
ಲಕ್ನೋ(ಜೂ.23): ಉತ್ತರ ಪ್ರದೇಶದ ಮಥುರಾದಲ್ಲಿ ಶಾಕಿಂಗ್ ಕೃತ್ಯವೊಂದು ಬೆಳಕಿಗೆ ಬಂದಿದೆ. ಮೂವರು ದುಷ್ಟರು 17 ವರ್ಷದ ಬಾಲಕಿಗೆ ಥಳಿಸಿ ಎರಡಂತಸ್ತಿನ ಕಟ್ಟಡದಿಂದ ಕೆಳ ದೂಡಿದ್ದಾರೆ, ಬಳಿಕ ಅಲ್ಲಿಂದ ಪರಾರಿಯಾಗಿದ್ದಾರೆ. ಬಾಲಕಿಯ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎಂದು ವೈದ್ಯರು ತಿಳಿಸಿದ್ದು, ಬೆನ್ನುಮೂಳೆಗೆ ತೀವ್ರ ಹಾನಿಯಾಗಿದೆ ಎಂದಿದ್ದಾರೆ.
ಸೋಶಿಯಲ್ ಮಿಡಿಯಾದಲ್ಲಿ ವಿಡಿಯೋ ವೈರಲ್
ಈ ಭಯಾನಕ ಘಟನೆ ನಡೆದಿದ್ದು ಉತ್ತರ ಪ್ರದೇಶದ ಮಥುರಾ ಜಿಲ್ಲೆಯ ಕೋತ್ವಾಲಿ ಠಾಣಾ ವ್ಯಾಪ್ತಿಯಲ್ಲಿ. ಸೋಮವಾರ ರಾತ್ರಿ ನಡೆದ ಈ ಘಟನೆ ಅಲ್ಲಿನ ಸಿಸಿಟಿವಿಯಲ್ಲಿ ದಾಖಲಾಗಿದ್ದು, ಸೋಶಿಯಲ್ ಮೀಡಿಯಾದಲ್ಲೂ ವೈರಲ್ ಆಗಿವೆ. ಈ ದೃಶ್ಯಗಳನ್ನಾಧರಿಸಿ ಪೊಲೀಸರು ಈಗಾಗಲೇ ಇಬ್ಬರನ್ನು ಅರೆಸ್ಟ ಮಾಡಿ, ವಿಚಾರಣೆ ಆರಮಭಿಸಿದ್ದಾರೆ.
ಅತ್ಯಾಚಾರಕ್ಕೂ ಮುನ್ನ ಅರೆನಗ್ನ ಪಾರ್ಟಿ, ಬಾಂಗ್ಲಾ ರಹಸ್ಯ
ಕುಟುಂಬ ಸದಸ್ಯರಿಗೆ ಥಳಿಸಿ ಮಗಳ ಬಳಿ ತಲುಪಿದ್ರು
ಈ ಬಗ್ಗೆ ಸಂತ್ರಸ್ತ ಬಾಲಕಿಯ ತಂದೆ ಪೊಲೀಸರಿಗೆ ದೂರು ನೀಡಿದ್ದು, ಇದರಲ್ಲಿ ಮೂವರು ಆರೋಪಿಗಳು ತನ್ನ ಮಗಳನ್ನು ಕಳೆದೊಂದು ವರ್ಷದಿಂದ ಪೀಡಿಸುತ್ತಿದ್ದರು. ಸೋಮವಾರ ರಾತ್ರಿ ಸುಮಾರು ಎಂಟು ಗಂಟೆಗೆ ಮೊಬೈಲ್‌ಗೆ ಕರೆಯೊಂದು ಬಂದಿತ್ತು. ಕರೆ ಮಾಡಿದವರು ನೀವು ಮನೆಯಲ್ಲಿದ್ದೀರಾ ಎಂದು ಕೇಳಿದ್ದರು. ಆದರೆ ನಾನು ಇಲ್ಲ ಎಂದು ಹೇಳಿದ್ದೆ. ಇದಾದ ಬಳಿಕ ಮೂವರು ಯುವಕರು ಬೈಕ್‌ನಲ್ಲಿ ಬಂದು, ಮನೆಯೊಳಗೆ ನುಗ್ಗಿ ಬೆದರಿಸಲಾರಂಭಿಸಿದರು. ಮೊದಲು ಹೆಂಡತಿ ಹಾಗೂ ಮಗನಿಗೆ ಥಳಿಸಿ ಬಳಿಕ ಮಗಳತ್ತ ಧಾವಿಸಿದ್ದಾರೆ ಎಂದಿದ್ದಾರೆ.
ಮನೆಯವರು ಕಿರುಚುತ್ತಲೇ ಇದ್ರು, ಮಗಳನ್ನು ಕೆಳಗೆಸೆದರು
ಘಟನೆಯ ಬಗ್ಗೆ ಮತ್ತಷ್ಟು ವಿವರಿಸಿರುವ ತಂದೆ ನಾವು ಅಳುತ್ತಲೇ ಇದ್ದೆವು. ನೋಡ ನೋಡುತ್ತಿದ್ದಂತೆಯೇ ಅವರು ಮಗಳನ್ನು ಎರಡಂತಸ್ತಿನಿಂದ ಕೆಳಕ್ಕೆ ದೂಡಿದರು ಎಂದಿದ್ದಾರೆ. ಈ ಬಗ್ಗೆ ಮಾತನಾಡಿರುವ ಪೊಲೀಸರು ಬಾಲಕಿಯನ್ನು ಕೆಳಗೆಸೆದಿರುವ ದೃಶ್ಯಗಳು ಸಿಸಿಟಿವಿಯಲ್ಲಿ ದಾಖಲಾಗಿವೆ. ಇಬ್ಬರನ್ನು ಅರೆಸ್ಟ್ ಮಾಡಿದ್ದು, ವಿಚಾರಣೆ ಮುಂದುವರೆಸಿದ್ದೇವೆ ಎಂದಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ