ರಾಜಕೀಯ ನಾಯಕರ ಫೋಟೋ ಫಾರ್ವರ್ಡ್ ಮಾಡಿದ್ರೆ ಜೈಲಾಗುತ್ತೆ. ಇದು ನಿಜಾನಾ? ಇಲ್ಲಿದೆ ಸುದ್ದಿ ಹಿಂದಿನ ವಾಸ್ತವ
ನವದೆಹಲಿ[ಜ.11]: ದೇಶದ ಪ್ರಮುಖ ರಾಜಕೀಯ ನಾಯಕರ ಫೋಟೋವನ್ನು ಫಾರ್ವಡ್ ಮಾಡಿದರೆ ಜೈಲಿಗೆ ಕಳುಹಿಸಲಾಗುತ್ತದೆ ಎಂಬ ಸಂದೇಶ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ವೈರಲ್ ಆಗಿರುವ ಸಂದೇಶ ಹೀಗಿದೆ; ‘ಗ್ರೂಪ್‌ನ ಎಲ್ಲಾ ಸದಸ್ಯರಿಗೊಂದು ಮನವಿ. ದಯವಿಟ್ಟು ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ನರೇಂದ್ರ ಮೋದಿ, ಕೇಜ್ರಿವಾಲ್ ಅಥವಾ ಯಾರೇ ರಾಜಕೀಯ ನಾಯಕರ ಫೋಟೋವನ್ನು ಫಾರ್ವಡ್ ಮಾಡಬೇಡಿ.
ಹೀಗೆ ಫಾರ್ವಡ್ ಮಾಡಿದ್ದ ದೆಹಲಿ, ಮುಂಬೈ, ಚೆನ್ನೈ ಮತ್ತು ದೆಹಲಿಯ 260 ಗ್ರೂಪ್ ಅಡ್ಮಿನ್‌ಗಳನ್ನು ಬಂಧಿಸಲಾಗಿದೆ. ಪೊಲೀಸರು ವಾಟ್ಸ್‌ಆ್ಯಪ್ ಚಟುವಟಿಕೆ ಮೇಲೆ ಕಣ್ಣಿಟ್ಟಿರುತ್ತಾರೆ. ಹಾಗೆಯೇ ಧರ್ಮ, ರಾಜಕೀಯ ಹಾಗೂ ಸಾಮಾಜಿಕ ವ್ಯವಸ್ಥೆಗೆ ಸಂಬಂಧಿಸಿದ ಯಾವುದೇ ಸಂದೇಶಗಳನ್ನೂ ಗ್ರೂಪಿಗೆ ಕಳುಹಿಸಬೇಡಿ. ಇಂಥ ಸಂದೇಶವನ್ನು ಕಳುಹಿಸಿದರೆ ಜಾಮೀನು ರಹಿತವಾಗಿ ಗರಿಷ್ಠ 7 ವರ್ಷದ ವರೆಗೆ ಶಿಕ್ಷೆ ನೀಡಲು ಅವಕಾಶವಿದೆ’ ಎಂದು ಹೇಳಲಾಗಿದೆ.
Fact Check| ವೈರಲ್ ಸುದ್ದಿಗಳ ಹಿಂದಿನ ಸತ್ಯಾಸತ್ಯತೆ: ಇಲ್ಲಿದೆ ಸುದ್ದಿಗಳು
ಸದ್ಯ ಇದೀಗ ವೈರಲ್ ಆಗುತ್ತಿದೆ. ಆದರೆ ಈ ಸಂದೇಶದ ಹಿಂದಿನ ವಾಸ್ತವ ಏನೆಂದು ಪರಿಶೀಲಿಸಿದಾಗ ಇದೊಂದು ಸುಳ್ಳುಸುದ್ದಿ ಎಂಬುದು ಬಹಿರಂಗವಾಗಿದೆ. ಈ ರೀತಿಯ ಸಂದೇಶ ವೈರಲ್ ಆಗುತ್ತಿರುವುದು ಇದೇ ಮೊದಲೇನಲ್ಲ. 2018ರಲ್ಲೂ ಇದೇ ರೀತಿಯ ಸಂದೇಶ ವೈರಲ್ ಆಗಿತ್ತು. ಅಲ್ಲದೆ ಈ ಬಗ್ಗೆ ಯಾವುದೇ ಮುಖ್ಯವಾಹಿನಿ ಮಾಧ್ಯಮಗಳಲ್ಲೂ ವರದಿಯಾಗಿಲ್ಲ.
ಅಲ್ಲದೆ ಪೊಲೀಸರು ವಾಟ್ಸ್‌ಆ್ಯಪ್ ಮೇಲೆ ಕಣ್ಣಿಟ್ಟಿರುತ್ತಾರೆ ಎಂಬುದು ಸುಳ್ಳು ಸುದ್ದಿ. ಪೊಲೀಸರು ವಾಟ್ಸ್‌ಆ್ಯಪ್ ಚಟುವಟಿಕೆ ಮೇಲೆ ಕಣ್ಣಿಡಲು ಸಾಧ್ಯವಿಲ್ಲ.