
ಕೊಚ್ಚಿ[ಜ.11]: : ಕರಾವಳಿ ನಿಯಂತ್ರಣ ವಲಯದ ನಿಯಮಗಳನ್ನು ಗಾಳಿಗೆ ತೂರಿ ನಿರ್ಮಾಣ ಮಾಡಲಾಗಿದ್ದ ಕೊಚ್ಚಿಯ ಮರಾಡು ಫ್ಲ್ಯಾಟ್‌ಗಳನ್ನು ಸುಪ್ರೀಂ ಕೋರ್ಟ್ ಆದೇಶದಂತೆ ಜ.11 ಹಾಗೂ 12ರಂದು ಧ್ವಂಸಗೊಳಿಸಲು ಕೇರಳ ಸರ್ಕಾರ ಮುಂದಾಗಿದೆ. ಮೊದಲ ಹಂತವಾಗಿ ಬರೋಬ್ಬರಿ 800 ಕೆಜಿ ಸ್ಫೋಟಕ ಬಳಸಿ ಎರಡು ಅಪಾರ್ಟ್‌ಮೆಂಟ್‌ಗಳನ್ನು ನೆಲಸಮಗೊಳಿಸಲಾಗಿದೆ.
"
ಹೌದು ಸುಪ್ರೀಂ ಆದೇಶದ ಬೆನ್ನಲ್ಲೇ ಅಕ್ರಮವಾಗಿ ನಿರ್ಮಿಸಲಾಗಿದ್ದ ಐಷಾರಾಮಿ, ಅಪಾರ್ಟ್‌ಮೆಂಟ್ ನೆಲಸಮಗೊಳಿಸಲು ಆದೇಶ ನೀಡಿದ ಬೆನ್ನಲ್ಲೇ ಧ್ವಂಸಗೊಳಿಸುವ ಕಟ್ಟಡದ ಸುತ್ತಮುತ್ತ ನೆಲ, ಜಲ ಹಾಗೂ ವಾಯುಸೀಮೆಯಲ್ಲಿ ಸೆ.144ರ ಅನ್ವಯ ನಿಷೇಧಾಜ್ಞೆ ಹೇರಲಾಗಿತ್ತು. ಅಲ್ಲದೇ ಫ್ಲ್ಯಾಟ್‌ಗೆ ಹೋಗುವ ದಾರಿಗಳನ್ನು ಬಂದ್ ಮಾಡಲಾಗಿತ್ತು. ಆದೇಶದ ಅನ್ವಯ 4 ಅಪಾರ್ಟ್‌ಮೆಂಟ್‌ಗಳ ಪೈಕಿ ಎರಡು ಕಟ್ಟಡಗಳನ್ನು ಈಗಾಗಲೇ ಧ್ವಂಸಗೊಳಿಸಲಾಗಿದ್ದು, ಇನ್ನುಳಿದ ಎರಡು ಅಪಾರ್ಟ್‌ಮೆಂಟ್‌ಗಳನ್ನು ನಾಳೆ ಧ್ವಂಸಗೊಳಿಸಲಾಗುತ್ತದೆ.
ಈ ಕೋಟ್ಯಂತರ ಮೌಲ್ಯದ ಕಟ್ಟಡಗಳನ್ನು ಧ್ವಂಸಗೊಳಿಸಲು ಬರೋಬ್ಬರಿ 800 ಕೆಜಿ ಸ್ಫೋಟಕವನ್ನು ಬಳಸಲಾಗಿದೆ. ಹೀಗಾಗಿ ಕ್ಷಣ ಮಾತ್ರದಲ್ಲಿ 343 ಮನೆಗಳಿದ್ದ ಅಪಾರ್ಟ್‌ಮೆಂಟ್ಸ್ ನೆಲಕ್ಕುರುಳಿದೆ. ಈ ಕಟ್ಟಡಗಳಲ್ಲಿದ್ದ ಒಂದು ಫ್ಲ್ಯಾಟ್ ಮೌಲ್ಯ 50 ಲಕ್ಷದಿಂದ 1 ಕೋಟಿ ಎಂದು ಹೇಳಲಾಗಿದೆ.
ಒಟ್ಟು 343 ಫ್ಲ್ಯಾಟ್‌ಗಳಿರುವ ಕಟ್ಟಡಗಳನ್ನು 138 ದಿನಗಳ ಒಳಗೆ ಕೆಡವಬೇಕು ಎಂದು ಸುಪ್ರೀಂ ಕೋರ್ಟ್ ಸೆ.19ರಂದು ಅದೇಶ ನೀಡಿತ್ತು.
ಜನವರಿ 11ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ:
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ