
ಕೇಂದ್ರ ಸರ್ಕಾರ, ನೋವು ನಿವಾರಕ ನಿಮೆಸುಲೈಡ್ (Nimesulide) ಬಗ್ಗೆ ಪ್ರಮುಖ ನಿರ್ಧಾರ ತೆಗೆದುಕೊಂಡಿದೆ. ಜನರ ಆರೋಗ್ಯವನ್ನು ಗಮನದಲ್ಲಿಟ್ಟುಕೊಂಡು 100 ಮಿಗ್ರಾಂಗಿಂತ ಹೆಚ್ಚು ನಿಮೆಸುಲೈಡ್ ಹೊಂದಿರುವ ಓರಲ್ ನಿಮೆಸುಲೈಡ್ ಮಾತ್ರೆಗಳ ತಯಾರಿಕೆ, ಮಾರಾಟ ಮತ್ತು ವಿತರಣೆಯನ್ನು ಸರ್ಕಾರ ತಕ್ಷಣದಿಂದ ಜಾರಿಗೆ ಬರುವಂತೆ ನಿಷೇಧಿಸಿದೆ. 1940 ರ ಔಷಧಗಳು ಮತ್ತು ಸೌಂದರ್ಯವರ್ಧಕ ಕಾಯ್ದೆಯ ಸೆಕ್ಷನ್ 26A ಅಡಿಯಲ್ಲಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ.
ಆರೋಗ್ಯ ಸಚಿವಾಲಯದ ಅಧಿಸೂಚನೆಯ ಪ್ರಕಾರ, 100 ಮಿಗ್ರಾಂಗಿಂತ ಹೆಚ್ಚಿನ ಪ್ರಮಾಣವನ್ನು ಹೊಂದಿರುವ ನಿಮೆಸುಲೈಡ್ ಮನುಷ್ಯರಿಗೆ ಅಪಾಯವನ್ನುಂಟುಮಾಡಬಹುದು. ಇದು ಸ್ಟೀರಾಯ್ಡ್ ಅಲ್ಲದ ಉರಿಯೂತದ ಔಷಧ (NSAID)ವಾಗಿದೆ. ಇದು ಲಿವರ್ ಮೇಲೆ ಹಾಗೂ ಇತರ ಅಂಗಗಳ ಮೇಲೆ ಅಡ್ಡಪರಿಣಾಮ ಬೀರುವ ಬಗ್ಗೆ ವಿಶ್ವಾದ್ಯಂತ ತನಿಖೆ ಮಾಡಲಾಗುತ್ತಿದೆ. ಔಷಧಗಳ ತಾಂತ್ರಿಕ ಸಲಹಾ ಮಂಡಳಿಯನ್ನು ಸಂಪರ್ಕಿಸಿದ ನಂತರ ಸರ್ಕಾರ ಈ ನಿರ್ಧಾರವನ್ನು ತೆಗೆದುಕೊಂಡಿದೆ. ಆದೇಶದ ಪ್ರಕಾರ, ಈ ನಿಷೇಧವು ದೇಶಾದ್ಯಂತ ತಕ್ಷಣವೇ ಜಾರಿಗೆ ಬರಲಿದೆ. ಕಡಿಮೆ-ಡೋಸ್ ಇರುವ ಮತ್ತು ಇತರ ಸುರಕ್ಷಿತ ಪರ್ಯಾಯಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ ಎಂದು ಸರ್ಕಾರ ಹೇಳಿದೆ. ಸಾರ್ವಜನಿಕ ಆರೋಗ್ಯಕ್ಕೆ ಯಾವುದೇ ಅಪಾಯವಿಲ್ಲ ಎಂದು ಖಚಿತಪಡಿಸಿಕೊಳ್ಳಲು ಸಾರ್ವಜನಿಕ ಹಿತಾಸಕ್ತಿಯಿಂದ ಈ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಸರ್ಕಾರ ಸ್ಪಷ್ಟಪಡಿಸಿದೆ.
ಇನ್ನು ಮುಂದೆ ಪರ್ಮಿಷನ್ ಇಲ್ಲದೇ ಓಡಿ ಹೋಗಿ ಲವ್ ಮ್ಯಾರೇಜ್ ಆಗುವಂತಿಲ್ಲ,
ನಿಮೆಸುಲೈಡ್ ಬಗ್ಗೆ ಬಹಳ ಹಿಂದಿನಿಂದಲೂ ಕಳವಳ ವ್ಯಕ್ತವಾಗಿದೆ. 2011 ರಲ್ಲಿ, ಆರೋಗ್ಯ ಸಚಿವಾಲಯವು 12 ವರ್ಷದೊಳಗಿನ ಮಕ್ಕಳಲ್ಲಿ ನಿಮೆಸುಲೈಡ್ ಬಳಕೆಯನ್ನು ನಿಷೇಧಿಸಿದೆ. ಇದಾದ್ಮೇಲೆ ಜನವರಿ 2025 ರಲ್ಲಿ, ಸರ್ಕಾರ ಪ್ರಾಣಿಗಳಿಗೆ ಎಲ್ಲಾ ನಿಮೆಸುಲೈಡ್ ಔಷಧಿಗಳ ತಯಾರಿಕೆ, ಮಾರಾಟ ಮತ್ತು ವಿತರಣೆಯನ್ನು ನಿಷೇಧಿಸಿತ್ತು. ಮಾರುಕಟ್ಟೆ ಸಂಶೋಧನಾ ಸಂಸ್ಥೆ ಫಾರ್ಮಾಟ್ರಾಕ್ ಮಾಹಿತಿಯ ಪ್ರಕಾರ, ಭಾರತದಲ್ಲಿ ನಿಮೆಸುಲೈಡ್ ಔಷಧಿ ಮಾರುಕಟ್ಟೆ ಸುಮಾರು 497 ಕೋಟಿ ರೂಪಾಯಿ ಮೌಲ್ಯದ್ದಾಗಿದೆ. ಕಳೆದ 12 ತಿಂಗಳುಗಳಲ್ಲಿ ಶೇಕಡಾ 11 ರಷ್ಟು ಮಾರ್ಕೆಟ್ ಬೆಳೆದಿದೆ. ಸರ್ಕಾರದ ಈ ನಿರ್ಧಾರದಿಂದ ಔಷಧಿ ಮಾರುಕಟ್ಟೆ ಮೇಲೆ ಪರಿಣಾಮ ಬೀರಲಿದೆ. ನಿಮೆಸುಲೈಡ್ ಬ್ರಾಂಡ್ ಮಾರಾಟ ಮಾಡುವ ಕಂಪನಿಗಳು ಉತ್ಪಾದನೆಯನ್ನು ನಿಲ್ಲಿಸಬೇಕಾಗುತ್ತದೆ. ಈಗಾಗಲೇ ಸಿದ್ದವಾದ ಔಷಧಿಯನ್ನು ಹಿಂಪಡೆಯಬೇಕಾಗುತ್ತದೆ. ನಿಮೆಸುಲೈಡ್ ಒಟ್ಟು NSAID ಮಾರಾಟದ ಒಂದು ಸಣ್ಣ ಭಾಗವನ್ನು ಪ್ರತಿನಿಧಿಸುವುದರಿಂದ ದೊಡ್ಡ ಕಂಪನಿಗಳ ಮೇಲಿನ ಆರ್ಥಿಕ ಪರಿಣಾಮವು ಸೀಮಿತವಾಗಿರುತ್ತದೆ ಎಂದು ವಿಶ್ಲೇಷಕರು ಅಂದಾಜಿಸಿದ್ದಾರೆ. ಸರ್ಕಾರವು ಈ ಹಿಂದೆ ಹಲವಾರು ಹೆಚ್ಚಿನ ಅಪಾಯಕಾರಿ ಔಷಧಗಳು ಮತ್ತು ಸ್ಥಿರ-ಡೋಸ್ ಸಂಯೋಜನೆಗಳನ್ನು ಸೆಕ್ಷನ್ 26A ಅಡಿಯಲ್ಲಿ ನಿಷೇಧಿಸಿದೆ.
ಶ್ರೀಮಂತ ಅಂಬಾನಿ ಕುಟುಂಬದ ಸರಳ ವ್ಯಕ್ತಿ, ಧೀರೂಬಾಯಿ ಟೆಕ್ಸ್‌ಟೈಲ್ ಬಿಸಿನೆಸ್ ರೂವಾರಿ ವಿಮಲ್ ಅಂಬಾನಿ ಯಾರು?
ನಿಮೆಸುಲೈಡ್ ಎಲ್ಲಿ ಬಳಸಲಾಗ್ತಿತ್ತು?
ಸಂಧಿವಾತದಂತಹ ಸಮಸ್ಯೆ, ನೋವು, ಊತ ಮತ್ತು ಉರಿಯೂತವನ್ನು ಕಡಿಮೆ ಮಾಡಲು ನಿಮೆಸುಲೈಡ್ ಬಳಸಲಾಗುತ್ತದೆ. ಶಸ್ತ್ರಚಿಕಿತ್ಸೆ, ಹಲ್ಲು ನೋವು, ಸೌಮ್ಯವಾದ ಉಳುಕು ಮತ್ತು ಕಿವಿ, ಮೂಗು ಮತ್ತು ಗಂಟಲಿನ ನೋವನ್ನು ಇದನ್ನು ಕಡಿಮೆ ಮಾಡುತ್ತದೆ. ನಿಮೆಸುಲೈಡ್ ಮಾತ್ರೆಗಳು, ಸಿರಪ್, ಕ್ಯಾಪ್ಸುಲ್ಗಳು, ಟ್ಯಾಬ್ಲೆಟ್ ಡಿಟಿ, ಟ್ಯಾಬ್ಲೆಟ್ ಎಂಡಿ, ಚುಚ್ಚುಮದ್ದುಗಳು, ಮೌಖಿಕ ಹನಿಗಳು, ದ್ರಾವಣಗಳು ಮತ್ತು ಜೆಲ್ ಸೇರಿದಂತೆ ವಿವಿಧ ರೂಪಗಳಲ್ಲಿ ಲಭ್ಯವಿದೆ. ಸಾಮಾನ್ಯವಾಗಿ ಈ ಮಾತ್ರೆಗಳನ್ನು ಸೇವನೆ ಮಾಡಿದಾಗ ಗ್ಯಾಸ್, ಹುಳಿ ತೇಗು, ತಲೆತಿರುಗುವಿಕೆ, ಹೊಟ್ಟೆ ನೋವು, ಚರ್ಮದ ಸೋಂಕು, ವಾಕರಿಕೆ ಮತ್ತು ವಾಂತಿ, ಅತಿಸಾರ, ರಕ್ತ ಹೆಪ್ಪುಗಟ್ಟುವಿಕೆ ಸಮಸ್ಯೆಗಳು ಕಾಡುತ್ತವೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ