್ಲಿ ಸರಿಯಾಗಿ ಉಡುಪು ಧರಿಸಿ ಬರುವುದು ಮುಖ್ಯವಾಗಿದೆ. ಪೋಷಕರು ಕೂಡ ಇದನ್ನು ಚೆನ್ನಾಗಿ ತಿಳಿದುಕೊಳ್ಳಬೇಕು ಎಂದಿದ್ದಾರೆ.

click me!