
ಚೆನ್ನೈ(ಅ.27): ತಮಿಳುನಾಡು ಬಿಜೆಪಿ ನಾಯಕಿ ಖುಷ್ಬೂ ಸುಂದರ್‌ರನ್ನು ಮಮಲಪುರಂ ಪೊಲೀಸರು ಬಂಧಿಸಿದ್ದಾರೆ. ತಮಿಳುನಾಡಿನ ಸಂಸದ ಥೋಲ್ ತಿರುಮಾವಲನ್ ಮಹಿಳೆಯರ ಕುರಿತು ನೀಡಿದ್ದ ಕೀಳು ಹೇಳಿಕೆ ವಿರೋಧಿಸಿ ಬಿಜೆಪಿ ನಾಯಕರು ಪ್ರತಿಭಟನೆ ನಡೆಸುತ್ತಿದ್ದರು. ಹೀಗಿರುವಾಗ ಪೊಲೀಸರು ಖುಷ್ಬೂ ಸುಂದರ್ ಹಾಗೂ 16 ಬಿಜೆಪಿ ಕಾರ್ಯಕರ್ತರನ್ನು ಮುತ್ತಕಾಡು ಎಂಬಲ್ಲಿ ಬಂಧಿಸಿ ವಾಹನದಲ್ಲಿ ಕರೆದುಕೊಂಡು ಹೋಗಿದ್ದಾರೆ.
ವಿಡುತಲೈ ಚಿರುಥೈಗಲ್ ಕಡ್ಚಿ ಪಕ್ಷದ ಮುಖ್ಯಸ್ಥ ಹಾಗೂ ತಮಿಳುನಾಡಿನ ಸಂಸದರಾಗಿರುವ ಥೋಲ್ ತಿರುಮಾವಲನ್ ಹಿಂದೂ ಮಹಿಳೆಯರಿಗೆ ಅವಮಾನ ಮಾಡುವ ಹೇಳಿಕೆ ನೀಡಿದ್ದರು. ಇದನ್ನು ವಿರೋಧಿಸಿ ಬಿಜೆಪಿ ನಾಯಕಿ ಖುಷ್ಬೂ ಸುಂದರ್ ಮಂಗಳವಾರ ಮುಂಜಾನೆ ಅವರ ನಿವಾಸದ ಮುಂದೆ ಪ್ರತಿಭಟನೆಗೆ ತೆರಳಿದ್ದರು.
ಇದೆ ವೇಳೆ ವಿಡುತಲೈ ಚಿರುಥೈಗಲ್ ಕಡ್ಚಿ ಪಕ್ಷದ ಕಾರ್ಯಕರ್ತರು ಕೂಡ ಸಂಸದ ತಿರುಮಾವಲನ್ ಪರವಾಗಿ ಹಾಗೂ ಬಿಜೆಪಿ ವಿರುದ್ಧ ತಿರುಮಾವಲನ್ ನಿವಾಸದ ಮುಂದೆ ಪ್ರತಿಭಟನೆ ನಡೆಸುತ್ತಿದ್ದರು. ಈ ಹಿನ್ನೆಲೆ ಗಲಭೆ ಸೃಷ್ಟಿಯಾಗುವ ಸಾಧ್ಯತೆಯನ್ನು ಅರಿತ ಪೊಲೀಸರು ಮುತ್ತಕಾಡು ಎಂಬಲ್ಲಿ ಖೂಷ್ಬು ಅವರ ಕಾರು ತಡೆದು ಅನುಮತಿ ಪತ್ರ ಕೇಳಿದ್ದಾರೆ. ಇನ್ನು ಅನುಮತಿ ಇಲ್ಲವೆಂದು ಖೂಷ್ಬು ಹೇಳಿದಾಗ ಅವರನ್ನು ಹಾಗೂ ಅವರ ಜೊತೆ ಬಂದಿದ್ದ ಬಿಜೆಪಿ ಕಾರ್ಯಕರ್ತರನ್ನು ಬಂಧಿಸಿದ ಪೊಲೀಸರು ವಾಹನದಲ್ಲಿ ಕರೆದುಕೊಂಡು ಹೋಗಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ