ಅಚಾನಕ್ಕಾಗಿ ಬಾಲಿವುಡ್ ಸೆಟ್‌ಗೆ ಬೆಂಕಿ, ಸಂಪೂರ್ಣ ಭಸ್ಮ, 10 ಅಗ್ನಿಶಾಮಕ ದಳ ದೌಡು

Published : Jul 29, 2022, 06:01 PM ISTUpdated : Jul 29, 2022, 07:05 PM IST
ಅಚಾನಕ್ಕಾಗಿ ಬಾಲಿವುಡ್ ಸೆಟ್‌ಗೆ ಬೆಂಕಿ, ಸಂಪೂರ್ಣ ಭಸ್ಮ, 10 ಅಗ್ನಿಶಾಮಕ ದಳ ದೌಡು

ಸಾರಾಂಶ

ಮುಂಬೈನ ಅಂಗಡಿಯೊಂದರಲ್ಲಿ ದಿಢೀರ್ ಬೆಂಕಿ ಕಾಣಿಸಿಕೊಂಡು ಕ್ಷಣಾರ್ಧದಲ್ಲೇ ಹೊತ್ತಿ ಉರಿದ ಘಟನೆ ನಡೆದಿದೆ. ಬೆಂಕಿಯ ಜ್ವಾಲೆಗೆ ಶಾಪ್ ಸಂಪೂರ್ಣ ಹೊತ್ತಿ ಉರಿದಿದೆ. ಸ್ಥಳಕ್ಕ 10 ಅಗ್ನಿಶಾಮಕ ವಾಹನ ದೌಡಾಯಿಸಿದ್ದ ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿದೆ.  

ಮುಂಬೈ(ಜು.29):  ಮಹಾನಗರಿ ಮುಂಬೈನಲ್ಲಿ ಮತ್ತೊಂದು ಬೆಂಕಿ ಅವಘಡ ವರದಿಯಾಗಿದೆ. ಅಂಧೇರಿಯ ಡಿಎನ್ ನಗರ ವಲಯದಲ್ಲಿನ ಅಂಗಡಿಯೊಂದರಲ್ಲಿ ಬೆಂಕಿ ಕಾಣಿಸಿಕೊಂಡು ಹೊತ್ತಿ ಉರಿದಿದೆ. 1000 ಚದರ ಅಡಿಯ ಅಂಗಡಿ ಇದಾಗಿದ್ದು, ಭಾರಿ ಪ್ರಮಾಣದಲ್ಲಿ ಬೆಂಕಿ ಜ್ವಾಲೆ ಕಾಣಿಸಿಕೊಂಡಿದೆ. ಸ್ಟಾರ್ ಬಜಾರ್ ಸಮೀಪದ ಲಿಂಕ್ ರೋಡ್ ಬಳಿ ಇರುವ ಈ ಶಾಪ್‌ನಲ್ಲಿ ದಿಢೀರ್ ಬೆಂಕಿ ಕಾಣಿಸಿಕೊಂಡಿದೆ. ಸ್ಥಳಕ್ಕೆ 10 ಅಗ್ನಿಶಾಮಕ ವಾಹನಗಳು ದೌಡಾಯಿಸಿ ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿದೆ.  ಅದೃಷ್ಠವಶಾತ್ ಯಾವುದೇ ಸಾವು ನೋವಿನ ವರದಿಯಾಗಿಲ್ಲ. ಅಗ್ನಿಅವಘಢದ ವಿಡಿಯೋ ಬಹಿರಂಗವಾಗಿದ್ದು, ಆತಂಕ ತರುವಂತಿದೆ. ಮಹಾಲಕ್ಷ್ಮಿ ಎಸ್ಟೇಟ್ ಸಮೀಪದ ಚಿತ್ರಕೋಟ್ ಸ್ಟುಡಿಯೋ ಹಿಂಭಾಗದಲ್ಲಿ ಈ ಬೆಂಕಿ ಕಾಣಿಸಿಕೊಂಡಿದೆ. ಇಂದು(ಜು.29) ಸಂಜೆ 4.30 ಸುಮಾರಿಗೆ ಬೆಂಕಿ ಕಾಣಿಸಿಕೊಂಡಿದೆ. ಕೆಲವೇ ಕ್ಷಣಗಳಲ್ಲಿ ಶಾಪ್ ಹೊತ್ತಿ ಉರಿದಿದೆ. ಇತ್ತ ಮಾಹಿತಿ ಪಡೆದು ತಕ್ಷಣವೇ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕದಳ ಬೆಂಕಿ ನಂದಿಸಲು ಹರಸಾಹಸ ಪಟ್ಟಿದ್ದಾರೆ.

ಮೂಲಗಳ ಪ್ರಕಾರ ಚಿತ್ರಕೂಟ್ ಸ್ಟುಡಿಯೋ ಹಿಂಭಾಗದಲ್ಲಿರುವ ಮೈದಾನದಲ್ಲಿ ಬಾಲಿವುಡ್ ನಿರ್ದೇಶಕ ಲವ್ ರಂಜನ್ ನಿರ್ದೇಶನದ ಚಿತ್ರಕ್ಕಾಗಿ ಸೆಟ್ ಹಾಕಲಾಗಿತ್ತು. ಈ ಸೆಟ್‌ಗೆ ಬೆಂಕಿ ಬಿದ್ದಿದೆ. ನಟ ಸನ್ನಿ ಡಿಯೋಲ್ ಪುತ್ರ ರಾಜವೀರ್ ಸೆಟ್ ಪಕ್ಕದಲ್ಲಿ ಇದ್ದಾಗಲೇ ಬೆಂಕಿ ಕಾಣಿಸಿಕೊಂಡಿದೆ. ಭದ್ರತಾ ತಂಡ ತಕ್ಷಣವೇ ರಾಜವೀರ್ ಅವರನ್ನು ಸುರಕ್ಷಿತ ಸ್ಥಳಕ್ಕೆ ರವಾನಿಸಿದೆ.

 

ಬೆಂಗಳೂರು: ಡಾಂಬರ್ ಕೆಲಸದ ವೇಳೆ ಟಿಪ್ಪರ್ ಲಾರಿಗೆ ಆಕಸ್ಮಿಕ ಬೆಂಕಿ

ಬಾಲಿವುಡ್ ಚಿತ್ರಕ್ಕಾಗಿ ಹಾಕಿದ್ದ ಸೆಟ್ ಸಂಪೂರ್ಣ ಭಸ್ಮವಾಗಿದೆ. ಭಾರಿ ಪ್ರಮಾಣದಲ್ಲಿ ಹಣ ಸುರಿದು ಸೆಟ್ ಹಾಕಲಾಗಿತ್ತು.  ಇದೀಗ ಅಗ್ನಿಶಾಮಕ ದಳ ಸಿಬ್ಬಂದಿಗಳು ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.  ಈ ಸೆಟ್ ಹಾಗೂ ಇತರ ನಷ್ಟಗಳ ಕುರಿತು ಮಾಹಿತಿ ಇನ್ನಷ್ಟೇ ಲಭ್ಯವಾಗಬೇಕಿದೆ. 

ಬಿಹಾರ: ಪಟಾಕಿ ಸ್ಫೋಟಿಸಿ 5 ಮಂದಿ ಸಾವು
ಬಿಹಾರದ ಸರಣ್‌ ಜಿಲ್ಲೆಯಲ್ಲಿ ಅಕ್ರಮ ಪಟಾಕಿ ತಯಾರಿಕಾ ಕೇಂದ್ರದಲ್ಲಿ ಸಂಭವಿಸಿದ ಸ್ಫೋಟದಲ್ಲಿ ಮಗು ಸೇರಿದಂತೆ 5 ಮಂದಿ ದಾರುಣವಾಗಿ ಸಾವನ್ನಪ್ಪಿದ ಘಟನೆ ಭಾನುವಾರ ನಡೆದಿದೆ. 8 ಮಂದಿಗೆ ಗಾಯಗಳಾಗಿವೆ. ಶಬ್ಬೀರ್‌ ಹುಸೇನ್‌ ಎಂಬ ಈ ಉದ್ಯಮಿಯ ಮನೆಯ ಕೆಲವು ಭಾಗ ಸ್ಫೋಟದಿಂದ ಛಿದ್ರವಾಗಿದೆ. ಉಳಿದ ಭಾಗಕ್ಕೆ ಬೆಂಕಿ ಹತ್ತಿದೆ. ಸ್ಫೋಟದ ತೀವ್ರತೆ ಎಷ್ಟಿತ್ತು ಎಂದರೆ ಮನೆಯಲ್ಲಿ ಸಂಗ್ರಹಿಸಿದ್ದ ಪಟಾಕಿಗಳು ಸುಮಾರು 1 ತಾಸು ಕಾಲ ಸತತವಾಗಿ ಸ್ಫೋಟಿಸಿವೆ. ಅವಶೇಷಗಳ ಅಡಿ ಸಿಲುಕಿ ಗಾಯಗೊಂಡಿದ್ದ 8 ಮಂದಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಪಟಾಕಿ ಸ್ಫೋಟ ಹೇಗಾಯಿತು ಎಂಬುದರ ಪತ್ತೆಗೆ ವಿಧಿವಿಜ್ಞಾನ ತಜ್ಞರನ್ನು ಕರೆಸಿ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.

 

ಹುಬ್ಬಳ್ಳಿಯ ಕ್ಯಾಂಡಲ್ ಫ್ಯಾಕ್ಟರಿಯಲ್ಲಿ ಅಗ್ನಿ ಅವಘಡ: ಮೃತರ ಸಂಖ್ಯೆ ಮೂರಕ್ಕೇರಿಕೆ

ವಿದ್ಯುತ್‌ ಶಾರ್ಚ್‌ ಸಕ್ರ್ಯೂಟ್‌: ಅಂಗಡಿಗೆ ಬೆಂಕಿ, ಅಪಾರ ಹಾನಿ
ರಬಕವಿ-ಬನಹಟ್ಟಿ: ಬನಹಟ್ಟಿಯ ಜಮಖಂಡಿ-ಕುಡಚಿ ರಸ್ತೆ ಪಕ್ಕದಲ್ಲಿನ ಕೆಜಿಎನ್‌ ಸ್ಟೀಲ್‌ ಹೌಸನ ಪತ್ರಾಸ ಹಾಗೂ ಬಣ್ಣದ ಅಂಗಡಿಯಲ್ಲಿ ಭಾನುವಾರ ಬೆಳಗ್ಗೆ ವಿದ್ಯುತ್‌ ಶಾರ್ಚ್‌ ಸಕ್ರ್ಯೂಟ್‌ನಿಂದಾಗಿ ಬೆಂಕಿ ತಗುಲಿ ಬಣ್ಣದ ಡಬ್ಬಿಗಳು ಸುಟ್ಟು ಲಕ್ಷಾಂತರ ರುಪಾಯಿ ಹಾನಿ ಸಂಭವಿಸಿದೆ. ಬೆಂಕಿ ಅವಘಡದ ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ದಾವಿಸಿದ 112 ಪೊಲೀಸ್‌ ಸಿಬ್ಬಂದಿ ಹಾಗೂ ಅಗ್ನಿಶಾಮಕ ದಳದವರು ಬೆಂಕಿಯನ್ನು ಆರಿಸಿ ಬಾರಿ ಅನಾಹುತವನ್ನು ತಪ್ಪಿಸಿದ್ದಾರೆ. ಎಎಸೈ ಮಾರುತಿ ಭಜಂತ್ರಿ, ಹೆಡ್‌ಕಾನ್ಸಟೇಬಲ್‌ ರಾಜು ಮನಗೂಳಿ, ಕಾನ್ಸಟೇಬಲ್‌ ಬಸು ಸಾವನಲ್‌ ಹಾಗೂ ಅಗ್ನಿಶಾಮಕದಳದ ಅಧಿಕಾರಿಗಳು ಇದ್ದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಬಾಬ್ರಿ ಮಸೀದಿಗೆ ಅಡಿಗಲ್ಲು ವಿವಾದ ಬೆನ್ನಲ್ಲೇ ಬಂಗಾಳದಲ್ಲಿ 5 ಲಕ್ಷ ಹಿಂದೂಗಳಿಂದ ಭಗವದ್ಗೀತೆ ಪಠಣ
ಖ್ಯಾತ ಸ್ಟಾರ್ ನಟನಿಗೆ ಬಿಷ್ಟೋಯ್ ಗ್ಯಾಂಗ್ ಬೆದರಿಕೆ! ಆತಂಕದಲ್ಲಿರುವ ಫ್ಯಾನ್ಸ್, ಏನಾಗ್ತಿದೆ ಅಲ್ಲೀಗ?