
ನವದೆಹಲಿ(ಜೂ.24): ಕೋವಿಡ್ 3ನೇ ಅಲೆ ಮಕ್ಕಳ ಮೇಲೆ ಪರಿಣಾಮ ಬೀರಲಿದೆ ಎಂಬ ಆತಂಕಗಳ ಬೆನ್ನಲ್ಲೇ, ದಡಾರ ತಡೆಗೆ ಮಕ್ಕಳಿಗೆ ನೀಡುವ ಲಸಿಕೆಯು, ಅವರನ್ನು ಕೊರೋನಾದ ಗಂಭೀರ ಅಪಾಯದಿಂದ ತಡೆಗಟ್ಟಬಲ್ಲ ಸಾಮರ್ಥ್ಯ ಹೊಂದಿದೆ ಎಂದು ಅಧ್ಯಯನ ವರದಿಯೊಂದು ತಿಳಿಸಿದೆ.
ಕೊರೋನಾ ವೈರಸ್ ಮೇಲೆ ದಡಾರ ಲಸಿಕೆಯ ಪರಿಣಾಮಗಳ ಕುರಿತು ವಿಶ್ವದಲ್ಲೇ ಮೊದಲ ಬಾರಿಗೆ ಪುಣೆಯ ಬಿ.ಜೆ.ವೈದ್ಯಕೀಯ ಕಾಲೇಜಿನ ತಜ್ಞರ ತಂಡವೊಂದು ಅಧ್ಯಯನ ನಡೆಸಿತ್ತು.
ಭೂಗತ ಪಾತಕಿ ದಾವೂದ್ ಇಬ್ರಾಹಿಂ ಸಹೋದರ ಇಕ್ಬಾಲ್ ಕಸ್ಕರ್ ಅರೆಸ್ಟ್!
ಈ ವೇಳೆ, ದಡಾರಕ್ಕೆ ಲಸಿಕೆ ಪಡೆದ ಮಕ್ಕಳ ಮೇಲೆ ವೈರಸ್ ದಾಳಿ ನಡೆಸಿದ ಸಂದರ್ಭದಲ್ಲಿ ಅವರಲ್ಲಿ ಸೋಂಕಿನ ತೀವ್ರತೆ ಕಡಿಮೆ ಇರುವುದು ಕಂಡುಬಂದಿದೆ. ಆದರ ಲಸಿಕೆ ಪಡೆಯದೇ ಇದ್ದ ಮಕ್ಕಳಲ್ಲಿ ಇಂಥ ತೀವ್ರತೆ ಹೆಚ್ಚಿರುವುದು ಕಂಡುಬಂದಿದೆ. ಕೊರೋನಾ ವೈರಸ್ ವಿರುದ್ಧ ದಡಾರ ಲಸಿಕೆ ಶೇ.87.5ರಷ್ಟುಪರಿಣಾಮಕಾರಿ ಎಂದು ಕಂಡುಬಂದಿದೆ ಎಂದು ವರದಿ ಹೇಳಿದೆ.
ಅಲ್ಲದೆ ದಡಾರ ಲಸಿಕೆ ಮಕ್ಕಳಿಗೆ ಕೊರೋನಾ ವಿರುದ್ಧ ಸುದೀರ್ಘ ಅವಧಿಗೆ ರಕ್ಷಣೆ ನೀಡುವ ಸಾಮರ್ಥ್ಯ ಹೊಂದಿದೆ. ಈ ಕುರಿತು ಇನ್ನಷ್ಟುಅಧ್ಯಯನ ನಡೆಯಬೇಕಿದೆ ಎಂದು ಹ್ಯೂಮನ್ ವ್ಯಾಕ್ಸಿನ್ ಮತ್ತು ಇಮ್ಯೂನೊಥೆರಪಾಟಿಕ್ಸ್ ಜರ್ನಲ್‌ನಲ್ಲಿ ಪ್ರಕಟವಾದ ಅಧ್ಯಯನ ವರದಿಯಲ್ಲಿ ತಿಳಿಸಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ