ಭಾರತದ ಮೊಟ್ಟ ಮೊದಲ ಏರ್ ಟ್ಯಾಕ್ಸಿ ಸೇವೆ ಆರಂಭ, ಎಲ್ಲಿಂದ ಎಲ್ಲಿಗೆ?

By Suvarna NewsFirst Published Jan 15, 2021, 10:53 PM IST
Highlights

ಕೇಂದ್ರ ಸರ್ಕಾರದ ಉಡಾನ್ ಯೋಜನೆ ಅಡಿ ಭಾರತದ ಮೊಟ್ಟ ಮೊದಲ ಟ್ಯಾಕ್ಸಿ ಸೇವೆ ಆರಂಭಗೊಂಡಿದೆ. ಇದೀಗ ದೇಶದ ಹಲವು ಭಾಗಗಳಿಗೆ ವಿಸ್ತರಣೆಯಾಗಲಿದೆ. ಈ ಕುರಿತ ಹೆಚ್ಚಿನ ವಿವರ ಇಲ್ಲಿದೆ.

ಚಂಡೀಘಡ(ಜ.15): ಕಾರ್ ಟ್ಯಾಕ್ಸಿ,  ವ್ಯಾನ್ ಟ್ಯಾಕ್ಸಿ ಸೇರಿದಂತೆ ಹಲವು ಟ್ಯಾಕ್ಸಿ ಸೇವೆಗಳು ಭಾರತದೆಲ್ಲೆಡೆ ಲಭ್ಯವಿದೆ. ಇದೀಗ ಭಾರತದಲ್ಲಿ ಮೊಟ್ಟ ಮೊದಲ ಬಾರಿಗೆ ಏರ್ ಟ್ಯಾಕ್ಸಿ ಆರಂಭಿಸಲಾಗಿದೆ. ಸಣ್ಣ ವಿಮಾನ ಈ ಸೇವೆಗೆ ಬಳಸಲಾಗುತ್ತಿದೆ. ಕೇಂದ್ರ ಸರ್ಕಾರದ ಉಡಾನ್ ಯೋಜನೆ ಅಡಿಯಲ್ಲಿ ಈ ಸೇವೆ ಚಂಡೀಘಡದಲ್ಲಿ ಆರಂಭಗೊಂಡಿದೆ.

ಲೇಡಿ ಪೈಲಟ್ಸ್‌ಗಳಿಂದ  ಅತಿ ದೂರದ ರೂಟ್ ಕವರ್..ಎಲ್ಲಿಂದ -ಬೆಂಗಳೂರಿಗೆ?.

ಮೊದಲ ಹಂತದಲ್ಲಿ ಚಂಢೀಘಡದಿಂದ ಹಿಸಾರ್‌ ಪ್ರಯಾಣಕ್ಕೆ ಏರ್ ಟ್ಯಾಕ್ಸಿ ಸೇವೆ ಆರಂಭಗೊಂಡಿದೆ. ಹರ್ಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಕಟ್ಟರ್ ನೂತನ ಏರ್ ಟ್ಯಾಕ್ಸಿ ಸೇವೆಯನ್ನು ಉದ್ಘಾಟನೆ ಮಾಡಿದ್ದಾರೆ. ಹರ್ಯಾಣ ಸರ್ಕಾರದ ಯೋಜನೆ ಇದಾಗಿದ್ದು, ಶೀಘ್ರದಲ್ಲೇ ಹಿಮಾಚಲ ಪ್ರದೇಶ ಸೇರಿದೆಂತೆ ಹಲವೆಡೆ ವಿಸ್ತರಣೆಗೊಳ್ಳುತ್ತಿದೆ.

4 ಸೀಟಿನ ಸಣ್ಣ ವಿಮಾನ ಏರ್ ಟ್ಯಾಕ್ಸಿ ಸೇವೆಗೆ ಬಳಸಲಾಗುತ್ತಿದೆ. ಮುಂದಿನ ವಾರ ಹಿಸಾರ್‌ನಿಂದ ಡೆಹ್ರಡೂನ್, ಹಿಸಾರ್‌ನಿಂದ ಧರ್ಮಶಾಲಾ, ಕುಲು, ಮನಾಲಿ ಸೇರಿದಂತೆ ಹಲವು ಪ್ರದೇಶಗಳಿಗೆ ಏರ್ ಟ್ಯಾಕ್ಸಿ ಸೇವೆ ವಿಸ್ತರಣೆಯಾಗಲಿದೆ ಎಂದು ಮನೋಹರ್ ಲಾಲ್ ಕಟ್ಟರ್ ಹೇಳಿದ್ದಾರೆ.

click me!