
ಮೇರಠ್ (ಏ.20): ನೂರು ಸುಳ್ಳು ಹೇಳಿ ಒಂದು ಮದುವೆ ಮಾಡು ಎಂಬ ಗಾದೆ ಮಾತನ್ನು ನಿಜಮಾಡಲೋ ಎಂಬಂತಿರುವ ಘಟನೆಯೊಂದು ಉತ್ತರಪ್ರದೇಶದ ಮೇರಠ್‌ನಲ್ಲಿ ನಡೆದಿದೆ.
ಮೊಹಮ್ಮದ್ ಅಜೀಂ ಎಂಬ 22 ವರ್ಷದ ಬ್ರಹ್ಮಪುರಿ ನಿವಾಸಿ ಯುವಕನ ಮದುವೆಯನ್ನು ಅವನ ಸಹೋದರ ನದೀಂ ಮತ್ತು ಅತ್ತಿಗೆ ಶೈದಾ, ಶಾಮ್ಲಿ ಜಿಲ್ಲೆಯ ಮನ್ತಾಶಾ ಎಂಬ ಯುವತಿಯೊಂದಿಗೆ ನಿಗದಿಪಡಿಸಿದ್ದರು. ಅದರಂತೆ ಮಾ.31ರಂದು ಮದುವೆಯೂ ನಡೆಯಿತು. ಈ ವೇಳೆ, ಸಂಪ್ರಾದಾಯದಂತೆ ಮೌಲ್ವಿ ಹುಡುಗಿಯ ಹೆಸರನ್ನು ತಾಹಿರಾ ಎಂದು ಹೇಳಿದಾಗ ಅಜೀಂ ಅವಾಕ್ಕಾಗಿದ್ದಾನೆ. ಬಳಿಕ ಆಕೆಯ ಮುಸುಕು ತೆಗೆದಾಗ 21 ವರ್ಷದ ಯುವತಿಯ ಬದಲು, ವಧುವಿನ ಉಡುಗೆಯಲ್ಲಿದ್ದ ಆಕೆಯ 45 ವರ್ಷದ ತಾಯಿಯ ದರ್ಶನವಾಗಿದೆ. ಹೀಗೆ, ತಾನು ವರಿಸಿದ್ದು ವಧುವಿನ ತಾಯಿಯನ್ನು ಎಂದು ತಿಳಿದು ಮದುಮಗ ಕಕ್ಕಾಬಿಕ್ಕಿಯಾಗಿದ್ದಾನೆ.
ಇದನ್ನೂ ಓದಿ: ತಾನು ಡೇಟ್ ಮಾಡ್ತಿರೋದು 26ರ ಹುಡುಗಿ ಅಲ್ಲ 48ರ ಆಂಟಿ ಅಂತ ತಿಳಿದು ಗೋಳಾಡಿದ ಯುವಕ
ತನಗಾದ ವಂಚನೆಯ ವಿರುದ್ಧ ಅಜೀಂ ಪ್ರತಿಭಟಿಸಿದಾಗ, ಆತನ ಮೇಲೆ ಸುಳ್ಳು ಅತ್ಯಾಚಾರದ ಆರೋಪ ಹೊರಿಸುವುದಾಗಿ ನದೀಂ ಮತ್ತು ಶೈದಾ ಬೆದರಿಸಿದ್ದಾರೆ. ಆದರೂ ಅಜೀಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ‘ವಧುವಿನ ಕುಟುಂಬಕ್ಕೆ 5 ಲಕ್ಷ ರು.ವನ್ನೂ ಕೊಡಲಾಗಿತ್ತು’ ಎಂದು ಆರೋಪಿಸಿದ್ದಾನೆ.
ಪ್ರಕರಣದ ಕುರಿತು ಮಾತನಾಡಿದ ಬ್ರಹ್ಮಪುರಿಯ ಸಿಇಒ ಸೌಮ್ಯಾ ಆಸ್ಥಾನಾ, ‘ವಧು-ವರರ ಕುಟುಂಬಗಳು ಇತ್ಯರ್ಥ ಮಾಡಿಕೊಂಡಿದ್ದು, ತಾನು ಕಾನೂನು ಕ್ರಮ ಬಯಸುವುದಿಲ್ಲ ಎಂದು ಹೇಳಿ ಅಜೀಂ ದೂರನ್ನು ಹಿಂಪಡೆದಿದ್ದಾನೆ’ ಎಂದು ತಿಳಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ