ಹೀಗೊಬ್ಬ ಟ್ರಂಪ್ ಅಭಿಮಾನಿ: ಮೋದಿ ಈತನ ಆಸೆ ಈಡೇರಿಸೋ ಗುಮಾನಿ!

Suvarna News   | Asianet News
Published : Feb 19, 2020, 05:24 PM IST
ಹೀಗೊಬ್ಬ ಟ್ರಂಪ್ ಅಭಿಮಾನಿ: ಮೋದಿ ಈತನ ಆಸೆ ಈಡೇರಿಸೋ ಗುಮಾನಿ!

ಸಾರಾಂಶ

ಫೆ.24ರಿಂದ ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಭಾರತ ಭೇಟಿ| ಟ್ರಂಪ್’ಗೆ ಸಾಥ್ ನೀಡಲಿರುವ ಪತ್ನಿ ಮೆಲಾನಿಯಾ ಟ್ರಂಪ್| ತೆಲಂಗಾಣದಲ್ಲಿ ಇದ್ದಾನೊಬ್ಬ ಟ್ರಂಪ್ ಅಭಿಮಾನಿ| ನಿತ್ಯವೂ 6 ಅಡಿ ಎತ್ತರದ ಟ್ರಂಪ್ ಪ್ರತಿಮೆಗೆ ಪೂಜೆ| ಟ್ರಂಪ್ ಕೃಷ್ಣ ಎಂದೇ ಖ್ಯಾತಿ ಗಳಿಸಿರುವ ತೆಲಂಗಾಣದ ಬುಸ್ಸಾ ಕೃಷ್ಣ| ಟ್ರಂಪ್ ಧೀರ್ಘಾಯುಷ್ಯ ಬಯಿಸಿ ಪ್ರತಿ ಶುಕ್ರವಾರ ಉಪವಾಸ ಮಾಡುವ ಬುಸ್ಸಾ ಕೃಷ್ಣ| ಟ್ರಂಪ್ ಭೇಟಿಗೆ ಅವಕಾಶ ಮಾಡಿಕೊಡುವಂತೆ ಕೇಂದ್ರ ಸರ್ಕಾರಕ್ಕೆ ಮನವಿ| 

ಹೈದರಾಬಾದ್(ಫೆ.19): ಇದೇ ಫೆ.24ರಿಂದ ಅಮೆರಿಕ ಅಧ್ಯಕ್ಷ ಡೋನಾಲ್ಡ್‌ ಟ್ರಂಪ್‌ ಎರಡು ದಿನಗಳಖ ಭಾರತ ಪ್ರವಾಸ ಕೈಗೊಳ್ಳಲಿದ್ದಾರೆ. ಟ್ರಂಪ್ ಸ್ವಾಗತಕ್ಕೆ ಭರ್ಜರಿ ಸಿದ್ಧತೆ ಅಂತಿಮ ಹಂತದಲ್ಲಿದೆ.

ಇನ್ನು ಭಾರತಕ್ಕೂ ಭೇಟಿ ನೀಡುವ ಮುನ್ನವೇ ದೇಶಾದ್ಯಂತ ಟ್ರಂಪ್‌ ಹವಾ ಜೋರಾಗಿದೆ. ತೆಲಂಗಾಣದ ಟ್ರಂಪ್‌ ಅಭಿಮಾನಿಯೊಬ್ಬ ಟ್ರಂಪ್‌ ಅವರ 6 ಅಡಿ ಎತ್ತರದ ಪ್ರತಿಮೆ ನಿರ್ಮಿಸಿದ್ದು, ಅಮೆರಿಕ ಅಧ್ಯಕ್ಷರನ್ನು ಭೇಟಿಯಾಗುವ ಇಂಗಿತ ವ್ಯಕ್ತಪಡಿಸಿದ್ದಾರೆ.

ಇಲ್ಲಿನ ಕೊನ್ನೆಯ ಗ್ರಾಮದ ಬುಸ್ಸಾ ಕೃಷ್ಣ ಎಂಬಾತ ಡೋನಾಲ್ಡ್ ಟ್ರಂಪ್ ಅಭಿಮಾನಿಯಾಗಿದ್ದು, ಅವರನ್ನು ದೇವರು ಎಂದೇ ಪ್ರಾರ್ಥಿಸುತ್ತಾನೆ. ಟ್ರಂಪ್ ಪ್ರತಿಮೆಗೆ ನಿತ್ಯವೂ ಬುಸ್ಸಾ ಕೃಷ್ಣ ಪೂಜೆ ಸಲ್ಲಿಸುತ್ತಾನೆ.

ಬುಸ್ಸಾ ಕೃಷ್ಣನ ಟ್ರಂಪ್ ಮೇಲಿನ ಅಭಿಮಾನ ನೋಡಿ ಗ್ರಾಮಸ್ಥರೆಲ್ಲರೂ ಆತನನ್ನು ಟ್ರಂಪ್ ಕೃಷ್ಣ ಎಂದೇ ಕರೆಯುತ್ತಾರೆ. ಅಲ್ಲದೇ ಬುಸ್ಸಾ ಕೃಷ್ಣ ವಾಸವಿರುವ ಮನೆಗೆ ‘ಟ್ರಂಪ್ ಹೌಸ್’ ಎಂದು ನಾಮಕರಣ ಮಾಡಲಾಗಿದೆ.

ಭಾರತ ಚೆನ್ನಾಗಿ ನೋಡಿಕೊಂಡಿಲ್ಲ: ಬರವುದಕ್ಕೂ ಮೊದಲೇ ಇದೇನು ಹೇಳಿಬಿಟ್ರಿ ಟ್ರಂಪ್?

ಭಾರತ-ಅಮೆರಿಕ ಸಂಬಂಧಗಳು ಸದೃಢವಾಗಿ ಇರಬೇಕೆಂದು ನಾನು ಬಯಸುತ್ತೇನೆ. ಪ್ರತಿ ಶುಕ್ರವಾರ ನಾನು ಟ್ರಂಪ್ ಅವರ ದೀರ್ಘಾಯಸ್ಸು ಬಯಸಿ ಉಪವಾಸ ಮಾಡುತ್ತೇನೆ ಎಂದು ಬುಸ್ಸಾ ಕೃಷ್ಣ ಹೇಳಿದ್ದಾರೆ.

ಇನ್ನು ಟ್ರಂಪ್ ಮೇಲಿನ ಬುಸ್ಸಾ ಕೃಷ್ಣ ಅವರ ಅಭಿಮಾನಕ್ಕೆ ಗ್ರಾಮಸ್ಥರು ಕೂಡ ಸಾಥ್ ನೀಡಿದ್ದು, ಆತನ ಭಕ್ತಿ ನಿಜಕ್ಕೂ ಅಪರೂಪ ಎಂದು ಹೇಳುತ್ತಾರೆ.

ಟ್ರಂಪ್ ಭಾರತ ಭೇಟಿಯ ವೇಳೆ ತಾನು ಅವರನ್ನು ಭೇಟಿಯಾಗಲು ಬಯಸಿರುವುದಾಗಿ ತಿಳಿಸಿರುವ ಬುಸ್ಸಾ ಕೃಷ್ಣ, ಭೇಟಿಗೆ ಅವಕಾಶ ಮಾಡಿಕೊಡುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

 ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ ಫೆಬ್ರವರಿ 24 ರಂದು ಎರಡು ದಿನಗಳ ಭಾರತ ಪ್ರವಾಸಕ್ಕೆ ಆಗಮಿಸಲಿದ್ದು, ಅವರೊಂದಿಗೆ ಅಮೆರಿಕ ಪ್ರಥಮ ಮಹಿಳೆ ಹಾಗೂ ಟ್ರಂಪ್ ಪತ್ನಿ ಮೆಲಾನಿಯಾ ಟ್ರಂಪ್ ಕೂಡ ಭಾರತಕ್ಕೆ ಬರಲಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಬಂಕೆ ಬಿಹಾರಿ ದೇಗುಲದಲ್ಲಿ ಶಾಲಿನ ಮೇಲೆ ಬಿತ್ತು ಚಿನ್ನದ ಉಂಗುರ: ಶ್ರೀಕೃಷ್ಣನ ಪ್ರತಿಮೆಯನ್ನೇ ಮದುವೆಯಾದ ಪಿಂಕಿ
'ವಂದೇ ಮಾತರಂ..' ದೇಶದ ಸ್ವಾತಂತ್ರ್ಯ ಹೋರಾಟಕ್ಕೆ ಶಕ್ತಿ ತುಂಬಿದ ಮಂತ್ರ ಎಂದ ಪ್ರಧಾನಿ ಮೋದಿ