'ರಾಜ್ಯಸಭೆ, ಲೋಕಸಭೇಲಿ ಬ್ರಾಹ್ಮಣರಿಗೆ ನಾಯಕತ್ವ'

By Kannadaprabha News  |  First Published Jan 17, 2020, 10:23 AM IST

ರಾಜ್ಯ ಸಭೆ ಹಾಗೂ ಲೋಕಸಭೆಯಲ್ಲಿ ಬ್ರಾಹ್ಮಣರಿಗೆ ನಾಯಕತ್ವ ನೀಡಲಾಗಿದೆ. ಇದೇ ಮೊದಲ ಬಾರಿಗೆ ಮಾಯಾ ಈ ರೀತಿ ನೇಮಕ ಮಾಡಿದ್ದಾರೆ. 



ಲಖನೌ [ಜ.17]: ದಲಿತ ನಾಯಕಿ, ಬಿಎಸ್‌ಪಿ ಅಧ್ಯಕ್ಷೆ ಮಾಯಾವತಿ, ಲೋಕಸಭೆಯಲ್ಲಿ ಪಕ್ಷದ ನಾಯಕರನ್ನಾಗಿ ರಿತೇಶ್‌ ಪಾಂಡೆ ಅವರನ್ನು ನೇಮಕ ಮಾಡಿದ್ದಾರೆ. 

ವಿಶೇಷವೆಂದರೆ ಇದೇ ಮೊದಲ ಬಾರಿಗೆ ಆಯ್ಕೆಯಾದ ಪಾಂಡೆ ಅವರಿಗೆ ಈ ಮಹತ್ವದ ಹೊಣೆ ವಹಿಸಲಾಗಿದೆ. ಇದುವರೆಗೆ ಈ ಹೊಣೆ ಹೊತ್ತಿದ್ದ ಬಿಎಸ್‌ಪಿಯಿಂದ ಆಯ್ಕೆಯಾಗಿದ್ದ ಜಾತ್ಯತೀಯ ಜನತಾ ದಳ ಮೂಲದ ಡ್ಯಾನಿಶ್‌ ಅಲಿ ಅವರ ಬದಲಿಗೆ ಪಾಂಡೆಗೆ ಹೊಸ ಹೊಣೆ ವಹಿಸಲಾಗಿದೆ. 

Tap to resize

Latest Videos

ಈಗಾಗಲೇ ರಾಜ್ಯದಲ್ಲಿ ಪಕ್ಷದ ಘಟಕದ ಅಧ್ಯಕ್ಷರಾಗಿ ಮುಸ್ಲಿಮರು ಇದ್ದಾರೆ. ಹೀಗಾಗಿ ಎಲ್ಲಾ ಸಮುದಾಯಗಳಿಗೂ ಆದ್ಯತೆ ನೀಡುವ ಸಲುವಾಗಿ ಬ್ರಾಹ್ಮಣ ಸಮುದಾಯದ ಪಾಂಡೆ ಆಯ್ಕೆ ಮಾಡಲಾಗಿದೆ ಎಂದು ಮಾಯಾ ಹೇಳಿದ್ದಾರೆ. 

ದಲಿತ ದೌರ್ಜನ್ಯ ನಿಲ್ಲದಿದ್ದಲ್ಲಿ ಬೌದ್ಧ ಧರ್ಮ ಸೇರುವೆ : ಮಾಯಾವತಿ...

ಈಗಾಗಲೇ ರಾಜ್ಯಸಭೆಯಲ್ಲೂ ಬಿಎಸ್‌ಪಿ ನಾಯಕರಾಗಿ ಬ್ರಾಹ್ಮಣ ಸಮುದಾಯದವರೇ ಆದ ಎಸ್‌.ಸಿ.ಮಿಶ್ರಾ ಕಾರ್ಯನಿರ್ವಹಿಸುತ್ತಿದ್ದಾರೆ. ಈ ನೇಮಕವು ಮುಂಬರುವ ಚುನಾವಣೆಯಲ್ಲಿ ಮೇಲ್ವರ್ಗದ ಜನರ ಗಮನ ಸೆಳೆಯುವ ಯತ್ನ ಎಂದೇ ವಿಶ್ಲೇಷಿಸಲಾಗಿದೆ.

click me!