ಅರುಣಾಚಲ ಪ್ರದೇಶ ಭಾರತದ ಅವಿಭಾಜ್ಯ ಅಂಗ, ನಿರ್ಣಯ ಮಂಡಿಸಿದ ಅಮೆರಿಕ

Published : Mar 15, 2023, 11:10 AM IST
ಅರುಣಾಚಲ ಪ್ರದೇಶ ಭಾರತದ ಅವಿಭಾಜ್ಯ ಅಂಗ, ನಿರ್ಣಯ ಮಂಡಿಸಿದ ಅಮೆರಿಕ

ಸಾರಾಂಶ

ಭಾರತಕ್ಕೆ ಹೊಂದಿಕೊಂಡ ಗಡಿಭಾಗದಲ್ಲಿ ಚೀನಾ ತನ್ನ ಉಪಟಳವನ್ನು ಮುಂದುವರಿಸಿರುವ ಹೊತ್ತಿನಲ್ಲಿ, ಅಮೆರಿಕ ಮಹತ್ವದ ನಿರ್ಣಯವನ್ನು ಮಂಡಿಸಿದ್ದು, ಮ್ಯಾಕ್‌ಮೋಹನ್‌ ಲೈನ್‌ ಭಾರತ ಹಾಗೂ ಚೀನಾ ನಡುವಿನ ಅಂತಾರಾಷ್ಟ್ರೀಯ ಗಡಿ ಎಂದು ನಿರ್ಣಯ ಮಂಡಿಸಿದೆ. ಅದರೊಂದಿಗೆ ಅರುಣಾಚಲ ಪ್ರದೇಶ ಭಾರತದ ಭಾಗ ಎಂದು ಹೇಳಿದೆ.

ನವದೆಹಲಿ (ಮಾ.15): ಅಮೆರಿಕದ ಉಭಯಪಕ್ಷೀಯ ಸೆನೆಟ್‌ ಭಾರತ ಹಾಗೂ ಚೀನಾ ನಡುವೆ ಇರುವ ಮ್ಯಾಕ್‌ಮೋಹನ್‌ ಲೈನ್‌ಅನ್ನು ಅಂತಾರಾಷ್ಟ್ರೀಯ ಗಡಿ ಎಂದು ಪರಿಗಣಿಸುವ ನಿರ್ಣಯವನ್ನು ಮಂಡಿಸಿದೆ. ಅದರೊಂದಿಗೆ ಅರುಣಾಚಲ ಪ್ರದೇಶವನ್ನು ಭಾರತದ ಅವಿಭಾಜ್ಯ ಅಂಗವೆಂದು ಅಮೆರಿಕ ಪರಿಗಣನೆ ಮಾಡಿದಂತಾಗಿದೆ. 'ಮುಕ್ತ ಹಾಗೂ ಯಾವ ಸಮಸ್ಯೆಗಳೂ ಇಲ್ಲದ ಇಂಡೋ-ಪೆಸಿಪಿಕ್‌ ವಾತಾವರಣಕ್ಕೆ ಚೀನಾ ಗಂಭೀರ ಬೆದರಿಕೆಗಳನ್ನು ಒಡ್ಡುತ್ತಿದೆ. ಈ ಪ್ರದೇಶದಲ್ಲಿನ ನಮ್ಮ ಪಾಲುದಾರ ರಾಷ್ಟ್ರ ಹಾಗೂ ವಿಶೇಷವಾಗಿ ಭಾರತದೊಂದಿಗೆ ಬೆಂಬಲಕ್ಕೆ ನಿಲ್ಲುವುದು ಅಗತ್ಯವಾಗಿದೆ ಎಂದು ಸೆನೆಟರ್ ಜೆಫ್ ಮರ್ಕ್ಲಿ ಅವರೊಂದಿಗೆ ಸೆನೆಟ್‌ನಲ್ಲಿ ನಿರ್ಣಯವನ್ನು ಪರಿಚಯಿಸಿದ ಸೆನೆಟರ್‌ ಬಿಲ್ ಹ್ಯಾಗರ್ಟಿ ಹೇಳಿದ್ದಾರೆ. "ಈ ಉಭಯಪಕ್ಷೀಯ ನಿರ್ಣಯವು ಅರುಣಾಚಲ ಪ್ರದೇಶವನ್ನು ಭಾರತದ ಅವಿಭಾಜ್ಯ ಅಂಗವೆಂದು ಯಾವುದೇ ಸಂದೇಹವಿಲ್ಲದೆ ಗುರುತಿಸಲು ಸೆನೆಟ್‌ನ ಬೆಂಬಲವನ್ನು ನೀಡುತ್ತದೆ. ನೈಜ ನಿಯಂತ್ರಣ ರೇಖೆಯ ಉದ್ದಕ್ಕೂ ಯಥಾಸ್ಥಿತಿಯನ್ನು ಬದಲಾಯಿಸಲು ಚೀನಾದ ಮಿಲಿಟರಿ ಆಕ್ರಮಣವನ್ನು ಖಂಡಿಸುತ್ತದೆ ಮತ್ತು ಅಮರಿಕ ಭಾರತದ ಕಾರ್ಯತಂತ್ರದ ಪಾಲುದಾರಿಕೆಯನ್ನು ಮತ್ತಷ್ಟು ಹೆಚ್ಚಿಸುತ್ತದೆ. ಕ್ವಾಡ್‌ ರಾಷ್ಟ್ರಗಳು ಮುಕ್ಯ ಹಾಗೂ ಯಾವ ಸಮಸ್ಯೆಗಳೂ ಇಲ್ಲದ ಇಂಡೋ-ಪೆಸಿಪಿಕ್‌ ವಾತಾವರಣವನ್ನು ಬೆಂಬಲಿಸುತ್ತದೆ' ಎಂದು ಮಂಗಳವಾರ ಹೇಳಿದ್ದಾರೆ.

ಪೂರ್ವವಲಯದಲ್ಲಿ ಭಾರತ ಹಾಗೂ ಚೀನಾವನ್ನು ಬೇರ್ಪಡಿಸುವ ನೈಜ ನಿಯಂತ್ರಣ ರೇಖೆಯಲ್ಲಿ ಕಳೆದ ಆರು ವರ್ಷಗಳಲ್ಲೇ ಅತೀದೊಡ್ಡ ಘರ್ಷಣೆ ಗಲ್ವಾನ್‌ನಲ್ಲಿ ನಡೆದಿತ್ತು. ಆ ಬಳಿಕ ಅರುಣಾಚಲ ಪ್ರದೇಶದ ತವಾಂಗ್‌ನಲ್ಲೂ ಇದೇ ರಿತಿಯ ಘಟನೆ ಪುನರಾವರ್ತನೆಯಾಗಿತ್ತು. ಪ್ರಸ್ತುತ ಅಮೆರಿಕವು ಈ ಎರಡೂ ದೇಶಗಳ ನಡುವೆ ಇರುವ ಮ್ಯಾಕ್‌ಮೋಹನ್‌ ಲೈನ್‌ಅನ್ನು ಚೀನಾ ಹಾಗೂ ಭಾರತದ ರಾಜ್ಯ ಅರುಣಾಚಲ ಪ್ರದೇಶದ ನಡುವಿನ ಗಡಿ ಎಂದು ಪರಿಗಣಿಸುವ ನಿರ್ಣಯ ತೆಗೆದುಕೊಂಡಿದೆ ಎನ್ನಲಾಗಿದೆ. ಅರುಣಾಚಲ ಪ್ರದೇಶವು ಚೀನಾ ಗಣರಾಜ್ಯದ ಪ್ರದೇಶವಾಗಿದೆ ಎಂದು ಪೀಪಲ್ಸ್ ರಿಪಬ್ಲಿಕ್ ಆಫ್ ಚೀನಾ (PRC) ವಾದವನ್ನು ನಿರ್ಣಯ ತಿರಸ್ಕರಿಸಿದಂತಾಗಿದೆ. ಇದು ಚೀನಾದ ಹೆಚ್ಚುತ್ತಿರುವ ಆಕ್ರಮಣಕಾರಿ ಮತ್ತು ವಿಸ್ತರಣಾ ನೀತಿಗಳ ಒಂದು ಭಾಗವಾಗಿದೆ ಎಂದು ನಿರ್ಣಯ ಹೇಳಿದೆ.

ಸ್ವಾತಂತ್ರ್ಯವನ್ನು ಬೆಂಬಲಿಸುವುದು ಅಮೆರಿಕದ ಮೌಲ್ಯ. ನಮ್ಮ ಎಲ್ಲಾ ಕ್ರಮಗಳಲ್ಲಿಯೂ ಹಾಗೂ ಸಂಬಂಧಗಳಲ್ಲಿಯೂ ಇದು ಪ್ರತಿಧ್ವನಿಸಬೇಕು. ಅದರಲ್ಲೂ ಚೀನಾ ಸರ್ಕಾರ, ಆಕ್ರಮಣಕಾರಿ ಧೋರಣೆ ತೋರುತ್ತಿರುವ ಹೊತ್ತಿನಲ್ಲಿ ಇಂಥ ನಿರ್ಣಯ ಅಗತ್ಯವಾಗಿದೆ ಎಂದು ಸೆನೆಟರ್ ಜೆಫ್ ಮರ್ಕ್ಲಿ  ಹೇಳಿದ್ದಾರೆ.

ಈ ನಿರ್ಣಯದ ಮೂಲಕ ಭಾರತದ ರಾಜ್ಯ ಅರುಣಾಚಲ ಪ್ರದೇಶ, ಭಾರತ ಗಣರಾಜ್ಯದ ಭಾಗವೆಂದು ಅಮೆರಿಕ ಪರಿಗಣಿಸುತ್ತದೆ ಎನ್ನುವುದು ಖಚಿತಪಡಿಸುತ್ತದೆ. ಇದು ಎಂದಿಗೂ ಚೀನಾದ ಭಾಗವಲ್ಲ. ಸಮಾನ ಮನಸ್ಕ ಅಂತರಾಷ್ಟ್ರೀಯ ಪಾಲುದಾರರೊಂದಿಗೆ ಈ ಪ್ರದೇಶಕ್ಕೆ ಬೆಂಬಲ ಮತ್ತು ಸಹಾಯಕ್ಕಾಗಿ ಅಮೆರಿಕ ಎಂದಿಗೂ ಬದ್ಧವಾಗಿದೆ ಎಂದು ಹೇಳಿದ್ದಾರೆ.

ಅರುಣಾಚಲ ಪ್ರದೇಶದ ಯಾಂಗ್‌ಟ್ಸೆ ಪ್ರದೇಶದ ಮೇಲೆ ಚೀನಾ ಕಣ್ಣು ಹಾಕಿರುವುದಕ್ಕೆ ಇದೇ ಕಾರಣ..!

ಉಭಯಪಕ್ಷೀಯ ಸೆನೆಟರ್‌ಗಳ ನಿರ್ಣಯವು ಹೆಚ್ಚುವರಿ ಚೀನಾದ ಪ್ರಚೋದನೆಗಳನ್ನು ಖಂಡಿಸುತ್ತದೆ, ಇದರಲ್ಲಿ ಪೀಪಲ್ಸ್ ರಿಪಬ್ಲಿಕ್ ಆಫ್ ಚೀನಾದ ಮಿಲಿಟರಿ ಬಲವನ್ನು ಬಳಸುವುದು ಸೇರಿದಂತೆ ನೈಜ ನಿಯಂತ್ರಣ ರೇಖೆಯ ಉದ್ದಕ್ಕೂ ಯಥಾಸ್ಥಿತಿಯನ್ನು ಬದಲಾಯಿಸುವುದು, ಸ್ಪರ್ಧಾತ್ಮಕ ಪ್ರದೇಶಗಳಲ್ಲಿ ಹಳ್ಳಿಗಳ ನಿರ್ಮಾಣ, ನಗರಗಳಿಗೆ ಮ್ಯಾಂಡರಿನ್ ಭಾಷೆಯ ಹೆಸರುಗಳೊಂದಿಗೆ ನಕ್ಷೆಗಳ ಪ್ರಕಟಣೆ ಮತ್ತು ಭಾರತದ ರಾಜ್ಯವಾದ ಅರುಣಾಚಲ ಪ್ರದೇಶದ ವೈಶಿಷ್ಟ್ಯಗಳು ಮತ್ತು ಭೂತಾನ್‌ನಲ್ಲಿ ಚೀನಾದ ಪ್ರಾದೇಶಿಕ ಹಕ್ಕುಗಳ ವಿಸ್ತರಣೆಯನ್ನೂ ಖಂಡಿಸುತ್ತದೆ ಎಂದಿದ್ದಾರೆ.

LAC ಪರ್ವತ ಹಾದಿಗಳನ್ನು ಚೀನಾ ಸೇನೆಗೂ ಮುನ್ನವೇ ಭಾರತೀಯ ಸೇನೆ ಹೀಗೆ ತಲುಪಬಹುದು ನೋಡಿ..!

ಅದಲ್ಲದೆ, ಈ ಪ್ರದೇಶದಲ್ಲಿ ಚೀನಾ ವಿರುದ್ಧ ಭದ್ರತಾ ಆತಂಕಗಳನ್ನು ಎದುರಿಸಲು ಹಾಗೂ ತನ್ನನ್ನು ತಾನು ರಕ್ಷಿಸಿಕೊಳ್ಳಲು ಭಾರತ ಬದ್ಧವಾಗಿದೆ. ಈ ಪ್ರದೇಶದಲ್ಲಿ ದೂರಸಂಪರ್ಕ ಮೂಲಸೌಕರ್ಯ ಭದ್ರಪಡಿಸಿವುದು, ಸರಕು ಸಾಗಾಣೆ, ಹೂಡಿಕೆಗಳು, ಸಾರ್ವಜನಿಕ ಆರೋಗ್ಯ ಮತ್ತು ಇತರ ಕ್ಷೇತ್ರಗಳಲ್ಲಿ ತೈವಾನ್‌ನೊಂದಿಗೆ ತನ್ನ ಸಹಕಾರವನ್ನು ವಿಸ್ತರಿಸುವುದು ಇದರಲ್ಲಿ ಸೇರಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಹೈದ್ರಾಬಾದ್‌ ರಸ್ತೆಗಳಿಗೆ ಟ್ರಂಪ್, ಗೂಗಲ್‌ ಹೆಸರು
ಗಲ್ವಾನ್‌ ಹಿಂಸೆ ನಡೆದ ಸ್ಥಳದಲ್ಲಿ ವಿಶ್ವದ ಎತ್ತರದ ಯುದ್ಧ ಸ್ಮಾರಕ!