ಜಗತ್ತಿನಲ್ಲಿ ಮನುಷ್ಯರನ್ನು ಹೋಲುವ ರೀತಿಯಲ್ಲಿ 7 ಮಂದಿ ಇರುತ್ತಾರೆ ಎಂಬಂತೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಹೋಲುವ ಒಬ್ಬ ಪಾನಿಪುರಿ ಮಾರಾಟಗಾರರೊಬ್ಬರು ಗುಜರಾತಿನಲ್ಲಿದ್ದಾರೆ.
ಅಹಮದಾಬಾದ್ (ಏ.28): ಜಗತ್ತಿನಲ್ಲಿ ಮನುಷ್ಯರನ್ನು ಹೋಲುವ ರೀತಿಯಲ್ಲಿ 7 ಮಂದಿ ಇರುತ್ತಾರೆ ಎಂಬಂತೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಹೋಲುವ ಒಬ್ಬ ಪಾನಿಪುರಿ ಮಾರಾಟಗಾರರೊಬ್ಬರು ಗುಜರಾತಿನಲ್ಲಿದ್ದಾರೆ. ಗುಜರಾತಿನ ಆನಂದ್‌ನಲ್ಲಿ ತುಳಸಿ ಪಾನಿಪುರಿ ಅಂಗಡಿ ಮಾಲೀಕ 71 ವರ್ಷದ ಅನಿಲ್ ಭಟ್ ಠಕ್ಕರ್ ಅವರು ಥೇಟ್ ನೋಡಲು ಪ್ರಧಾನಿ ಮೋದಿ ಅವರಂತೆ ಕಾಣುತ್ತಿದ್ದಾರೆ.
ಇಲ್ಲಿಯ ಸ್ಥಳೀಯರು ಅವರಿಗೆ ಪ್ರಧಾನಿ ಮೋದಿ ಎಂದೇ ಭಾವಿಸಿ ತುಂಬಾ ಗೌರವ ಕೊಡುತ್ತಾರೆ. ಈ ಬಗ್ಗೆ ಠಕ್ಕರ್ ಮಾತನಾಡಿ, ‘ನಾನು ನೋಡಲು ಮೋದಿ ಅವರಂತೆ ಕಾಣುತ್ತಿರುವುದರಿಂದ ನಮ್ಮ ಅಂಗಡಿಗೆ ಬರುವ ಗ್ರಾಹಕರಿಂದ ಸಾಕಷ್ಟು ಪ್ರೀತಿ ಮತ್ತು ಗೌರವದಿಂದ ಕಾಣುತ್ತಿದ್ದಾರೆ. ನನ್ನೊಂದಿಗೆ ಪ್ರವಾಸಿಗರು ಸೆಲ್ಫೀ ಕೂಡ ತೆಗೆಸಿಕೊಳ್ಳುತ್ತಾರೆ’ ಎಂದು ಹೇಳಿದರು.
ಠಕ್ಕರ್ ಜೊತೆ ಮುಂಬೈನ ಮಲಾಡ್‌ನವರಾದ ವಿಕಾಸ್ ಮಹಾಂತೇ ಕೂಡ ಪ್ರಧಾನಿ ಮೋದಿ ಅವರನ್ನು ಹೋಲುತ್ತಾರೆ. ಇವರು ಇತ್ತೀಚೆಗೆ ಕಾರ್ಯಕ್ರಮವೊಂದರಲ್ಲಿ ಗರ್ಬಾ ನುಡಿಸಿದ್ದರು. ಈ ವಿಡಿಯೋ ವೈರಲ್ ಆಗಿದ್ದು, ಮೋದಿ ಅವರ ಡೀಪ್‌ಫೇಕ್ ವಿಡಿಯೋ ಎಂದು ತಪ್ಪಾಗಿ ಗ್ರಹಿಸಲಾಗಿತ್ತು. ಮಹಾಂತೇ ಅವರದ್ದೇ ಆದ ಅಭಿಮಾನಿ ಬಳಗವನ್ನು ಹೊಂದಿದ್ದಾರೆ.
ಸಿಎಂ ಸಿದ್ದರಾಮಯ್ಯ ಬದಲಿಸಲು ‘ಕಾಂಗ್ರೆಸ್’ ಚಿಂತನೆ: ಪ್ರಧಾನಿ ಮೋದಿ
ಒಟ್ಟಾರೆಯಾಗಿ ಠಕ್ಕರ್ ಹಾಗೂ ಮಹಾಂತೇ ಅವರು ಪ್ರಧಾನಿ ಮೋದಿ ಅವರಂತೆ ಕಾಣುವ ಸತ್ಯಾಂಶ ಒಪ್ಪಲೇಬೇಕು. ಕೆಲ ಸಮಯಗಳ ಹಿಂದೆ ಹಂಚಿಕೊಳ್ಳಲಾದ ಈ ವಿಡಿಯೋ 37.1 ಮಿಲಿಯನ್ ವೀಕ್ಷಣೆಗಳನ್ನು ಹಾಗೂ 1.5 ಮಿಲಿಯನ್ ಲೈಕ್ಸ್ ಗಳನ್ನು ಪಡೆದುಕೊಂಡಿದ್ದು, ಅಬ್ಬಬ್ಬಾ ಇವ್ರ ಧ್ವನಿ ಕೂಡಾ ಥೇಟ್ ಮೋದಿಯವರಂತೆಯೇ ಇದೆ ಎಂದು ಹೇಳುತ್ತಾ, ಈ ವಿಡಿಯೋಗೆ ನೆಟ್ಟಿಗರು ಭಾರಿ ಮೆಚ್ಚುಗೆಯನ್ನು ಸೂಚಿಸಿದ್ದಾರೆ.