Fact Check: ಆರ್‌ಎಸ್‌ಎಸ್‌ ಕಚೇರಿಯಲ್ಲಿ ಬಂದೂಕಿಗೆ ಪೂಜೆ ಸಲ್ಲಿಸಿದ್ರಾ ಮೋದಿ?

By Suvarna NewsFirst Published Jan 17, 2020, 9:07 AM IST
Highlights

ಪ್ರಧಾನಿ ನರೇಂದ್ರ ಮೋದಿ ಬಂದೂಕುಗಳಿಗೆ ಪೂಜೆ ಮಾಡುತ್ತಿರುವ ಮೂರು ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುತ್ತಿವೆ. ಈ ಫೋಟೋಗಳನ್ನು ಪೋಸ್ಟ್‌ ಮಾಡಿ, ‘ಪ್ರಧಾನಿ ನರೇಂದ್ರ ಮೋದಿ ಇತ್ತೀಚೆಗೆ ಆರ್‌ಎಸ್‌ಎಸ್‌ ಕೇಂದ್ರ ಕಚೇರಿಗೆ ತೆರಳಿ ಬಂದೂಕುಗಳಿಗೆ ಪೂಜೆ ಸಲ್ಲಿಸಿದ್ದಾರೆ’ ಎಂದು ಹೇಳಲಾಗುತ್ತಿದೆ. ನಿಜನಾ ಈ ಸುದ್ದಿ? ಏನಿದರ ಸತ್ಯಾಸತ್ಯತೆ? ನೋಡಿ. 

ಪ್ರಧಾನಿ ನರೇಂದ್ರ ಮೋದಿ ಬಂದೂಕುಗಳಿಗೆ ಪೂಜೆ ಮಾಡುತ್ತಿರುವ ಮೂರು ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುತ್ತಿವೆ. ಈ ಫೋಟೋಗಳನ್ನು ಪೋಸ್ಟ್‌ ಮಾಡಿ, ‘ಪ್ರಧಾನಿ ನರೇಂದ್ರ ಮೋದಿ ಇತ್ತೀಚೆಗೆ ಆರ್‌ಎಸ್‌ಎಸ್‌ ಕೇಂದ್ರ ಕಚೇರಿಗೆ ತೆರಳಿ ಬಂದೂಕುಗಳಿಗೆ ಪೂಜೆ ಸಲ್ಲಿಸಿದ್ದಾರೆ’ ಎಂದು ಹೇಳಲಾಗುತ್ತಿದೆ.

ಆದರೆ ನಿಜಕ್ಕೂ ನರೇಂದ್ರ ಮೋದಿ ಇತ್ತೀಚೆಗೆ ಆರ್‌ಎಸ್‌ಎಸ್‌ ಕೇಂದ್ರ ಕಚೇರಿಗೆ ತೆರಳಿ ಶಸ್ತ್ರಾಸ್ತ್ರ ಪೂಜೆ ಕೈಗೊಂಡಿದ್ದರೆ, ಆರ್‌ಎಸ್‌ಎಸ್‌ ಕಚೇರಿಯಲ್ಲಿ ಇಷ್ಟೊಂದು ಬಂದೂಕುಗಳಿರುವುದು ನಿಜವೇ ಎಂದು ಟೈಮ್ಸ್‌ ಆಫ್‌ ಇಂಡಿಯಾ ಪರಿಶೀಲಿಸಿದಾಗ ಹಳೆಯ ಫೋಟೋವನ್ನು ಪೋಸ್ಟ್‌ ಮಾಡಿ, ಆರ್‌ಎಸ್‌ಎಸ್‌ ಕಚೇರಿಯಲ್ಲಿ ನಡೆದ ಪೂಜೆ ಎಂದು ಸುಳ್ಳುಸುದ್ದಿ ಹರಡಲಾಗುತ್ತಿದೆ ಎಂಬುದು ಸ್ಪಷ್ಟವಾಗಿದೆ.

Fact Check| ರಾಜಕೀಯ ನಾಯಕರ ಫೋಟೋ ಫಾರ್ವರ್ಡ್‌ ಮಾಡಿದ್ರೆ ಜೈಲು!

2009 ಮತ್ತು 2013ರಲ್ಲಿ ಪ್ರಧಾನಿ ಮೋದಿ, ಗುಜರಾತಿನ ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ ತಮ್ಮ ಗಾಂಧೀನಗರದ ನಿವಾಸದಲ್ಲಿ ವಿಜಯ ದಶಮಿ ಪ್ರಯುಕ್ತ ಶಸ್ತ್ರಾಸ್ತ್ರ ಪೂಜೆ ಕೈಗೊಂಡಿದ್ದರು. ಆಗ ಅಲ್ಲಿ ಪೊಲೀಸ್‌ ಭದ್ರತಾ ವ್ಯವಸ್ಥೆ ಕೂಡ ಇತ್ತು.

 

Greetings on Vijayadashami! Joined 'Shastra Puja' with our police & security personnel earlier today http://t.co/AqrjomBniL

— Narendra Modi (@narendramodi)

ರಿವರ್ಸ್‌ ಇಮೇಜ್‌ನಲ್ಲಿ ಪರಿಶೀಲಿಸಿದಾಗ ವೈರಲ್‌ ಆಗಿರುವ ಫೋಟೋಗೆ ಸಂಬಂಧಿಸಿದಂತೆ ಹಲವು ಫೋಟೋಗಳು ಲಭ್ಯವಾಗಿವೆ. ವೈರಲ್‌ ಆಗಿರುವ ಫೋಟೋದಲ್ಲಿ ಮೋದಿ ಅವರು ಧರಿಸಿರುವ ಬಟ್ಟೆಗೂ ಲಭ್ಯವಾಗಿರುವ ಫೋಟೋದಲ್ಲಿ ಮೋದಿ ಧರಿಸಿರುವ ಬಟ್ಟೆಗೂ ಸಾಮ್ಯತೆ ಇದೆ. ಅಲ್ಲದೆ ಇದೇ ಫೋಟೋಗಳನ್ನು 2013ರಲ್ಲಿ ಸ್ವತಃ ಮೋದಿ ಅವರ ಟ್ವೀಟರ್‌ ಖಾತೆಯಲ್ಲಿಯೂ ಪೋಸ್ಟ್‌ ಮಾಡಲಾಗಿತ್ತು. ಅಲ್ಲಿಗೆ ಪ್ರಧಾನಿ ಮೋದಿ ಆರ್‌ಎಸ್‌ಎಸ್‌ ಕಚೇರಿಯಲ್ಲಿ ಬಂದೂಕುಗಳಿಗೆ ಪೂಜೆ ಸಲ್ಲಿಸಿದ್ದರು ಎನ್ನುವ ಸುದ್ದಿ ಸುಳ್ಳು ಎಂಬುದು ಸ್ಪಷ್ಟ.

- ವೈರಲ್ ಚೆಕ್ 

click me!