
ಪಟನಾ(ಅ.27): ಬಿಹಾರ ವಿಧಾನಸಭೆ ಚುನಾವಣೆ ಮೊದಲ ಚರಣಕ್ಕೆ ಇನ್ನೇನು 2 ದಿನ ಉಳಿದಿರುವಾಗ ಆಡಳಿತಾರೂಢ ಜೆಡಿಯು ಮಿತ್ರಪಕ್ಷವಾದ ಬಿಜೆಪಿಯು ಎನ್‌ಡಿಎ ಮುಖ್ಯಮಂತ್ರಿ ಅಭ್ಯರ್ಥಿಯಾದ ಜೆಡಿಯುನ ನಿತೀಶ್ ಕುಮಾರ್ ಬದಲು ಕೇವಲ ಪ್ರಧಾನಿ ನರೇಂದ್ರ ಮೋದಿ ಅವರ ಚಿತ್ರ ಇರುವ ಪೋಸ್ಟರ್ ಬಿಡುಗಡೆ ಮಾಡಿದೆ. ಇದು ರಾಜಕೀಯ ವಲಯದಲ್ಲಿ ಹುಬ್ಬೇರಿಸಿದೆ.
‘ನಿತೀಶ್ ಬದಲು ಕೇವಲ ಮೋದಿ ಮುಖವನ್ನು ತೋರಿಸಿ ಮತ ಕೇಳುವ ಬಿಜೆಪಿ ತಂತ್ರಗಾರಿಕೆ ಇದು’ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.
ಇದಲ್ಲದೆ, ಈ ಪೋಸ್ಟರ್‌ಗಳಲ್ಲಿ ಕೇವಲ ಬಿಜೆಪಿ ಸ್ಪರ್ಧಿಸಿರುವ ಕ್ಷೇತ್ರಗಳನ್ನು ಕಮಲ ಚಿಹ್ನೆ ತೋರಿಸಿ ಪ್ರದರ್ಶಿಸಲಾಗಿದೆಯೇ ವಿನಾ ಜೆಡಿಯು ಸ್ಪರ್ಧಿಸಿದ ಕ್ಷೇತ್ರಗಳ ಉಲ್ಲೇಖವೇ ಇಲ್ಲ. ಬಿಜೆಪಿ ಬಿಡುಗಡೆ ಮಾಡಿರುವ ಪೂರ್ತಿ ಪುಟದ ಪತ್ರಿಕಾ ಜಾಹೀರಾತಿನಲ್ಲೂ ಇದೇ ಕತೆ. ಆದರೆ ಇದಕ್ಕೆ ವಿರುದ್ಧವಾಗಿ ಜೆಡಿಯು ಬಿಡುಗಡೆ ಮಾಡಿದ ಪೋಸ್ಟರ್‌ಗಳಲ್ಲಿ ಮೋದಿ ಹಾಗೂ ನಿತೀಶ್- ಇಬ್ಬರ ಛಾಯಾಚಿತ್ರಗಳು ಇವೆ.
ಅಧಿಕಾರಕ್ಕೆ ಬಂದರೆ, ವಿಧಾನಸಭೆ ಚುನಾವಣೆ ಫಲಿತಾಂಶದ ನಂತರ ನಿತೀಶ್ ಬದಲು ಬೇರೊಬ್ಬರನ್ನು ಮುಖ್ಯಮಂತ್ರಿಯಾಗಿ ಬಿಜೆಪಿ ಹೆಸರಿಸಬಹುದು ಎಂಬ ಗುಸುಗುಸು ಇದೆ. ಇದರ ನಡುವೆಯೇ ಈ ವಿದ್ಯಮಾನ ನಡೆದಿದೆ.
ಈ ಬಗ್ಗೆ ಬಿಜೆಪಿ ಮುಖಂಡರೊಬ್ಬರನ್ನು ಪ್ರಶ್ನಿಸಿದಾಗ, ‘ನಾನೇನೂ ಹೇಳಲ್ಲ. ಇದು ಪಕ್ಷದ ಆಂತರಿಕ ವಿಚಾರ’ ಎಂದು ಹೇಳಿ ಜಾರಿಕೊಂಡರು. ಆದರೆ ಜೆಡಿಯು ನಾಯಕೊಬ್ಬರು, ‘ಏನೂ ಹೇಳಲು ಆಗದು. ಆದರೆ ಬಿಜೆಪಿ ನಾಯಕರು ಸ್ಥಿತಿ ಬಿಗಡಾಯಿಸಿದ್ದಾರೆ ಎನ್ನಬಹುದಾ?’ ಎಂದು ಪರೋಕ್ಷ ಅಸಮಾಧಾನ ವ್ಯಕ್ತಪಡಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ