ರಾಮನವಮಿಗೆ ದಿನ ಮೊದಲು ಮಹಾರಾಷ್ಟ್ರದಲ್ಲಿ ಎರಡು ಗುಂಪುಗಳ ಮಧ್ಯೆ ಘರ್ಷಣೆ ನಡೆದಿದ್ದು, ಈ ಹಿಂಸಾಚಾರಲ್ಲಿ ಪೊಲೀಸ್ ಕಾರಿಗೆ ದುಷ್ಕರ್ಮಿಗಳು ಬೆಂಕಿ ಹಚ್ಚಿದ್ದಾರೆ.
ಮುಂಬೈ: ಇಂದು ದೇಶಾದ್ಯಂತ ಮರ್ಯಾದಾ ಪುರುಷೋತ್ತಮ ಶ್ರೀರಾಮನ ಜನ್ಮದಿನವನ್ನು ಹಿಂದೂಗಳು ಶ್ರದ್ಧಾಭಕ್ತಿಯಿಂದ ದೇಶಾದ್ಯಂತ ಆಚರಿಸುತ್ತಿದ್ದಾರೆ. ರಾಮನವಮಿ ಹಿನ್ನೆಲೆಯಲ್ಲಿ ದೇಶಾದ್ಯಂತ ದೇಗುಲಗಳಲ್ಲಿ ಶ್ರೀರಾಮನಿಗೆ ವಿಶೇಷ ಪೂಜೆ ಮಾಡಲಾಗುತ್ತಿದೆ. ಆದರೆ ರಾಮನವಮಿಗೆ ದಿನ ಮೊದಲು ಮಹಾರಾಷ್ಟ್ರದಲ್ಲಿ ಎರಡು ಗುಂಪುಗಳ ಮಧ್ಯೆ ಘರ್ಷಣೆ ನಡೆದಿದ್ದು, ಈ ಹಿಂಸಾಚಾರಲ್ಲಿ ಪೊಲೀಸ್ ಕಾರಿಗೆ ದುಷ್ಕರ್ಮಿಗಳು ಬೆಂಕಿ ಹಚ್ಚಿದ್ದಾರೆ. ಮುಸ್ಲಿಮರ ಪವಿತ್ರ ರಂಜಾನ್ ಮಾಸದ ಆಚರಣೆಯೂ ಇದೇ ತಿಂಗಳಲ್ಲಿ ನಡೆಯುತ್ತಿದ್ದು, ಜೊತೆ ಜೊತೆಗೆ ರಾಮನವಮಿಯೂ ಬಂದಿದೆ. ಈ ಹಿನ್ನೆಲೆಯಲ್ಲಿ ಕೋಮು ಘರ್ಷಣೆ ಸಂಭವಿಸದಂತೆ ಸ್ಥಳದಲ್ಲಿ ಭಾರಿ ಬಿಗಿ ಭದ್ರತೆ ಏರ್ಪಡಿಸಲಾಗಿದೆ.
ಮಹಾರಾಷ್ಟ್ರದ (Maharashtra) ಔರಂಗಾಬಾದ್‌ನಲ್ಲಿ (Aurangabad) ನಿನ್ನೆ ಸಂಜೆ ಈ ಘರ್ಷಣೆ ನಡೆದಿದ್ದು , ಎರಡು ಗುಂಪುಗಳ ತರುಣರ ಮಧ್ಯೆ ಮಾತಿನ ಚಕಮಕಿ ನಡೆದು ಅದು ವಿಕೋಪಕ್ಕೆ ತಿರುಗಿದೆ. ಸ್ಥಳದಲ್ಲಿ ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.
500 ರಿಂದ 600 ರಷ್ಟಿದ್ದ ಜನರು ಈ ಗಲಾಟೆಯಲ್ಲಿ ಭಾಗಿಯಾಗಿದ್ದು, ಪೊಲೀಸ್ ವಾಹನದ ಮೇಲೆ ದಾಳಿ ಮಾಡಿದವರು ಯಾರೆಂದು ಇನ್ನು ಗುರುತಿಸಿಲ್ಲ. ಔರಂಗಾಬಾದ್‌ನ ಕಿರದ್ಪುರದಲ್ಲಿ ಈ ಘಟನೆ ನಡೆದಿದ್ದು, ಈ ಪ್ರದೇಶದಲ್ಲಿ ಪ್ರಸಿದ್ಧವಾದ ಶ್ರೀರಾಮನ (Ram temple) ದೇಗುಲವಿದೆ ಎಂದು ಪೊಲೀಸ್ ಕಮೀಷನರ್ (Police Commissioner) ನಿಖಿಲ್ ಗುಪ್ತಾ (Nikhil Gupta) ಹೇಳಿದ್ದಾರೆ. ಯುವಕರ ಮಧ್ಯೆ ಜಗಳ ಆರಂಭವಾದ ಬಳಿಕ ಈ ಘಟನೆ ನಡೆದಿದೆ. ಆರೋಪಿಗಳ ಬಂಧನಕ್ಕೆ ಬಲೆ ಬೀಸಲಾಗಿದೆ. ಸುಮಾರು ಒಂದು ಗಂಟೆಗಳ ಕಾಲ ಈ ಘರ್ಷಣೆ ನಡೆದಿದ್ದು, ಘಟನೆಯಲ್ಲಿ ಅಂದಾಜು ಆರು ವಾಹನಗಳು ಜಖಂಗೊಂಡಿವೆ ಎಂದು ಗುಪ್ತಾ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಹುಲಿಹೈದರ ಇನ್ನೂ ಬೂದಿ ಮುಚ್ಚಿದ ಕೆಂಡ: ಗ್ರಾಮದಲ್ಲಿ ಸ್ಮಶಾನ ಮೌನ
ಘಟನೆಯಲ್ಲಿ ಸುಟ್ಟು ಕರಕಲಾದ ವಾಹನಗಳನ್ನು ಸ್ಥಳದಿಂದ ತೆಗೆಯಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಇದುವರೆಗೆ ಯಾರನ್ನೂ ಬಂಧಿಸಿಲ್ಲ. ಗಲಭೆಗೆ ಕಾರಣರಾದ ಆರೋಪಿಗಳ ಬಂಧನಕ್ಕಾಗಿ 10 ಪೊಲೀಸ್ ತಂಡ ರಚನೆಯಾಗಿದೆ. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ವಿಡಿಯೋದಲ್ಲಿ ಸ್ಥಳೀಯ ಸಂಸ್ ಇಮ್ತಿಯಾಜ್ ಜಲೀಲ್ (Imtiyaz Jaleel) ರಾಜ್ಯ ಬಿಜೆಪಿ ಸಚಿವ ಅತುಲ್ ಸಾವೆ (Atul Save) ಹಾಗೂ ಇತರರು ಮಧ್ಯಪ್ರವೇಶಿಸಿ ಎರಡು ಗುಂಪುಗಳ ಮಧ್ಯೆ ಶಾಂತಿ ಕಾಪಾಡಲು ಯತ್ನಿಸುತ್ತಿರುವುದನ್ನು ಕಾಣಬಹುದಾಗಿದೆ. ಘೋಷಣೆಗೆ ಸಂಬಂಧಿಸಿದಂತೆ ಎರಡು ಗುಂಪುಗಳ ಮಧ್ಯೆ ಗಲಾಟೆ ಶುರುವಾಗಿದ್ದು, ನಂತರ ಇದುವೇ ಕಾರಣಕ್ಕೆ ನೂರಾರು ಜನ ಸ್ಥಳದಲ್ಲಿ ಸೇರಿ ಕಲ್ಲು ತೂರಾಟ ನಡೆಸಲು ಶುರು ಮಾಡಿದ್ದಾರೆ ಎಂದು ಜಲೀಲ್ ಹೇಳಿದ್ದು, ಈತ ಅಸದುದ್ದೀನ್ ಒವೈಸಿಯ (Asaduddin Owaisi) ಎಐಎಂಐಎಂ ( AIMIM party) ಪಕ್ಷದ ಸಂಸದರಾಗಿದ್ದಾರೆ.
ಕೊಪ್ಪಳದ ಕನಕಗಿರಿ ತಾಲೂಕಿನಲ್ಲಿ ಗುಂಪು ಘರ್ಷಣೆ: ಇಬ್ಬರ ಸಾವು
Maharashtra | A clash broke out between two groups in Chhatrapati Sambhajinagar's Kiradpura area
Stones were pelted, some private & police vehicles were set on fire. Police used force to disperse the people and now the situation is peaceful. Police will take strict action… pic.twitter.com/u9qa5XYyPk
AIMIM Aurangabad MP Sahab himself went to the spot Ram Mandir Kiradpura where some false news was spread that some miscreants had attacked the temple, he appealed not to believe on any rumors and both communities to maintain peace in the city. pic.twitter.com/2ZAgUtAaCI
— Mohammed Naseeruddin (@naseerCorpGhmc)