ರಾಹುಲ್‌ಗೆ ಮತ್ತೆ ಸಂಕಷ್ಟ: ಲಂಡನ್‌ನಲ್ಲಿ ದೂರು ದಾಖಲಿಸುವ ಬೆದರಿಕೆಯೊಡ್ಡಿದ ಲಲಿತ್ ಮೋದಿ

By Anusha Kb  |  First Published Mar 30, 2023, 12:04 PM IST

 ದೇಶ ತೊರೆದು ಲಂಡನ್‌ನಲ್ಲಿ ನೆಲೆಸಿರುವ ಇಂಡಿಯನ್ ಪ್ರೀಮಿಯರ್ ಲೀಗ್‌ನ ಮಾಜಿ ಅಧ್ಯಕ್ಷ  ಲಲಿತ್ ಮೋದಿ, ತನ್ನನ್ನು ಆಗಾಗ ಕಳ್ಳ, ಪಲಾಯನವಾದಿ ಎಂದು ಹೇಳಿ ಮೂದಲಿಸುತ್ತಿರುವ ಕಾಂಗ್ರೆಸ್ ಹಾಗೂ ರಾಹುಲ್ ಗಾಂಧಿ ವಿರುದ್ಧ ಲಂಡನ್‌ನಲ್ಲಿ ಕೇಸ್ ದಾಖಲಿಸುವ ಬೆದರಿಕೆಯೊಡ್ಡಿದ್ದಾರೆ.


ನವದೆಹಲಿ:  ದೇಶ ತೊರೆದು ಲಂಡನ್‌ನಲ್ಲಿ ನೆಲೆಸಿರುವ ಇಂಡಿಯನ್ ಪ್ರೀಮಿಯರ್ ಲೀಗ್‌ನ ಮಾಜಿ ಅಧ್ಯಕ್ಷ  ಲಲಿತ್ ಮೋದಿ, ತನ್ನನ್ನು ಆಗಾಗ ಕಳ್ಳ, ಪಲಾಯನವಾದಿ ಎಂದು ಹೇಳಿ ಮೂದಲಿಸುತ್ತಿರುವ ಕಾಂಗ್ರೆಸ್ ಹಾಗೂ ರಾಹುಲ್ ಗಾಂಧಿ ವಿರುದ್ಧ ಲಂಡನ್‌ನಲ್ಲಿ ಕೇಸ್ ದಾಖಲಿಸುವ ಬೆದರಿಕೆಯೊಡ್ಡಿದ್ದಾರೆ. ಈ ಬಗ್ಗೆ ಸರಣಿ ಟ್ವಿಟ್‌ಗಳನ್ನು ಅವರು ಮಾಡಿದ್ದು, ಕಾಂಗ್ರೆಸ್ ಹಾಗೂ ರಾಹುಲ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. 

ಕಳ್ಳರೆಲ್ಲರೂ ಮೋದಿ ಹೆಸರನ್ನೇ ಏಕೆ ಹೊಂದಿದ್ದಾರೆ ಎಂದು ರಾಹುಲ್ ಗಾಂಧಿ ಪ್ರಶ್ನಿಸಿದ್ದರು. ಈ ಹೇಳಿಕೆಗೆ ಸಂಬಂಧಿಸಿದಂತೆ ಈಗ ಲಲಿತ್ ಮೋದಿ ಕೂಡ ರಾಹುಲ್ ಗಾಂಧಿ ವಿರುದ್ಧ ಪ್ರಕರಣ ದಾಖಲಿಸಲು ಮುಂದಾಗಿದ್ದಾರೆ.  ಈ ಹೇಳಿಕಗೆ ರಾಹುಲ್‌ಗೆ ಜೈಲು ಶಿಕ್ಷೆಯಾದ ದಿನಗಳ ನಂತರ ಲಲಿತ್ ಮೋದಿ ಈ ಟ್ವಿಟ್ ಮಾಡಿದ್ದಾರೆ.  ಸರಣಿ ಟ್ವಿಟ್‌ನಲ್ಲಿ ರಾಹುಲ್ ವಿರುದ್ಧ ಕೆಂಡ ಕಾರಿರುವ ಲಲಿತ್ ಮೋದಿ,  ಯಾವ ಆಧಾರದ ಮೇಲೆ ಕಾಂಗ್ರೆಸಿಗರು ನನ್ನನ್ನು ಪರಾರಿಯಾದವ ಎಂದು ಉಲ್ಲೇಖಿಸುತ್ತಿದ್ದಾರೆ. ನಾನು ಯಾವುದೇ ಪ್ರಕರಣದಲ್ಲಿ ಶಿಕ್ಷೆಗೆ ಒಳಗಾಗಿಲ್ಲ. ರಾಹುಲ್ ಗಾಂಧಿ ಬೆಂಬಲಿಗರು ಮತ್ತೆ ಮತ್ತೆ ನನ್ನನ್ನು ನ್ಯಾಯಾಂಗ ಹಿಡಿತದಿಂದ ಪರಾರಿಯಾದವ ಎಂದು ಆರೋಪಿಸುತ್ತಿದ್ದಾರೆ. ಅದು ಹೇಗೆ ಮತ್ತು ಯಾಕೆ? ರಾಹುಲ್ ಗಾಂಧಿಯಂತೆ ನಾನೇನು ಶಿಕ್ಷೆಗೆ ಒಳಗಾಗಿಲ್ಲ. ಈಗ ಒಬ್ಬ ಸಾಮಾನ್ಯ ನಾಗರಿಕನು ಅದನ್ನೇ  ಹೇಳುತ್ತಾನೆ ಮತ್ತು ಎಲ್ಲಾ ವಿರೋಧ ಪಕ್ಷದ ನಾಯಕರಿಗೆ ಬೇರೆ ಏನೂ ಮಾಡಲು ಸಾಧ್ಯವಿಲ್ಲದಂತಾಗಿದೆ.  ಈ ಕಾರಣಕ್ಕೆ ಅವರು  ರಾಹುಲ್ ರಾಜಕೀಯ ದ್ವೇಷಕ್ಕೆ ಬಲಿಯಾಗಿದ್ದಾರೆ ಎಂದು ಹೇಳಲು ಶುರು ಮಾಡಿದ್ದಾರೆ  ಎಂದು ಲಲಿತ್ ಮೋದಿ ಹೇಳಿದ್ದಾರೆ.  

Tap to resize

Latest Videos

ರಾಹುಲ್ ಗಾಂಧಿ ತಮ್ಮ ಹೇಳಿಕೆಗಾಗಿ ಲಂಡನ್‌ನ ಕೋರ್ಟ್ ಕಟೆ ಕಟೆ ಏರುವಂತೆ ಮಾಡುತ್ತೇನೆ. ಅವರು ಕೆಲವು ಸ್ಪಷ್ಟವಾದ ಸಾಕ್ಷ್ಯಗಳೊಂದಿಗೆ ಬರಲಿದ್ದಾರೆ.  ಆತನನ್ನೇ ಆತ ಮೂರ್ಖನಾಗಿಸಿಕೊಳ್ಳುವುದನ್ನು  ನೋಡಲು ನಾನು ತುದಿಗಾಲಲ್ಲಿ ನಿಂತಿದ್ದೇನೆ ಎಂದು ಲಲಿತ್ ಮೋದಿ ಹೇಳಿದ್ದಾರೆ.  ಹಲವರು ಕಾಂಗ್ರೆಸ್ ನಾಯಕರನ್ನು ತಮ್ಮ ಟ್ವಿಟ್‌ನಲ್ಲಿ ಟ್ಯಾಗ್ ಮಾಡಿರುವ ಲಲಿತ್ ಮೋದಿ, ಅವರೆಲ್ಲರೂ ವಿದೇಶದಲ್ಲಿ ಆಸ್ತಿ ಹೊಂದಿದ್ದಾರೆ ಎಂದು ಆರೋಪಿಸಿದ್ದಾರೆ. ನಾನು ಅದರ ವಿಳಾಸ ಹಾಗೂ ಫೋಟೋಗಳನ್ನು ಕೂಡ ಕಳುಹಿಸಬಲ್ಲೆ,  ಭಾರತದ ಜನರನ್ನು ಇವರು ಮೋಸ ಮಾಡುವುದು ಬೇಡ ಎಂದು ಲಲಿತ್ ಟ್ವಿಟ್ ಮಾಡಿದ್ದಾರೆ. 

ರಾಹುಲ್ ಗಾಂಧಿ ಅನರ್ಹತೆಯಿಂದ ತೆರವಾಗಿರುವ ವಯನಾಡು ಉಪ ಚುನಾವಣೆ ಕುತೂಹಲಕ್ಕೆ ಆಯೋಗ ಉತ್ತರ!

ಕಳೆದ 15 ವರ್ಷಗಳಲ್ಲಿ ನಾನು ತೆಗೆದುಕೊಂಡಿದ್ದೇನೆ ಎನ್ನಲಾದ ಒಂದು ಪೈಸೆಯ ಆರೋಪವೂ ಸಾಬೀತಾಗಿಲ್ಲ. ಆದರೆ 100 ಶತಕೋಟಿ ಡಾಲರ್‌ಗಳನ್ನು ಗಳಿಸಿದ ಶ್ರೇಷ್ಠ ಕ್ರೀಡಾಕೂಟವನ್ನು ನಾನು ರಚಿಸಿದ್ದೇನೆ ಎಂಬುದು ಸ್ಪಷ್ಟವಾಗಿ ಸಾಬೀತಾಗಿದೆ. 1950 ರ ದಶಕದ ಆರಂಭದಿಂದಲೂ ಮೋದಿ ಕುಟುಂಬವು  ನಮ್ಮ ದೇಶಕ್ಕಾಗಿ ಹೆಚ್ಚಿನದನ್ನು ಮಾಡಿದೆ ಎಂಬುದನ್ನು ಒಬ್ಬ ಕಾಂಗ್ರೆಸ್ ನಾಯಕನೂ ಮರೆಯಬಾರದು. ನಾನು ಕೂಡ ಅವರು ಕನಸು ಕಾಣುವುದಕ್ಕಿಂತ ಹೆಚ್ಚಿನದನ್ನು ಮಾಡಿದ್ದೇನೆ ಎಂದು ಲಲಿತ್ ಹೇಳಿದ್ದಾರೆ. 

2019ರಲ್ಲಿ ಕರ್ನಾಟಕದ ಕೋಲಾರದಲ್ಲಿ ನಡೆದ ಚುನಾವಣಾ ಸಮಾವೇಶದಲ್ಲಿ ನೀಡಿದ ಈ ಹೇಳಿಕೆ ಈಗ ರಾಹುಲ್ ಗಾಂಧಿಯನ್ನು ಸಂಕಷ್ಟಕ್ಕೆ ಸಿಲುಕಿಸಿದೆ. ರಾಹುಲ್ ಹೇಳಿಕೆ ಖಂಡಿಸಿ ಗುಜರಾತ್‌ನ ಸೂರತ್‌ ಕೋರ್ಟ್‌ನಲ್ಲಿ ಪೂರ್ಣೇಶ್ ಮೋದಿ ಎಂಬುವವರು ಪ್ರಕರಣ ದಾಖಲಿಸಿದ್ದರು. ಈ ಪ್ರಕರಣದ ವಿಚಾರಣೆ ನಡೆಸಿದ ಕೋರ್ಟ್‌  ರಾಹುಲ್ ಗಾಂಧಿಗೆ  ಎರಡು ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.  ಈ ತೀರ್ಪು ಬಂದ ಮಾರನೇ ದಿನವೇ  ಲೋಕಸಭಾ ಸಂಸತ್ ಸ್ಥಾನದಿಂದ ರಾಹುಲ್ ಗಾಂಧಿಯನ್ನು ಅಮಾನತುಗೊಳಿಸಲಾಗಿದೆ. ಜೊತೆಗೆ ಸರ್ಕಾರಿ ಬಂಗಲೆ ತೊರೆಯುವಂತೆಯೂ ನೋಟೀಸ್ ನೀಡಲಾಗಿದೆ. 

ರಾಹುಲ್ ಅನರ್ಹತೆ ವಿಚಾರ: ಬಿಜೆಪಿ ಸರ್ಕಾರದ ವಿರುದ್ಧ ಹೋರಾಟ ಹಾದಿ ಹಿಡಿದ ಕಾಂಗ್ರೆಸ್!

i see just about every Tom dick and gandhi associates again and again saying i ama fugitive of justice. why ?How?and when was i to date ever convicted of same. unlike aka now an ordinary citizen saying it and it seems one and all oposition leaders have nothing…

— Lalit Kumar Modi (@LalitKModi)

 

click me!