ಮಥುರಾದ 8 ಮಂದಿ ಹಿಂದೂ ಧರ್ಮಕ್ಕೆ ಮತಾಂತರ: ಕೊಟ್ಟ ಕಾರಣವೇ ಕುತೂಹಲಕರ...

Published : May 02, 2025, 01:43 PM ISTUpdated : May 02, 2025, 03:28 PM IST
ಮಥುರಾದ 8 ಮಂದಿ ಹಿಂದೂ ಧರ್ಮಕ್ಕೆ ಮತಾಂತರ: ಕೊಟ್ಟ ಕಾರಣವೇ ಕುತೂಹಲಕರ...

ಸಾರಾಂಶ

ಮಥುರಾದ ಗುಜ್ಜರ್ ಮುಸ್ಲಿಂ ಕುಟುಂಬವೊಂದು ಹಿಂದೂ ಧರ್ಮಕ್ಕೆ ಮತಾಂತರಗೊಂಡಿದೆ. ಮೊಘಲರ ದಬ್ಬಾಳಿಕೆಯಿಂದಾಗಿ ತಮ್ಮ ಪೂರ್ವಜರು ಇಸ್ಲಾಂಗೆ ಮತಾಂತರಗೊಂಡಿದ್ದರು ಎಂದು ಹೇಳಿಕೊಂಡಿದ್ದಾರೆ. ಸ್ವಯಂಪ್ರೇರಿತವಾಗಿ 'ಮರಳಿ ಮನೆಗೆ' ಬಂದಿರುವುದಾಗಿ ತಿಳಿಸಿದ ಕುಟುಂಬದ ಎಂಟು ಮಂದಿ ವೈದಿಕ ವಿಧಿವಿಧಾನಗಳ ಮೂಲಕ ಹಿಂದೂ ಧರ್ಮ ಸ್ವೀಕರಿಸಿ ಹೊಸ ಹೆಸರುಗಳನ್ನು ಪಡೆದಿದ್ದಾರೆ. ಪೊಲೀಸರು ಯಾವುದೇ ಒತ್ತಡವಿಲ್ಲದೆ ಮತಾಂತರ ನಡೆದಿದೆ ಎಂದು ದೃಢಪಡಿಸಿದ್ದಾರೆ.

ಭಯೋತ್ಪಾದನಾ ಚಟುವಟಿಕೆಗಳು ಹೆಚ್ಚಾಗುತ್ತಿರುವ ನಡುವೆಯೇ, ಇದಾಗಲೇ ಕೆಲವು ಮುಸ್ಲಿಮರು ಇಸ್ಲಾಂ ತೊರೆದಿದ್ದರೆ, ಮತ್ತೆ  ಕೆಲವರು ಹಿಂದೂಗಳಾಗಿ ಮತಾಂತರಗೊಳ್ಳುತ್ತಿದ್ದಾರೆ. ಕೆಲ ದಿನಗಳ ಹಿಂದೆ ಕಾಶ್ಮೀರದ ಪೆಹಲ್ಗಾಮ್​ನಲ್ಲಿ ನಡೆದ ಉಗ್ರರ ದಾಳಿಯ ಬಳಿಕವೂ ಈ ಬೆಳವಣಿಗೆ ನಡೆದಿದೆ. ಇದೀಗ ಮಥುರಾದ ಕುಟುಂಬವೊಂದರ ಎಂಟು ಮಂದಿ ಹಿಂದೂ ಧರ್ಮಕ್ಕೆ ಮತಾಂತರಗೊಂಡಿದ್ದಾರೆ. ಇದನ್ನು ಅವರು ಮರಳಿ ಮನೆಗೆ (ಘರ್​ ವಾಪಸಿ) ಎಂದು ಹೇಳಿಕೊಂಡಿದ್ದಾರೆ. ಅಂದರೆ ನಮ್ಮದು ಮೂಲತಃ ಹಿಂದೂ ಧರ್ಮವಾಗಿದ್ದು, ಅದಕ್ಕೇ ಮರಳುತ್ತಿರುವುದಾಗಿ ಹೇಳಿದ್ದಾರೆ. ಅಷ್ಟಕ್ಕೂ ಹಲವರಿಗೆ ಇದಾಗಲೇ ತಿಳಿದಿರುವಂತೆ ನಮ್ಮ ಇತಿಹಾಸವನ್ನು ಕೆದಕಿದಾಗ ಬೇರೆ ಬೇರೆ ಧರ್ಮದವರನ್ನು ಹೇಗೆ ಇಸ್ಲಾಂಗೆ ಮತಾಂತರಗೊಳಿಸಲಾಗಿತ್ತು ಎನ್ನುವುದು ತಿಳಿಯುತ್ತದೆ. ಬಲವಂತದಿಂದ, ದೌರ್ಜನ್ಯ ನಡೆಸಿ ಹೇಗೆ ಅವರನ್ನು ಮತಾಂತರಗೊಳಿಸಲಾಗಿತ್ತು ಎನ್ನುವ ಬಗ್ಗೆ ಇದಾಗಲೇ ಹಲವಾರು ದಾಖಲೆಗಳೂ ಇವೆ.

ಇದೇ ಮಾತನ್ನೀಗ ಮಥುರಾದ ಈ ಕುಟುಂಬವೂ ಹೇಳಿಕೊಂಡಿದೆ. ಮೊಘಲರ ಕಾಲದವರೆಗೂ ನಮ್ಮ ಪೂರ್ವಜರು ಹಿಂದೂಗಳಾಗಿದ್ದರು. ಅವರು ಒತ್ತಡದಲ್ಲಿ ಇಸ್ಲಾಂಗೆ ಮತಾಂತರಗೊಂಡರು. ಆದರೆ ನಾನು ಕಾಳಿ ದೇವಿಯನ್ನು ನನ್ನ ಮನಸ್ಸು, ಮಾತು ಮತ್ತು ಕಾರ್ಯಗಳಿಂದ ಪೂಜಿಸುತ್ತಿದ್ದೇನೆ. ಇಂದಿಗೂ ಗ್ರಾಮಸ್ಥರು ನನ್ನನ್ನು 'ಭಗತ್ ಜೀ' ಎಂದು ಕರೆಯುತ್ತಾರೆ. ಮೂಲತಃ ಗುಜ್ಜರ್ ಸಮುದಾಯಕ್ಕೆ ಸೇರಿದ ಈ ಕುಟುಂಬವು ಕಳೆದ ಮೂರು ವರ್ಷಗಳಿಂದ ತನ್ನ ಬೇರುಗಳಿಗೆ ಮರಳುವ ಬಗ್ಗೆ ಯೋಚಿಸುತ್ತಿತ್ತು ಎಂದು ಕುಟುಂಬದ ಮುಖ್ಯಸ್ಥ 50 ವರ್ಷದ ಜಾಕೀರ್ ಹೇಳಿದ್ದಾರೆ.

ಮತಾಂತರದ ಬಗ್ಗೆ ಕೊನೆಗೂ ಮೌನ ಮುರಿದ ಸೋನಾಕ್ಷಿ ಸಿನ್ಹಾ: ವಿಡಿಯೋದಲ್ಲಿ ನಟಿ ಹೇಳಿದ್ದೇನು ಕೇಳಿ...

 ನಾವು ಯಾವುದೇ ಒತ್ತಡ ಅಥವಾ ಪ್ರಲೋಭನೆಯಿಲ್ಲದೆ ಈ ಹೆಜ್ಜೆ ಇಟ್ಟಿದ್ದೇವೆ, ಹಿಂದೂ ಧರ್ಮದಲ್ಲಿ ಸಂಪೂರ್ಣ ನಂಬಿಕೆ ಇಟ್ಟಿದ್ದೇವೆ ಎಂದಿದ್ದಾರೆ. ಇದಾಗಲೇ ಎಲ್ಲರೂ ತಮ್ಮ ಹೆಸರುಗಳನ್ನು ಹಿಂದೂ ಹೆಸರನ್ನಾಗಿ ಪರಿವರ್ತಿಸಿಕೊಂಡಿದ್ದಾರೆ. ಜಾಕೀರ್​ ಅವರು ತಮ್ಮ ಹೆಸರನ್ನು ಜಗದೀಶ್ ಎಂದು ಹೆಸರು ಇರಿಸಿಕೊಂಡಿದ್ದಾರೆ. ವೃಂದಾವನದ ಶ್ರೀ ಜಿ ವಾಟಿಕಾ ಕಾಲೋನಿಯಲ್ಲಿರುವ ಭಗವತ್ ಧಾಮ ಆಶ್ರಮದಲ್ಲಿ ಹಿಂದೂ ಯುವವಾಹಿನಿ ಧಾರ್ಮಿಕ ಮತಾಂತರವನ್ನು ನಡೆಸಿತು. ಒಂದು ಗಂಟೆ ಕಾಲ ನಡೆದ ಹವನ-ಯಜ್ಞ ಆಚರಣೆಯಲ್ಲಿ ಜಗದೀಶ್ ಅವರ ಪತ್ನಿ, ಪುತ್ರರು, ಸೊಸೆಯಂದಿರು ಮತ್ತು ಮೊಮ್ಮಕ್ಕಳು ಸೇರಿದಂತೆ ಅವರ ಕುಟುಂಬ ಸದಸ್ಯರು ಭಾಗವಹಿಸಿದ್ದರು. ಧಾರ್ಮಿಕ ಮತಾಂತರದ ನಂತರ, ಜಾಕೀರ್ ಅವರ ಹೆಸರನ್ನು ಜಗದೀಶ್ ಎಂದು, ಅವರ ಪತ್ನಿ ಗುಡ್ಡಿ ಅವರ ಹೆಸರನ್ನು ಗುಡಿಯಾ ಎಂದು, ಹಿರಿಯ ಮಗ ಅನ್ವರ್ ಅವರ ಹೆಸರನ್ನು ಸುಮಿತ್ ಎಂದು, ಕಿರಿಯ ಮಗ ರಣವೀರ್ ಅವರ ಹೆಸರನ್ನು ರಾಮೇಶ್ವರ ಎಂದು, ಸೊಸೆ ಸಬೀರಾ ಅವರ ಹೆಸರನ್ನು ಸಾವಿತ್ರಿ ಎಂದು ಮತ್ತು ಮೊಮ್ಮಕ್ಕಳಾದ ಸಬೀರ್, ಜೋಯಾ ಮತ್ತು ನೇಹಾ ಅವರಿಗೆ ಕ್ರಮವಾಗಿ ಶತ್ರುಘ್ನ, ಸರಸ್ವತಿ ಮತ್ತು ಸ್ನೇಹಾ ಎಂದು ಹೆಸರಿಸಲಾಯಿತು.  

 ವೃಂದಾವನದ ಆಶ್ರಮದಲ್ಲಿ ನಡೆದ ವೈದಿಕ ವಿಧಿವಿಧಾನಗಳೊಂದಿಗೆ ನಡೆದ ಧಾರ್ಮಿಕ ಸಮಾರಂಭಕ್ಕೆ ಮಥುರಾ ಸಾಕ್ಷಿಯಾಯಿತು.  ಕುಟುಂಬ ಸದಸ್ಯರು ಸಹ ತಮ್ಮ ಹೆಸರುಗಳನ್ನು ಬದಲಾಯಿಸಿಕೊಂಡರು ಮತ್ತು ನಿರ್ಧಾರವು ಸ್ವಯಂಪ್ರೇರಿತ ಮತ್ತು ಅವರ ಪೂರ್ವಜರ ಧರ್ಮವನ್ನು ಆಧರಿಸಿದೆ ಎಂದು ಹೇಳಿದರು. ಜಾಕೀರ್​ ಅಲಿಯಾಸ್​  ಜಗದೀಶ್ ಅವರು,  ಮೂಲತಃ ಜಿಲ್ಲೆಯ ಶೇರ್‌ಗಢ ಪ್ರದೇಶದವರಾಗಿದ್ದರೂ, ತಮ್ಮ ಮಾವಂದಿರ ಗ್ರಾಮದಲ್ಲಿ ವಾಸಿಸುತ್ತಿದ್ದಾರೆ ಮತ್ತು ವರ್ಷಗಳಿಂದ ಅಂಗಡಿ ನಡೆಸುತ್ತಿದ್ದಾರೆ.  

ನಟ ಗೋವಿಂದ ಡಿವೋರ್ಸ್​ ಬೆನ್ನಲ್ಲೇ ಹರಿದಾಡ್ತಿದೆ ಸೊಸೆಯ ಮತಾಂತರ ಸುದ್ದಿ! ಏನಿದು ಖಾಸ್​ ಬಾತ್​?

 ಕುಟುಂಬವು ಗಂಗಾ ನೀರಿನಿಂದ ಶುದ್ಧೀಕರಣ ಮಾಡಿ, ಸಮಾರಂಭಕ್ಕೂ ಮುನ್ನ ಕೇಸರಿ ಪೇಟ ಧರಿಸಿತ್ತು. "ಅವರು ಈ ಹೆಜ್ಜೆಯನ್ನು ಸಂಪೂರ್ಣವಾಗಿ ತಮ್ಮ ಸ್ವಂತ ಇಚ್ಛೆಯಿಂದ ತೆಗೆದುಕೊಂಡಿದ್ದಾರೆ. ಮಕ್ಕಳು ಸಹ ತಮ್ಮ ಪೂರ್ವಜರ ಧರ್ಮಕ್ಕೆ ಮರಳಲು ತುಂಬಾ ಸಂತೋಷಪಡುತ್ತಾರೆ. ಇಡೀ ಪ್ರಕ್ರಿಯೆಯು ಸ್ವಯಂಪ್ರೇರಿತ ಮತ್ತು ಶಾಂತಿಯುತವಾಗಿತ್ತು ಎಂದು ವೃಂದಾವನ ಕೊತ್ವಾಲಿಯ ಉಸ್ತುವಾರಿ ಪ್ರಶಾಂತ್ ಕಪಿಲ್ ಹೇಳಿದರು. ಯಾವುದೇ ಒತ್ತಡ ಅಥವಾ ಪ್ರಚೋದನೆ ಇರಲಿಲ್ಲ ಮತ್ತು ಯಾವುದೇ ಪೊಲೀಸ್ ಕ್ರಮದ ಅಗತ್ಯವಿರಲಿಲ್ಲ ಎಂದಿದ್ದಾರೆ. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಭಾರತದ 2 ಬಿಲಿಯನ್ ಡಾಲರ್ ಪರಮಾಣು ಜಲಾಂತರ್ಗಾಮಿ ಒಪ್ಪಂದ ಅಂತಿಮಗೊಳಿಸಿದ ಪುಟಿನ್ ಭೇಟಿ
ಸೆಂಟ್ರಲ್ ಮೆಟ್ರೋ ಮತ್ತು ಹೈಕೋರ್ಟ್ ನಿಲ್ದಾಣಗಳ ನಡುವೆ ನೀಲಿ ಮಾರ್ಗದ ಸುರಂಗದಲ್ಲಿ ಹಠಾತ್ ನಿಂತ ಮೆಟ್ರೋ ರೈಲು