ಶಾಹೀನ್ ಬಾಗ್‌ನಲ್ಲಿ ಮಧ್ಯಸ್ಥಿಕೆದಾರರು: ಮನವಿಗೆ ಸ್ಪಂದಿಸಿದರಾ ಪ್ರತಿಭಟನಾಕಾರರು?

Suvarna News   | Asianet News
Published : Feb 19, 2020, 07:01 PM IST
ಶಾಹೀನ್ ಬಾಗ್‌ನಲ್ಲಿ  ಮಧ್ಯಸ್ಥಿಕೆದಾರರು: ಮನವಿಗೆ ಸ್ಪಂದಿಸಿದರಾ ಪ್ರತಿಭಟನಾಕಾರರು?

ಸಾರಾಂಶ

ಶಾಹೀನ್ ಬಾಗ್ ಪ್ರತಿಭಟನಾಕಾರರ ಮಧ್ಯೆ ಮಧ್ಯಸ್ಥಿಕೆದಾರರು| ಪ್ರತಿಭಟನಾ ಸ್ಥಳ ಬದಲಿಸುವಂತೆ ಪ್ರತಿಭಟನಾಕಾರರಲ್ಲಿ ಮನವಿ| ಸುಪ್ರೀಂಕೋರ್ಟ್ ನೇಮಿಸಿದ ಮಧ್ಯಸ್ಥಿಕೆದಾರರಿಂದ ಮನವೋಲಿಕೆ ಯತ್ನ| ವಕೀಲರಾದ ಸಂಜಯ್ ಹೆಗ್ಡೆ ಮತ್ತು ಸಾಧನಾ ರಾಮಚಂದ್ರನ್ ಮಧ್ಯಸ್ಥಿಕೆ| ‘ಪ್ರತಿಭಟನೆ ನಡೆಸುವ ನಿಮ್ಮ ಹಕ್ಕಿನಿಂದ ಇತರರ ಹಕ್ಕಿಗೆ ಧಕ್ಕೆಯಾಗಬಾರದು’| ಸಿಎಎ ವಿರೋಧಿಸಿ ಕಳೆದ 67 ದಿನಗಳಿಂದ ನಿರಂತರ ಪ್ರತಿಭಟನೆ|

ನವದೆಹಲಿ(ಫೆ.19): ಶಾಹೀನ್ ಬಾಗ್ ಪ್ರತಿಭಟನಾಕಾರರೊಂದಿಗೆ ಸಂಧಾನ ನಡೆಸಲು ಸುಪ್ರೀಂ ಕೋರ್ಟ್ ನೇಮಿಸಿರುವ ಇಬ್ಬರು ಮಧ್ಯಸ್ಥಿಕೆದಾರರು ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದ್ದಾರೆ. 

ಪ್ರತಿಭಟನೆ ನಡೆಸುವ ನಿಮ್ಮ ಹಕ್ಕನ್ನು ಸುಪ್ರೀಂಕೋರ್ಟ್ ಎತ್ತಿ ಹಿಡಿದಿದೆ. ಆದರೆ ಇದರಿಂದ ಇತರರ ಹಕ್ಕಿಗೆ ಧಕ್ಕೆಯಾಗಬಾರದು ಎಂಬ ಉದ್ದೇಶದಿಂದ ಪ್ರತಿಭಟನೆಯ ಸ್ಥಳ ಬದಲಿಸುವಂತೆ  ಮಧ್ಯಸ್ಥಿಕೆದಾರರು ಪ್ರತಿಭಟನಾಕಾರರಲ್ಲಿ ಮನವಿ ಮಾಡಿದರು. 

ಶಾಹೀನ್ ಬಾಗ್’ಗೆ ಭೇಟಿ ನೀಡಿ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ  ವಕೀಲರಾದ ಸಂಜಯ್ ಹೆಗ್ಡೆ ಮತ್ತು ಸಾಧನಾ ರಾಮಚಂದ್ರನ್, ಬೇರೆ ಸ್ಥಳದಲ್ಲಿ ಪ್ರತಿಭಟನೆಯನ್ನು ಮುಂದುವರೆಸುವಂತೆ ಮನವಿ ಮಾಡಿದರು.

ಪ್ರತಿಭಟನೆ ಮಾಡುವ ಹಕ್ಕು ನಿಮಗೆ ಇದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ.  ಅದೇ ರೀತಿ ಬೇರೆಯವರಿಗೂ ಈ ರಸ್ತೆ ಬಳಸುವ ಮತ್ತು ಇಲ್ಲಿನ ಅಂಗಡಿಗಳನ್ನು ತೆರೆಯುವ ಹಕ್ಕು ಇದೆ. ಹೀಗಾಗಿ ಪ್ರತಿಭಟನಾ ಸ್ಥಳವನ್ನು ಬೇರೆ ಕಡೆ ಸ್ಥಳಾಂತರಿಸಿ ಎಂದು ವಕೀಲರಾದ ಸಂಜಯ್ ಹೆಗ್ಡೆ ಮತ್ತು ಸಾಧನಾ ರಾಮಚಂದ್ರನ್ ಮನವಿ ಮಾಡಿದರು. 

ಶಾಹೀನ್ ಬಾಗ್ ಪ್ರತಿಭಟನಾಕಾರರನ್ನು ಸ್ಥಳಾಂತರಿಸುವುದಕ್ಕಾಗಿ ವಕೀಲರಾದ ಸಂಜಯ್ ಹೆಗ್ಡೆ ಮತ್ತು ಸಾಧನಾ ರಾಮಚಂದ್ರನ್ ಅವರನ್ನು ಸುಪ್ರೀಂಕೋರ್ಟ್ ಮಧ್ಯಸ್ಥಿಕೆದಾರರನ್ನಾಗಿ ನೇಮಿಸಿದೆ.

ಶಾ ಮನೆಯತ್ತ ಹೊರಟ ಶಾಹೀನ್ ಬಾಗ್ ದಂಡು: ಪೊಲೀಸರು ತಡೆದರು ಪ್ರತಿಭಟನಾಕಾರರ ಕಂಡು!

ಶಾಹೀನ್ ಬಾಗ್’ನಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಕಳೆದ 67 ದಿನಗಳಿಂದ ನಿರಂತರ ಪ್ರತಿಭಟನೆ ನಡೆಯುತ್ತಿರುವುದನ್ನು ಇಲ್ಲಿ ಸ್ಮರಿಸಬಹುದು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಮದುವೆ ನಂತರ ಕಾರಿನ ಸ್ಟೇರಿಂಗ್ ಹಿಡಿದ ವಧು; ದೇವ್ರೇ ಕಾಪಾಡಪ್ಪಾ ಎಂದು ಕೈಮುಗಿದು ಕುಳಿತುಕೊಂಡ ವರ!
ಇಂಟರ್ನೆಟ್ ಇಲ್ಲದೆಯೂ UPI ಪಾವತಿ ಮಾಡಬಹುದು, *99# ಮೂಲಕ ಹಣ ಕಳುಹಿಸುವುದು ಹೇಗೆ?