ಐಎಎಸ್ ಅಧಿಕಾರಿ ವಾಸುಕಿ ಅವರನ್ನು ಕೇರಳದ ವಿದೇಶಾಂಗ ಕಾರ್ಯದರ್ಶಿ ಹುದ್ದೆಗೆ ನೇಮಕ ಮಾಡಿರುವುದರ ಬಗ್ಗೆ ಕಿಡಿಕಿಡಿಯಾಗಿರುವ ಕೇಂದ್ರ ಸರ್ಕಾರ, ದೇಶದ ವಿದೇಶಾಂಗ ವಿಚಾರಗಳ ಕುರಿತು ಮೂಗುತೂರಿಸಬೇಡಿ ಎಂದು ಎಚ್ಚರಿಸಿದೆ.
ನವದೆಹಲಿ (ಜು.26): ಕೇರಳ ರಾಜ್ಯದೊಂದಿಗೆ ಅಂತಾರಾಷ್ಟ್ರೀಯ ಸಂಬಂಧ ಸುಧಾರಣೆ ಮಾಡುವ ನಿಟ್ಟಿನಲ್ಲಿ ಕೇರಳ ಸರ್ಕಾರ ಹಿರಿಯ ಐಎಎಸ್ ಅಧಿಕಾರಿ ಕೆ.ವಾಸುಕಿ ಅವರನ್ನು ವಿದೇಶಾಂಗ ಕಾರ್ಯದರ್ಶಿಯಾಗಿ ನೇಮಕ ಮಾಡಿತ್ತು. ಈ ವಿಚಾರದಲ್ಲಿ ಕೇಂದ್ರ ಸರ್ಕಾರದ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಕೇರಳ ಸರ್ಕಾರದ ವಿರುದ್ಧ ಹರಿಹಾಯ್ದಿದೆ. ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಮಾತನಾಡಿ, ರಾಜ್ಯ ಸರ್ಕಾರಗಳು ತಮ್ಮ ಅಧಿಕಾರ ವ್ಯಾಪ್ತಿಯನ್ನು ಮೀರಿದ ವಿಷಯಗಳಲ್ಲಿ ಹಸ್ತಕ್ಷೇಪ ಮಾಡಬಾರದು. ವಿದೇಶಾಂಗ ವ್ಯವಹಾರಗಳು ರಾಜ್ಯದ ವ್ಯಾಪ್ತಿಗೆ ಬರುವ ವಿಚಾರಗಳಲ್ಲ ಎನ್ನುವುದು ಕೇರಳ ಸರ್ಕಾರದ ಗಮನಕ್ಕೆ ತಂದಿದ್ದಾರೆ. "ಭಾರತದ ಸಂವಿಧಾನದ ಏಳನೇ ಶೆಡ್ಯೂಲ್ ಪ್ರಕಾರ, ವಿದೇಶಾಂಗ ವ್ಯವಹಾರಗಳು ಮತ್ತು ಯಾವುದೇ ವಿದೇಶಿ ದೇಶಕ್ಕೆ ಸಂಬಂಧಿಸಿದ ಎಲ್ಲಾ ವಿಷಯಗಳು ಕೇಂದ್ರ ಸರ್ಕಾರದ ಏಕೈಕ ವಿಶೇಷವಾಗಿದೆ. ಇದು ಸಮವರ್ತಿ ಪಟ್ಟಿಯಲ್ಲಿಲ್ಲ ಎನ್ನುವುದನ್ನು ರಾಜ್ಯಗಳು ಅರ್ಥ ಮಾಡಿಕೊಳ್ಳಬೇಕು' ಎಂದು ಹೇಳಿದ್ದಾರೆ.
ಜುಲೈ 15 ರಂದು ಕೇರಳ ಸರ್ಕಾರವು ಕೆ ವಾಸುಕಿ ಅವರಿಗೆ ವಿದೇಶಿ ಸಹಕಾರಕ್ಕೆ ಸಂಬಂಧಿಸಿದ ವಿಷಯಗಳ ಹೆಚ್ಚುವರಿ ಜವಾಬ್ದಾರಿಯನ್ನು ನೀಡಿ ಆದೇಶ ಹೊರಡಿಸಿತು. ವಿದೇಶಿ ಏಜೆನ್ಸಿಗಳು ಮತ್ತು ವಿದೇಶಗಳ ರಾಯಭಾರ ಕಚೇರಿಗಳಲ್ಲಿನ ಸಂಸ್ಥೆಗಳೊಂದಿಗೆ ರಾಜ್ಯ ಸರ್ಕಾರದ ಚಟುವಟಿಕೆಗಳನ್ನು ಸಮನ್ವಯಗೊಳಿಸಲು ವಾಸುಕಿ ಅವರನ್ನು ನೇಮಿಸಲಾಗಿದೆ ಎಂದು ಕೇರಳ ಸರ್ಕಾರ ತಿಳಿಸಿತ್ತು. ಬಿಜೆಪಿಯ ರಾಜ್ಯ ಘಟಕವು ಈ ನೇಮಕಾತಿಯನ್ನು ತೀವ್ರವಾಗಿ ಪ್ರತಿಭಟಿಸಿತು ಮತ್ತು ಇದು ಅಸಾಂವಿಧಾನಿಕ ಎಂದು ಕರೆದಿತ್ತು.
ಐಎಎಸ್ ಅಧಿಕಾರಿಗಳು ರಾಯಭಾರಿ ಕಚೇರಿಗಳು, ಕಾನ್ಸುಲೇಟ್‌ಗಳು ಅಥವಾ ವಿದೇಶಿ ರಾಷ್ಟ್ರಗಳ ಉದ್ಯೋಗಿಗಳೊಂದಿಗೆ ನೇರವಾಗಿ ಸಂವಹನ ನಡೆಸದಂತೆ ನೀತಿ ಸಂಹಿತೆಯನ್ನು ಹೊಂದಿದ್ದಾರೆ. ಕೇರಳ ಸರ್ಕಾರವು 2021 ರಲ್ಲಿ ವಿದೇಶಿ ಸಹಕಾರದ ಜವಾಬ್ದಾರಿಯೊಂದಿಗೆ ಮಾಜಿ ಐಎಫ್‌ಎಸ್ ಅಧಿಕಾರಿ ವೇಣು ರಾಜಮಣಿ ಅವರನ್ನು ನವದೆಹಲಿಯಲ್ಲಿ ವಿಶೇಷ ಕರ್ತವ್ಯ ಅಧಿಕಾರಿಯಾಗಿ ನೇಮಿಸಿತ್ತು. ಆಗ ಕೇಂದ್ರ ಸರ್ಕಾರ ಮೌನ ವಹಿಸಿ ಯಾವುದೇ ಪ್ರತಿಕ್ರಿಯೆ ನೀಡದಂತೆ ಎಚ್ಚರ ವಹಿಸಿತ್ತು.
undefined
ಕಾರ್ಗಿಲ್ 'ವಿಜಯ ದಿವಸ'ಕ್ಕೆ 25 ವರ್ಷ; ಯುದ್ಧ ಸ್ಮಾರಕಕ್ಕೆ ಇಂದು ಪ್ರಧಾನಿ ಮೋದಿ ಭೇಟಿ
ರಾಜ್ಯದ ಅಭಿವೃದ್ಧಿಗಾಗಿ ಹೊಸ ಸಂಬಂಧಗಳನ್ನು ಸ್ಥಾಪಿಸುವ ಕೆಲಸವನ್ನು ವಾಸುಕಿ ಅವರಿಗೆ ನೀಡಲಾಗಿದೆಯೇ ಹೊರತು ವಿದೇಶಿ ರಾಜತಾಂತ್ರಿಕ ಸಂಬಂಧಗಳಲ್ಲಿ ಹಸ್ತಕ್ಷೇಪ ಮಾಡಲು ಅಥವಾ ಕೇಂದ್ರದ ಅಧಿಕಾರವನ್ನು ಅತಿಕ್ರಮಿಸಲು ಅಲ್ಲ ಎಂದು ಮುಖ್ಯ ಕಾರ್ಯದರ್ಶಿ ಡಾ.ವಿ.ವೇಣು ಈ ಹಿಂದೆ ಸ್ಪಷ್ಟಪಡಿಸಿದ್ದರು. ಐಎಎಸ್ ವಾಸುಕಿ ಅವರ ನೇಮಕಾತಿಯನ್ನು ರದ್ದುಪಡಿಸಲು ಸರ್ಕಾರದ ವಲಯದಲ್ಲಿ ಈಗಾಗಲೇ ಕೆಲಸಗಳು ನಡೆಯುತ್ತಿವೆ.
ಕೊಲಂಬಿಯಾದ ಡ್ರಗ್ ದೊರೆ ಪ್ಯಾಬ್ಲೋ ಎಸ್ಕೋಬಾರ್‌ಗೆ ಜಗನ್‌ರೆಡ್ಡಿ ಹೋಲಿಸಿದ ಚಂದ್ರಬಾಬು ನಾಯ್ಡು