ಇಸ್ರೇಲ್‌ ಪೊಲೀಸರಿಗೆ ಕೇರಳದಿಂದ ಸಮವಸ್ತ್ರ ಪೂರೈಕೆ: ಯುದ್ಧಾರಂಭದ ನಂತರ ಹೆಚ್ಚಿದ ಬೇಡಿಕೆ

By Kannadaprabha News  |  First Published Oct 20, 2023, 9:25 AM IST

ಇಸ್ರೇಲ್ ಮತ್ತು ಹಮಾಸ್ ನಡುವೆ ಕದನ ವಿಶ್ವಾದ್ಯಂತ ಸುದ್ದಿ ಮಾಡತೊಡಗಿದೆ. ಇಂಥದ್ದರಲ್ಲಿ ಕೇರಳದ ಉತ್ತರ ಭಾಗದ ಒಂದು ಪಟ್ಟಣವು ಇಸ್ರೇಲ್‌ನೊಂದಿಗೆ ನಿಕಟ ಬಾಂಧವ್ಯ ಹೊಂದಿ, ಈ ಸಂದರ್ಭದಲ್ಲಿ ಸುದ್ದಿ ಮಾಡಿದೆ.


ಕಣ್ಣೂರು: ಇಸ್ರೇಲ್ ಮತ್ತು ಹಮಾಸ್ ನಡುವೆ ಕದನ ವಿಶ್ವಾದ್ಯಂತ ಸುದ್ದಿ ಮಾಡತೊಡಗಿದೆ. ಇಂಥದ್ದರಲ್ಲಿ ಕೇರಳದ ಉತ್ತರ ಭಾಗದ ಒಂದು ಪಟ್ಟಣವು ಇಸ್ರೇಲ್‌ನೊಂದಿಗೆ ನಿಕಟ ಬಾಂಧವ್ಯ ಹೊಂದಿ, ಈ ಸಂದರ್ಭದಲ್ಲಿ ಸುದ್ದಿ ಮಾಡಿದೆ. ಕಣ್ಣೂರಿನ ಸ್ಥಳೀಯ ಉಡುಪು ಘಟಕದ ನೂರಾರು ಟೇಲರ್‌ಗಳು ಕಳೆದ 8 ವರ್ಷಗಳಿಂದ ಇಸ್ರೇಲ್ ಪೊಲೀಸ್ ಪಡೆಗೆ (Israel police uniform)ಸಮವಸ್ತ್ರ ಸಿದ್ಧಪಡಿಸಲು ಅವಿರತವಾಗಿ ಶ್ರಮಿಸುತ್ತಿದ್ದಾರೆ. ಕಣ್ಣೂರು ಕೈಮಗ್ಗ ತಯಾರಿಕೆ ಮತ್ತು ಜವಳಿ ರಫ್ತಿನ ಅದ್ಭುತ ಸಂಪ್ರದಾಯಕ್ಕೆ ಹೆಸರುವಾಸಿಯಾಗಿದೆ.

ಜಿಲ್ಲೆಯ ಮರ್ಯನ್‌ ಅಪರಲ್ ಪ್ರೈವೇಟ್ ಲಿಮಿಟೆಡ್‌ನ (Maryan Apparel Pvt Ltd) ಟೇಲರ್‌ಗಳು ಮತ್ತು ಇತರ ಉದ್ಯೋಗಿಗಳು ಇಸ್ರೇಲ್ ಪೊಲೀಸ್ ಪಡೆಯ ಸೊಗಸಾದ ತಿಳಿ ನೀಲಿ, ಉದ್ದನೆಯ ತೋಳಿನ ಸಮವಸ್ತ್ರದ ಶರ್ಟ್‌ ಸಿದ್ಧಪಡಿಸುತ್ತಾರೆ. ಡಬಲ್-ಪಾಕೆಟ್ ಶರ್ಟ್‌ಗಳು ಮಾತ್ರವಲ್ಲದೆ, ಘಟಕವು ಅದರ ತೋಳುಗಳ ಮೇಲೆ ಟ್ರೇಡ್‌ಮಾರ್ಕ್ ಲಾಂಛನಗಳನ್ನು ವಿನ್ಯಾಸಗೊಳಿಸಿ ಲಗತ್ತಿಸುತ್ತದೆ.

Tap to resize

Latest Videos

ಮುಂಬೈ ಮೂಲದ ಕೇರಳದ ಉದ್ಯಮಿ ಥಾಮಸ್ ಒಲಿಕಲ್ (Thomas Olical) ಅವರು ಉಡುಪು ಘಟಕದ ಮಾಲೀಕರಾಗಿದ್ದು, ಪ್ರಸ್ತುತ 1,500 ಕ್ಕೂ ಹೆಚ್ಚು ನುರಿತ ಸಿಬ್ಬಂದಿಯನ್ನು ನೇಮಿಸಿಕೊಂಡಿದ್ದಾರೆ. ಯುದ್ಧ ಆರಂಭವಾದ ನಂತರ ಇಸ್ರೇಲಿ ಪೊಲೀಸ್‌ ಸಮವಸ್ತ್ರಕ್ಕೆ ಬೇಡಿಕೆ ಹಚ್ಚಿದ್ದು. ಅವನ್ನು ಪೂರೈಸುತ್ತಿದ್ದಾರೆ.   ಈ ಬಗ್ಗೆ ಮಾತನಾಡಿದ ಥಾಮಸ್‌, ‘ನಾವು ಕಳೆದ 8 ವರ್ಷಗಳಿಂದ ಇಸ್ರೇಲ್ ಪೊಲೀಸರಿಗೆ ವಾರ್ಷಿಕ 1 ಲಕ್ಷ ಸಮವಸ್ತ್ರದ ಶರ್ಟ್‌ಗಳನ್ನು ಪೂರೈಸುತ್ತಿದ್ದೇವೆ. ಇಸ್ರೇಲ್‌ನಂತಹ ಉನ್ನತ ದರ್ಜೆಯ ಪೊಲೀಸ್ ಪಡೆಗೆ ನಾವು ಸಮವಸ್ತ್ರದ ಶರ್ಟ್‌ಗಳನ್ನು ಪೂರೈಸುತ್ತಿದ್ದೇವೆ ಎಂಬುದು ನಮಗೆ ನಿಜವಾಗಿಯೂ ಹೆಮ್ಮೆಯ ವಿಷಯ’ ಎಂದರು.

ಚುನಾವಣೆ ಹೊತ್ತಲ್ಲೇ ತೆಲಂಗಾಣದಲ್ಲಿ 750 ಕೋಟಿ ರು. ತುಂಬಿದ್ದ ಟ್ರಕ್‌ ...

2006 ರಲ್ಲಿ ಆರಂಭವಾದ ಕಂಪನಿಯು ಪ್ರಪಂಚದಾದ್ಯಂತದ ವಿವಿಧ ದೇಶಗಳ ಸೇನಾ ಸಿಬ್ಬಂದಿ, ಪೊಲೀಸ್ ಸಿಬ್ಬಂದಿ, ಭದ್ರತಾ ಅಧಿಕಾರಿಗಳು ಮತ್ತು ಆರೋಗ್ಯ ಸೇವಾ ಕಾರ್ಯಕರ್ತರ ಸಮವಸ್ತ್ರ ತಯಾರಿಕೆಯಲ್ಲಿ ಪರಿಣತಿ ಹೊಂದಿದೆ. ಶಾಲಾ ಸಮವಸ್ತ್ರಗಳು, ಸೂಪರ್‌ಮಾರ್ಕೆಟ್ ಸಿಬ್ಬಂದಿಗೆ ಉಡುಪುಗಳು, ವೈದ್ಯರ ಕೋಟ್‌ಗಳು, ಕವರ್‌ಗಳು, ಕಾರ್ಪೊರೇಟ್ ವೇರ್‌ಗಳು ಇತ್ಯಾದಿಗಳನ್ನು ಸಹ ಪೂರೈಸುತ್ತದೆ. ಇಸ್ರೇಲಿ ಅಧಿಕಾರಿಗಳು ಪರಿಪೂರ್ಣತೆಯ ಬಗ್ಗೆ ತುಂಬಾ ಕಟ್ಟುನಿಟ್ಟು. ಸಮವಸ್ತ್ರ ಸಂಪೂರ್ಣವಾಗಿ ಫಿಟ್ ಆಗಿದ್ದರೆ ಮತ್ತು ಗುಣಮಟ್ಟವು ಸಮನಾಗಿದ್ದರೆ ಮಾತ್ರ ಅವರು ಅದನ್ನು ಸ್ವೀಕರಿಸುತ್ತಾರೆ ಎಂದು ಥಾಮಸ್ ಒಲಿಕಲ್ ಹೇಳಿದರು.

ಗಡಿ ಭಾಗದಲ್ಲಿ ಹೆಚ್ಚಿದ ಟ್ಯಾಂಕರ್‌ ಜಮಾವಣೆ: ಸದ್ಯಕ್ಕೆ ಭಾರತೀಯರ ತೆರವ ...

click me!